ಮೃತಪಟ್ಟ 42 ದಿನಗಳ ಬಳಿಕ ಬಂತು ‘ಗುಣಮುಖರಾಗಿದ್ದಕ್ಕೆ ಸಂತಸ’ ಎಂಬ ಆಯುಷ್ಮಾನ್ ಸಂದೇಶ

Date:

ಛತ್ತೀಸ್‌ಗಢದಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಪ್ರಮಾದವೊಂದು ಬೆಳಕಿಗೆ ಬಂದಿದೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ಪೊಲೀಸ್ ಪೇದೆಯೊಬ್ಬರ ಮೊಬೈಲ್‌ಗೆ, ಅವರು ಮೃತಪಟ್ಟ 42 ದಿನಗಳ ಬಳಿಕ ‘ನೀವು ಗುಣಮುಖರಾಗಿ ಮನೆಗೆ ಮರಳುತ್ತಿರುವುದಕ್ಕೆ ನಮಗೆ ಸಂತಸವಾಗಿದೆ’ ಎಂಬ ಆಯುಷ್ಮಾನ್ ಭಾರತ್ ಯೋಜನೆಯ ಸಂದೇಶವೊಂದು ಬಂದಿದೆ. ಈ ಘಟನೆಯು ಮೃತರ ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದೆ.

- Advertisement -

​ಜಶ್‌ಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೀಮಾ ಕುಜುರ್ ಅವರ ಪತಿ, ಪೊಲೀಸ್ ಪೇದೆ ದೇವನಾರಾಯಣ್ ರಾಮ್ ಮೃತಪಟ್ಟವರು. ಜೂನ್ 26ರಂದು ಅವರನ್ನು ಅಂಬಿಕಾಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 30ರಂದು ಅವರು ಕೊನೆಯುಸಿರೆಳೆದಿದ್ದರು. ಆಸ್ಪತ್ರೆಯು ಮರಣ ಪ್ರಮಾಣಪತ್ರವನ್ನು ನೀಡಿದ ಬಳಿಕ, ಕುಟುಂಬಸ್ಥರು ಅಂತ್ಯಕ್ರಿಯೆಯನ್ನೂ ಪೂರ್ಣಗೊಳಿಸಿದ್ದರು. ಆದರೆ, ಆಗಸ್ಟ್ 10ರಂದು ದೇವನಾರಾಯಣ್ ಅವರ ಮೊಬೈಲ್‌ಗೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಪಡೆದು ‘ಗುಣಮುಖರಾಗಿದ್ದಕ್ಕೆ’ ಶುಭಾಶಯ ಕೋರುವ ಸ್ವಯಂಚಾಲಿತ ಸಂದೇಶ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

​ಈ ಕುರಿತು ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಪತ್ನಿ ಸೀಮಾ ಕುಜುರ್, ‘ಮೃತಪಟ್ಟ ವ್ಯಕ್ತಿಯ ಮೊಬೈಲ್‌ಗೆ ಇಂತಹ ಸಂದೇಶ ಬಂದರೆ ಕುಟುಂಬಸ್ಥರಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ನೀವು ಊಹಿಸಬಹುದು. ಇಷ್ಟೊಂದು ದೊಡ್ಡ ಪ್ರಮಾದ ಹೇಗೆ ನಡೆಯಿತು ಎಂಬುದು ಆಶ್ಚರ್ಯ ಮೂಡಿಸುತ್ತಿದೆ. ರಾಜ್ಯದ ಆರೋಗ್ಯ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಇದು ಪ್ರಶ್ನೆ ಹುಟ್ಟುಹಾಕಿದೆ. ಸಾಮಾನ್ಯ ಬುಡಕಟ್ಟು ಜನಾಂಗದವರ ಪಾಡು ಇನ್ನೇನಿರಬಹುದು? ಈ ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

​ಈ ವಿವಾದದ ಕುರಿತು ಪ್ರತಿಕ್ರಿಯಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಇದೊಂದು ತಾಂತ್ರಿಕ ಪ್ರಮಾದ ಎಂದು ಸ್ಪಷ್ಟಪಡಿಸಿದೆ. ‘ರೋಗಿಯ ಮಾಹಿತಿಯನ್ನು ಪೋರ್ಟಲ್‌ನಲ್ಲಿ ನವೀಕರಿಸುವಲ್ಲಿ ಡೇಟಾ ಎಂಟ್ರಿ ಆಪರೇಟರ್ ವಿಳಂಬ ಮಾಡಿದ್ದಾರೆ. ಪೇದೆ ಮೃತಪಟ್ಟ ವಾರಗಳ ಬಳಿಕ, ಅಂದರೆ ಆಗಸ್ಟ್ 6ರಂದು ಕ್ಲೈಮ್ ಮುಕ್ತಾಯದ ಬಗ್ಗೆ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ಈ ನವೀಕರಣದ ಕಾರಣದಿಂದಾಗಿ, ವ್ಯವಸ್ಥೆಯು ಸ್ವಯಂಚಾಲಿತವಾಗಿ ‘ರೋಗಿ ಗುಣಮುಖರಾಗಿದ್ದಾರೆ’ ಎಂಬ ಸಂದೇಶವನ್ನು ರವಾನಿಸಿದೆ. ಈ ಕರ್ತವ್ಯಲೋಪಕ್ಕಾಗಿ ಗುತ್ತಿಗೆ ಆಧಾರಿತ ಡೇಟಾ ಎಂಟ್ರಿ ಆಪರೇಟರ್‌ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

​’ಭವಿಷ್ಯದಲ್ಲಿ ಇಂತಹ ಸಂದೇಶಗಳನ್ನು ಕಳುಹಿಸುವ ಮುನ್ನ ಮೃತರ ಮಾಹಿತಿಯನ್ನು ಕಡ್ಡಾಯವಾಗಿ ಮರುಪರಿಶೀಲಿಸುವಂತೆ ನವ ರಾಯ್‌ಪುರದಲ್ಲಿರುವ ರಾಜ್ಯ ನೋಡಲ್ ಏಜೆನ್ಸಿಗೆ ಪತ್ರ ಬರೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ದಿನಗಳ ಚಿಕಿತ್ಸಾ ಅವಧಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಕೇವಲ ಐಸಿಯು (ICU) ಮತ್ತು ರಕ್ತ ವರ್ಗಾವಣೆಗೆ ಸಂಬಂಧಿಸಿದ ಒಟ್ಟು 16,700 ರೂಪಾಯಿಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ದೇವನಾರಾಯಣ್ ಅವರ ಆಯುಷ್ಮಾನ್ ಕಾರ್ಡ್ ಖಾತೆಯಲ್ಲಿ ಇನ್ನುಳಿದ 4,74,800 ರೂಪಾಯಿ ಮೊತ್ತ ಹಾಗೆಯೇ ಉಳಿದಿದೆ ಹಾಗೂ ಈ ಪ್ರಕ್ರಿಯೆಗಳಿಗೆ ಬಯೋಮೆಟ್ರಿಕ್ ಮತ್ತು ಒಟಿಪಿ ದೃಢೀಕರಣದ ಅಗತ್ಯವಿರುತ್ತದೆ ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...