ವಾಹನಗಳಲ್ಲಿ ಶೇ.100 ಎಥೆನಾಲ್: ರೈತರಿಗೆ ಲಾಭ ನೆಪ; ಗಡ್ಕರಿ ಮಕ್ಕಳ ಕಂಪನಿಗೆ ಲಾಟರಿ!

Date:

ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ. “ಇದು ರೈತರ ಆದಾಯ ಹೆಚ್ಚಿಸಲಿದೆ” ಎಂದು ಪದೇ ಪದೇ ನಿತಿನ್ ಗಡ್ಕರಿ ಹೇಳುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ರೈತರಿಗೆ ಲಾಭ ಎನ್ನುವುದು ಬರೀ ನೆಪ, ಅವರ ಮಗನ ಕಂಪನಿಗಳಿಗೆ ಲಾಭ ಮಾಡಿಕೊಡುವ ಹಿತಾಸಕ್ತಿ ಇದರ ಹಿಂದೆ ಅಡಗಿರುವುದು ಸ್ಪಷ್ಟ.

- Advertisement -

ದೇಶದಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಆಮದು ವೆಚ್ಚ ತಗ್ಗಿಸುವ ಉದ್ದೇಶದಿಂದ ಶೇಕಡ 100ರಷ್ಟು ಎಥೆನಾಲ್ ಚಾಲಿತ ವಾಹನಗಳನ್ನು ಪರಿಚಯಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಈ ಯೋಜನೆಯು ಕಬ್ಬು ಬೆಳೆಯುವ ರೈತರನ್ನು ಇಂಧನ ನೀಡುವವರನ್ನಾಗಿ ಪರಿವರ್ತಿಸಲಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಈ ಇಂಧನ ನೀತಿಯ ಆಳದಲ್ಲಿ ರೈತರ ಕಲ್ಯಾಣಕ್ಕಿಂತ ಹೆಚ್ಚಾಗಿ ಸಚಿವರ ಕುಟುಂಬದ ಒಡೆತನದ ಉದ್ಯಮಗಳಿಗೆ ದೊಡ್ಡ ಮಟ್ಟದ ಲಾಭ ಮಾಡಿಕೊಡುವುದು ಅಡಗಿದೆ ಎಂಬ ಗಂಭೀರ ಆರೋಪಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಇದನ್ನು ಓದಿದ್ದೀರಾ? ವಾಹನಗಳಿಗೆ 100% ಎಥೆನಾಲ್ ಬಳಸಲು ಕೇಂದ್ರ ಅಸ್ತು: ಆಹಾರ ಭದ್ರತೆ ಸವಾಲು

ನಿತಿನ್ ಗಡ್ಕರಿಯೇ ಸ್ಥಾಪಿಸಿದ ಕಂಪನಿ!

ನಿತಿನ್ ಗಡ್ಕರಿ ಅವರ ಕುಟುಂಬವು ಮಹಾರಾಷ್ಟ್ರದ ನಾಗಪುರ ಮೂಲದ ‘ಪೂರ್ತಿ ಪವರ್ ಅಂಡ್ ಶುಗರ್ಸ್ ಲಿಮಿಟೆಡ್’ (ಪ್ರಸ್ತುತ ಪೂರ್ತಿ ಗ್ರೂಪ್) ಸಂಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಅಷ್ಟಕ್ಕೂ ಈ ಕಂಪನಿಯನ್ನು ಸ್ಥಾಪಿಸಿದವರು ಸ್ವತಃ ನಿತಿನ್ ಗಡ್ಕರಿ ಅವರೇ! ಪ್ರಸ್ತುತ ಅವರ ಮಕ್ಕಳಾದ ನಿಖಿಲ್ ಗಡ್ಕರಿ ಮತ್ತು ಸಾರಂಗ್ ಗಡ್ಕರಿ ಇದರ ನಿರ್ವಹಣೆ ಮಾಡುತ್ತಿದ್ದಾರೆ.

ಪೂರ್ತಿ ಗ್ರೂಪ್ ಕೇವಲ ಸಕ್ಕರೆ ಕಾರ್ಖಾನೆಯಾಗಿರದೆ, ಎಥೆನಾಲ್ ಉತ್ಪಾದನೆ ಮತ್ತು ಜೈವಿಕ ಇಂಧನ (Bio-fuels) ವಲಯದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ಸಚಿವರ ಕುಟುಂಬವೇ ಎಥೆನಾಲ್ ಉತ್ಪಾದನಾ ಉದ್ಯಮದಲ್ಲಿ ಇರುವಾಗ, ಅದೇ ಇಂಧನವನ್ನು ಕಡ್ಡಾಯಗೊಳಿಸುವ ಅಥವಾ ಪ್ರೋತ್ಸಾಹಿಸುವ ಸರ್ಕಾರಿ ನೀತಿಗಳನ್ನು ರೂಪಿಸುವುದು ನೈತಿಕವಾಗಿ ಸರಿಯಲ್ಲ. ಅಷ್ಟು ಮಾತ್ರವಲ್ಲದೆ ಇದು ತಮ್ಮ ಕುಟುಂಬಕ್ಕೆ ಲಾಭ ಮಾಡಿಕೊಡುವ ಉದ್ದೇಶ ಎಂಬುದು ಸ್ಪಷ್ಟ.

ದೇಶಾದ್ಯಂತ ಎಥೆನಾಲ್ ಬೇಡಿಕೆ ಹೆಚ್ಚಾದಂತೆ, ಗಡ್ಕರಿ ಅವರ ಕುಟುಂಬದ ಉದ್ಯಮ ಸೇರಿದಂತೆ ದೇಶದ ಪ್ರಮುಖ ಸಕ್ಕರೆ ಮತ್ತು ಬಯೋ-ಫ್ಯುಯೆಲ್ ಕಂಪನಿಗಳ ಲಾಭಾಂಶವೂ ಖಂಡಿತವಾಗಿ ಗಗನಕ್ಕೇರುತ್ತದೆ. ಇದು ರೈತರ ಹೆಸರಿನಲ್ಲಿ ತಮ್ಮ ಕುಟುಂಬಕ್ಕೆ ಗಡ್ಕರಿ ನೀಡುವ ಲಾಟರಿ ಅಲ್ಲವೇ?

ಇದನ್ನು ಓದಿದ್ದೀರಾ? ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಅಷ್ಟಕ್ಕೂ ಎಥೆನಾಲ್ ಇಂಧನಕ್ಕೆ ಸರ್ಕಾರ ನೀಡುವ ಸಬ್ಸಿಡಿ ಮತ್ತು ಉತ್ತೇಜನಗಳ ನೇರ ಲಾಭ ಸಿಗುವುದು ಸಕ್ಕರೆ ಕಾರ್ಖಾನೆಗಳು ಮತ್ತು ಎಥೆನಾಲ್ ಡಿಸ್ಟಿಲರಿಗಳಿಗೆ ಹೊರತು ಸಣ್ಣ ರೈತರಿಗಲ್ಲ. ರೈತರಿಗೆ ಕಬ್ಬಿನ ಬಾಕಿ ಹಣ ಸಿಗುವುದೇ ಕಷ್ಟವಾಗಿರುವಾಗ, ಎಥೆನಾಲ್‌ನಿಂದ ಬರುವ ಬೃಹತ್ ಲಾಭ ಕಾರ್ಖಾನೆಗಳ ಮಾಲೀಕರ ಪಾಲಾಗುತ್ತದೆ.

ಇನ್ನು ಎಥೆನಾಲ್ ಬಳಕೆ ಹೆಚ್ಚಾದಂತೆ ಆಹಾರ ಭದ್ರತೆಯ ಸವಾಲೂ ಎದುರಾಗುತ್ತದೆ. ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ, ಬಿದಿರು ಮತ್ತು ಹೆಚ್ಚುವರಿ ಧಾನ್ಯಗಳಿಂದ ಉತ್ಪಾದಿಸುವುದರಿಂದ, ದೇಶದ ರೈತರ ಆದಾಯ ಹೆಚ್ಚಾಗಲಿದೆ ಮತ್ತು ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ. ಆದರೆ ಇಂಧನಕ್ಕಾಗಿ ಇವುಗಳನ್ನು ಭಾರಿ ಪ್ರಮಾಣದಲ್ಲಿ ಬಳಸಲಾರಂಭಿಸಿದರೆ, ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಬಹುದು ಮತ್ತು ಕಬ್ಬು, ಜೋಳದಂತಹ ನಿತ್ಯೋಪಯೋಗಿ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಬಹುದು ಎಂಬ ಆತಂಕವೂ ಇದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆ: ಅನ್ನಪೂರ್ಣ ಹೆಸರು ಮುನ್ನೆಲೆಗೆ!

ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು,...