Exit Poll | ಅಸ್ಸಾಂ, ಬಂಗಾಳ, ಕೇರಳ, ಪುದುಚೆರಿ, ತಮಿಳುನಾಡು: ಗದ್ದುಗೆ ಯಾರಿಗೆ?

Date:

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಪುದುಚೆರಿ, ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿದ್ದು, ಇಂದು ಎಕ್ಸಿಟ್ ಪೋಲ್ ಬಿಡುಗಡೆ ಮಾಡಲಾಗಿದೆ. ಅಸ್ಸಾಂ, ಪುದುಚೆರಿಯಲ್ಲಿ ಎನ್‌ಡಿಎ ಗೆದ್ದರೆ, ಕೇರಳವು ಯುಡಿಎಫ್ ಪಾಲಾಗಲಿದೆ. ತಮಿಳುನಾಡು ಡಿಎಂಕೆ ತೆಕ್ಕೆಗೆ ಸೇರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. ಪಶ್ಚಿಮ ಬಂಗಾಳ ಎಕ್ಸಿಟ್ ಪೋಲ್‌ಗಳು ಮಿಶ್ರವಾಗಿದೆ. ಟಿಎಂಸಿ ಕೈಯಿಂದ ಅಧಿಕಾರ ಜಾರಿ ಬಿಜೆಪಿ ಪಾಲಾಗಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ.

- Advertisement -

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡದಿದೆ. ಪಶ್ಚಿಮ ಬಂಗಾಳದಲ್ಲಿ, ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಏಪ್ರಿಲ್ 23ರಂದು 152 ಸ್ಥಾನಗಳಿಗೆ ಮೊದಲ ಹಂತ ನಡೆದಿದ್ದು, ಏಪ್ರಿಲ್ 29 ರಂದು 142 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ಇದಾದ ಬೆನ್ನಲ್ಲೇ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಕ್ಸಿಟ್ ಪೋಲ್‌ಗಳನ್ನು ಹಲವು ಸಂಸ್ಥೆಗಳು ಬಿಡುಗಡೆ ಮಾಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಇದನ್ನು ಓದಿದ್ದೀರಾ? ‘ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಸಮೀಕ್ಷೆ’: ರಾಹುಲ್ ಗಾಂಧಿ

ಕೇರಳ ಎಕ್ಸಿಟ್ ಪೋಲ್

ಆಕ್ಸಿಸ್ ಮೈ ಇಂಡಿಯಾ, ಮ್ಯಾಟ್ರಿಜ್, P-MARQ ಸೇರಿದಂತೆ ಹಲವು ಸಂಸ್ಥೆಗಳ ಎಕ್ಸಿಟ್ ಪೋಲ್‌ಗಳು ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರವನ್ನು ಕಳೆದುಕೊಳ್ಳಲಿದೆ, ಯುಡಿಎಫ್ ಗೆಲುವು ಕಾಣಲಿದೆ ಎಂದು ಹೇಳಿದೆ. ಕೇರಳದ ಒಟ್ಟು 140 ವಿಧಾನಸಭೆ ಕ್ಷೇತ್ರಗಳಿದ್ದು, ಬಹುಮತ ಪಡೆಯಲು 71 ಕ್ಷೇತ್ರಗಳನ್ನು ಗೆಲ್ಲಬೇಕು. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಯುಡಿಎಫ್ 78 – 90, ಎಲ್‌ಡಿಎಫ್ 49 – 62, ಇತರೆ 0 – 3 ಸ್ಥಾನಗಳನ್ನು ಪಡೆಯಲಿದೆ.

ಅಸ್ಸಾಂ ಎಕ್ಸಿಟ್ ಪೋಲ್

ಅಸ್ಸಾಂನಲ್ಲಿ ಎನ್‌ಡಿಎ ಗೆಲುವು ಕಾಣಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಹೇಳಿವೆ. P-MARQ, Matrize, ಆಕ್ಸಿಸ್ ಮೈ ಇಂಡಿಯಾ, ಜೆವಿಸಿ, ಪೀಪಲ್ ಪಲ್ಸ್ ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಬಹುಮತ ಸಿಗಲಿದೆ ಎಂದಿದೆ. ಅಸ್ಸಾಂನ 126 ವಿಧಾನಸಭೆ ಕ್ಷೇತ್ರದಲ್ಲಿ 64 ಕ್ಷೇತ್ರಗಳಲ್ಲಿ ಗೆದ್ದರೆ ಬಹುಮತ ಪಡೆಯಬಹುದಾಗಿದೆ. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಎನ್‌ಡಿಎ 88 – 100, ಕಾಂಗ್ರೆಸ್ ಮೈತ್ರಿಕೂಟ 24 – 36 ಪಡೆದರೆ, ಇತರೆ ಶೂನ್ಯವಾಗಿದೆ.

ಪುದುಚೆರಿ ಎಕ್ಸಿಟ್ ಪೋಲ್

ಪುದುಚೆರಿಯಲ್ಲಿ ಮತ್ತೆ ಎನ್‌ಡಿಎ ಗೆಲುವು ಕಾಣಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಹೇಳಿವೆ. ಪೀಪಲ್ಸ್ ಪಲ್ಸ್, ಆಕ್ಸಿಸ್ ಮೈ ಇಂಡಿಯಾ, ಎಬಿಪಿ ನ್ಯೂಸ್-ಸಿ ವೋಟರ್ ಎನ್‌ಡಿಎ ಪುದುಚೆರಿಯಲ್ಲಿ ಗದ್ದುಗೆ ಉಳಿಸಲಿದೆ. ಒಟ್ಟು 30 ವಿಧಾನಸಭೆ ಕ್ಷೇತ್ರದಲ್ಲಿ ಬಹುಮತ ಪಡೆಯಲು 16 ಕ್ಷೇತ್ರಗಳಲ್ಲಿ ಗೆಲುವು ಕಾಣಬೇಕು. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಎನ್‌ಡಿಎ 16 – 20, ಎಸ್‌ಪಿಎ 6 – 8, ಇತರೆ ರಾಜ್ಯಗಳು 2 – 7 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ.

ಪಶ್ಚಿಮ ಬಂಗಾಳ ಎಕ್ಸಿಟ್ ಪೋಲ್

ಪಶ್ಚಿಮ ಬಂಗಾಳವು ಹಲವು ವರ್ಷಗಳಿಂದ ಟಿಎಂಸಿ ತೆಕ್ಕೆಯಲ್ಲಿದೆ. ಆದರೆ ಈ ಬಾರಿ ಬಿಜೆಪಿ ಗೆಲುವು ಕಾಣಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಹೇಳಿವೆ. ಆದರೆ ಒಂದೆರಡು ಎಕ್ಸಿಟ್ ಪೋಲ್‌ಗಳು ಟಿಎಂಸಿ ಕೈಯಲ್ಲೇ ಅಧಿಕಾರ ಉಳಿಯಲಿದೆ ಎಂದಿದೆ. ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭೆ ಕ್ಷೇತ್ರಗಳ ಪೈಕಿ 148 ಕ್ಷೇತ್ರಗಳನ್ನು ಗೆದ್ದರೆ ಬಹುಮತ ಪಡೆಯಬಹುದು. P-MARQ, ಪೋಲ್ ಡೈರಿ, ಚಾಣಕ್ಯ, ಮ್ಯಾಟ್ರಿಜ್ ಬಿಜೆಪಿ ಅಧಿಕ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದೆ. ಆದರೆ ಪೀಪಲ್ ಪಲ್ಸ್ ಮಾತ್ರ ಟಿಎಂಸಿ 177 – 187 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಬಹುಮತ ಪಡೆಯಲಿದೆ ಎಂದಿದೆ.

ತಮಿಳುನಾಡು ಎಕ್ಸಿಟ್ ಪೋಲ್

ತಮಿಳುನಾಡಿನಲ್ಲಿ ಹೆಚ್ಚಿನ ಸಮೀಕ್ಷೆಗಳು ಆಡಳಿತಾರೂಢ ಡಿಎಂಕೆ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟವು ಬಹುಮತದತ್ತ ಮುನ್ನಗ್ಗುವ ಸಾಧ್ಯತೆಯಿದೆ. ನಟ ವಿಜಯ್ ಅವರ ಹೊಸದಾಗಿ ಸ್ಥಾಪಿತವಾದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಶೇ. 5-8ರಷ್ಟು ಮತ ಹಂಚಿಕೆಯನ್ನು ಪಡೆಯುವ ಸಾಧ್ಯತೆಯಿದೆ ಎಂದಿದೆ. ಒಟ್ಟು 234 ಕ್ಷೇತ್ರಗಳಲ್ಲಿ ಬಹುಮತ ಪಡೆಯಲು 118 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಡಿಎಂಕೆ 125-145, ಎಡಿಎಂಕೆ 65-85. ಟಿವಿಕೆ 16-26 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ.

ಇದನ್ನು ಓದಿದ್ದೀರಾ? ಬಿಹಾರವು ಚಂಡೀಗಢದಂತೆ ಅಲ್ಲ; ಎಕ್ಸಿಟ್ ಪೋಲ್‌ ತಿರಸ್ಕರಿಸಿದ ದೀಪಾಂಕರ್ ಭಟ್ಟಾಚಾರ್ಯ

2021ರ ಎಕ್ಸಿಟ್ ಪೋಲ್ ಹೇಳಿದ್ದೇನು, ನಡೆದಿದ್ದೇನು?

ಪಶ್ಚಿಮ ಬಂಗಾಳ: ಟಿಎಂಸಿಗೆ ಸುಮಾರು 150-160 ಸೀಟುಗಳು ಮತ್ತು ಬಿಜೆಪಿಗೆ 110-125 ಸೀಟುಗಳು ಬರಬಹುದು ಎಂದು ಎಕ್ಸಿಟ್ ಪೋಲ್‌ಗಳು ಹೇಳಿತ್ತು. ‘ಜನ್ ಕಿ ಬಾತ್’ ಸಮೀಕ್ಷೆಯು ಬಿಜೆಪಿಗೆ 160ಕ್ಕೂ ಹೆಚ್ಚು ಸೀಟುಗಳು ಬರಲಿದೆ ಎಂದಿತ್ತು. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 213 ಸೀಟುಗಳನ್ನು ಗೆಲ್ಲುವ ಮೂಲಕ ಭರ್ಜರಿ ಗಳಿಸಿತ್ತು. ಬಿಜೆಪಿ ಕೇವಲ 77 ಸೀಟುಗಳನ್ನಷ್ಟೇ ಪಡೆದಿತ್ತು.

ತಮಿಳುನಾಡು: ಡಿಎಂಕೆ (DMK) ನೇತೃತ್ವದ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿತ್ತು. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ 159 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಿತು. ಎಐಎಡಿಎಂಕೆ (AIADMK) ಮೈತ್ರಿಕೂಟ 75 ಸೀಟುಗಳನ್ನು ಪಡೆಯಿತು.

ಕೇರಳ: ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಸಂಪ್ರದಾಯ ಕೇರಳದ್ದು. ಆದರೆ ಎಕ್ಸಿಟ್ ಪೋಲ್‌ಗಳು ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದವು. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ 99 ಸೀಟುಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸಿತು. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ 41 ಸೀಟುಗಳನ್ನಷ್ಟೇ ಪಡೆದುಕೊಂಡಿತು.

ಅಸ್ಸಾಂ: ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಬಿಜೆಪಿ ಮೈತ್ರಿಕೂಟ 75 ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಮೈತ್ರಿಕೂಟ 50 ಸೀಟುಗಳನ್ನು ಗೆದ್ದಿತು.

ಪುದುಚೆರಿ: ಬಹುತೇಕ ಎಕ್ಸಿಟ್ ಪೋಲ್‌ಗಳು ಅಂದಿನ ಕಾಂಗ್ರೆಸ್ ಸರ್ಕಾರ ಹೋಗಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಹೇಳಿತ್ತು. ಎನ್‌ಆರ್‌ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟವು 30 ಸ್ಥಾನಗಳ ಪೈಕಿ 16 ರಿಂದ 24 ಸ್ಥಾನಗಳನ್ನು ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್‌ಗಳು ಹೇಳಿತ್ತು. ಅಂತಿಮವಾಗಿ ಎನ್‌ಡಿಎ ಮೈತ್ರಿಕೂಟವು 16 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...