ಇವರಿಗೆ ತಿಂಗಳೆಂದರೆ 28 ದಿನ! ಸೇವೆಯ ಹೆಸರಲ್ಲಿ ಹಗಲು ದರೋಡೆಗಿಳಿದವಾ ಟೆಲಿಕಾಂ ಕಂಪನಿಗಳು?

Date:

ನಮಗೆಲ್ಲಾ ತಿಂಗಳಲ್ಲಿ 30 ಅಥವಾ 31 ದಿನಗಳು ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ಟೆಲಿಕಾಂ ಕಂಪನಿಗಳ ಮಾಲೀಕರಿಗೆ ಯಾರೋ ತಿಂಗಳಲ್ಲಿ 28 ದಿನ ಅಂತ ಹೇಳಿಕೊಟ್ಟಂತಿದೆ.

- Advertisement -

ಸಾಮಾನ್ಯವಾಗಿ ನಾವು ನಮ್ಮ ದೈನಂದಿನ ಬಳಕೆಯ ಎಲ್ಲಾ ವಸ್ತುಗಳಿಗೂ 30 ದಿನದ ಲೆಕ್ಕದಲ್ಲಿ ಬಿಲ್‌ ಪಾವತಿ ಮಾಡುತ್ತೇವೆ. ಹಾಲಿನ ಬಿಲ್‌, ನೀರಿನ ಬಿಲ್, ಮನೆ ಬಾಡಿಗೆ, ವಿದ್ಯುತ್‌ ಬಿಲ್‌ ಇದೆಲ್ಲಾ ಒಂದು ತಿಂಗಳು ಅಂದರೆ 30 ದಿನಕ್ಕೆ ಇಂತಿಷ್ಟು ಅಂತ ಪಾವತಿ ಮಾಡುತ್ತೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಆದರೆ, ತಿಂಗಳ ಪ್ಲಾನ್‌ ಅಂತ 28 ದಿನಗಳಿಗೆ ವಸೂಲಿಗಿಳಿಯುವ ಟೆಲಿಕಾಂ ಕಂಪನಿಗಳ ದೋಖಾ ನಮ್ಮ ಅರಿವಿಗೆ ಬರದೆ ಸಾಗ್ತಿದೆ. ಸುಮಾರು ದಶಕಗಳ ಹಿಂದೆ ನಮ್ಮ ಹಿರೀಕರು ಲ್ಯಾಂಡ್‌ಲೈನ್‌ಗಳ ಸಂಪರ್ಕ ತೆಗೆದುಕೊಂಡು ಎಷ್ಟು ಸಮಯ ಫೋನ್‌ ಲೈನ್‌ ಬಳಸಿದ್ದಾರೆ ಅಷ್ಟು ಮೊತ್ತ ಮಾತ್ರವೇ ಮೀಟರ್‌ ಲೆಕ್ಕದಲ್ಲಿ ಪಾವತಿಸುತ್ತಿದ್ದರು. ಕಾಲ ಬದಲಾದಂತೆ ಸಂಪರ್ಕ ಸಾಧನಗಳ ರೂಪವು ಬದಲಾಗುತ್ತಾ ಹೋಯಿತು. ಕಾಲಿಂಗ್‌ ಬೂತ್‌ಗಳು ಹುಟ್ಟಿಕೊಂಡವು ಕರೆ ಹೋಗುವ ಸಮಯ ಹಾಗೂ ಕರೆ ಕೊನೆಗೊಳ್ಳುವ ಸಮಯವನ್ನು ಬರೆದಿರಿಸಿ ಗ್ರಾಹಕರಿಗೆ ಚಾರ್ಜ್‌ ಮಾಡಲಾಗುತ್ತಿತ್ತು.

ನಂತರ ಮಾರುಕಟ್ಟೆಗೆ ಕಾಲಿಟ್ಟದ್ದು ಮೊಬೈಲ್‌ ಎಂಬ ಮಾಯಾ ಲೋಕ. ಜೊತೆಗೆ ಮುಂಗಡ ಪಾವತಿಯ ಪರಿಕಲ್ಪನೆ. ಬಳಸಿದ ನಂತರ ಪಾವತಿಸುವ ರೂಢಿ ಬಿಟ್ಟು ಮೊದಲು ಪಾವತಿಸಿ ನಂತರ ಬಳಸುವುದನ್ನು ಜಗತ್ತಿಗೆ ರೂಢಿ ಮಾಡಿಸಿದ್ದು ಈ ಮೊಬೈಲ್‌ ಹಾಗೂ ಟೆಲಿಕಾಂ ಕಂಪನಿಗಳು.

TELECOM

ಈ ಟೆಲಿಕಾಂ ಕಂಪನಿಗಳು ತಿಂಗಳ ರಿಚಾರ್ಜ್‌ ಹೆಸರಿನಲ್ಲಿ ಜನರ ರಕ್ತ ಹೀರುತ್ತಿದೆ. ತಿಂಗಳಿಗೆ 350ರ ತನಕ ಚಾರ್ಜ್‌ ಮಾಡುವ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕೇವಲ 28 ದಿನದ ಸೇವೆಯನ್ನು ಒದಗಿಸುತ್ತಿವೆ. ಈ ಮೋಸದ ಬಲೆಗೆ ಬಿದ್ದ ಗ್ರಾಹಕರು ವರ್ಷಕ್ಕೆ 12 ಬಾರಿ ರಿಚಾರ್ಜ್‌ ಮಾಡಿಕೊಳ್ಳುವ ಬದಲು 13 ಬಾರಿ ರೀಚಾರ್ಜ್‌ ಮಾಡಬೇಕಾಗಿದೆ ಎಂದರೆ ಒಂದು ಕ್ಯಾಲೆಂಡರಿನಲ್ಲಿ ಇರುವ 12 ತಿಂಗಳ ಜೊತೆಗೆ ಇಲ್ಲದಿರುವ ಒಂದು ತಿಂಗಳಿಗೂ ಸೇರಿ ರಿಚಾರ್ಜ್‌ ಮಾಡಿಕೊಳ್ಳುತ್ತಿದ್ದಾರೆ.

ಡೇಟ ಲಿಮಿಟ್‌ ಎಂಬ ಇನ್ನೊಂದು ಭೂತ: ಡೈಲಿ ಡೆಟ ಲಿಮಿಟ್‌ ಹೆಸರಿನಲ್ಲಿ ಟೆಲಿಕಾಂ ಕಂಪನಿಗಳು ಪ್ರತಿದಿನ ಕೋಟ್ಯಂತರ ಭಾರತೀಯರ ಡೇಟ ನುಂಗಿ ಹಾಕುತ್ತಿವೆ. ತಿಂಗಳ ರಿಚಾರ್ಜಿನಲಿ ದಿನಕ್ಕೆ ಒಂದೂವರೆಯಿಂದ ಎರಡು ಜಿಬಿ ಡೇಟ ನೀಡುವ ಕಂಪನಿಗಳು ದಿನಾಂತ್ಯದಲ್ಲಿ ಬಳಕೆಯಾಗದೆ ಉಳಿದ ಡೇಟವನ್ನು ಮರುದಿನ ಬಳಸುವ ಅವಕಾಶ ನೀಡದೆ ಹಗಲು ದರೋಡೆಗೆ ಇಳಿದಿದೆ.

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್‌ ಚಡ್ಡ ಈ ವಿಷಯವಾಗಿ ಸಾರ್ವಜನಿಕರ ಪರ ಧ್ವನಿ ಎತ್ತಿದ್ದಾರೆ ನಾವು ಬಳಸುವ  ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌, ಮುಂತಾದ ವಸ್ತುಗಳಿಗೆ ಹೇಗೆ ಬಳಸಿದಷ್ಟೇ ಪಾವತಿ ಮಾಡುವ ಗ್ರಾಹಕ ನಿಯಮವಿದೆಯೋ, ಆ ನಿಯಮ ಡೇಟ ಖರೀದಿಯಲ್ಲಿಯೂ ಅನ್ವಯವಾಗಲಿ ಎಂಬ ಬೇಡಿಕೆಯನ್ನು ಟೆಲಿಕಾಂ ಕಂಪನಿಯ ಮುಂದಿರಿಸಿದ್ದಾರೆ. ಬಳಕೆಯಾಗದೆ ಉಳಿದ ಡೇಟ ರೋಲ್‌ ಆನ್‌ ಆಗುವ ಅಥವಾ ಪರಿವಾರದೊಂದಿಗೆ ಶೇರ್‌ ಮಾಡುವ ವ್ಯವಸ್ಥೆಯನ್ನು ಟಿಲಿಕಾಂ ಕಂಪನಿಗಳು ಗ್ರಾಹಕರಿಗೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಿದ್ದಾರೆ.

RAGHAV CHADHA

ಈ ಹಿಂದೆ 28 ದಿನಗಳ ರಿಚಾರ್ಜ್ ಹೆಸರಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಮೋಸಗೊಳಿಸುತ್ತಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದ ಚಡ್ಡಾ, ತಿಂಗಳ ರಿಚಾರ್ಜ್‌ ಮುಗಿದ ನಂತರ ಹೊರಹೋಗುವ ಕರೆಯ ಜೊತೆಗೆ ಒಳಬರುವ ಕರೆಗಳನ್ನು ನಿರ್ಬಂಧಿಸುವ ನಿಯಮದ ವಿರುದ್ಧ ಸಿಡಿದೆದ್ದಿದ್ದರು. ಗ್ರಾಹಕರ ಆಧಾರ್‌, ಬ್ಯಾಂಕ್‌ ಒಟಿಪಿಗಳನ್ನು ಪಡೆಯಲಾಗದೆ ದೇಶದ ಸಾರ್ವಜನಿಕರು ತೊಂದರೆಗೀಡಾಗುತ್ತಾರೆ ಹಾಗಾಗಿ ಒಳಬರುವ ಕರೆಗಳ ಸೇವೆಯನ್ನು ಕೊನೆಯ ಬಾರಿ ರೀಚಾರ್ಜ್‌ ಮಾಡಿಸಿದ ಅವಧಿಯಿಂದ ಒಂದು ವರ್ಷದ ತನಕ ಒದಗಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.

ಪರಿಣಾಮ ಯಾರ ಮೇಲೆ?

ದಿನಗೂಲಿಗೆ ಕೆಲಸ ಮಾಡುವ ಬಡ ಕಾರ್ಮಿಕರ ಮೇಲೆ, ಕಾಲೇಜು ವಿಧ್ಯಾರ್ಥಿಗಳ ಮೇಲೆ ಈ ಟೆಲಿಕಾಂ ಕಂಪನಿ ಬೀಸಿರುವ ದಾಳ ಹೆಚ್ಚಿನ ಪರಿಣಾಮ ಬೀರಲಿದೆ. ಸಹಜವಾಗಿ ಪೋಸ್ಟ್‌ಪೇಡ್‌ ಸೇವೆ ಪಡೆಯುವ ಮತ್ತು ವರ್ಷದ ರೀಚಾರ್ಜ್‌ ಒಮ್ಮೆಲೆ ಮಾಡಿಸುವ ಅನುಕೂಲವಂತ ವರ್ಗದ ಮೇಲೆ ಟೆಲಿಕಾಂ ಕಂಪನಿಯ ಈ ಮೋಸ ಯಾವ ಪ್ರಭಾವ ಬೀರಲಾರದು. ಆದರೆ ದುಡಿದು ತಿನ್ನುವ ಕಾರ್ಮಿಕರು, ಜೊತೆಗೆ ಓದುವ ವಿಧ್ಯಾರ್ಥಿಗಳು 28 ದಿನಕ್ಕೆ ಸರಿಯಾಗಿ ರೀಚಾರ್ಜ್‌ ಮಾಡಿಕೊಳ್ಳಲು ಅಶಕ್ತರಿರುವಾಗ ಹಣದಾಹಿ ಕಂಪನಿಗಳು ಒಳಬರುವ ಕರೆಯನ್ನು ನಿಷೇಧಿಸುವುದು ಜೊತೆಗೆ, ಸಿಮ್‌ ನಿಷ್ಕ್ರಿಯಗೊಳಿಸುವುದು ಮಾಡಿದರೆ ಅವರ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲವೇ ?

ಮೊದಲೇ ದುಬಾರಿಯಾಗುತ್ತಿರುವ ದೈನಂದಿನ ಸರಕು ಸಾಮಾಗ್ರಿಗಳ ಬೆಲೆಯಿಂದ ಹೈರಾಣಾದ ಜನರಿಗೆ ಟೆಲಿಕಾಂ ಕಂಪನಿಗಳ ಈ ಮೋಸ ನುಂಗಲಾರದ ಉಗುಳಲಾರದ ಬಿಸಿತುಪ್ಪದಂತೆ.

ವ್ಯವಸ್ಥೆಯು ಬ್ಯಾಂಕ್‌ ಸೇವೆಗಳು, ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಹಾಗೂ ಆನ್ಲೈನ್‌ ಪೇಮೆಂಟ್‌ ಜೊತೆಗೆ ಪಹಣಿ ಪತ್ರ, ಕಾಲೇಜು ಸಂಬಂಧಿತ ಕೆಲಸಗಳಿಗೆ ಪ್ರತಿಯೊಂದಕ್ಕು ಫೋನ್‌ ಬಳಕೆಯನ್ನು ಅವಲಂಬಿಸುವ ಪರಿಸ್ಥಿತಿಗೆ ತಂದಿರಿಸಿದೆ. ಹೀಗಿರುವಾಗ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ದವಾದರೂ ಕ್ರಮಕೈಗೊಳ್ಳುವ ಕೆಲಸವಾಗಬೇಕು.

ಇನ್ನೂ ಈ ಹೆಸರಾಂತ ಟೆಲಿಕಾಂ ಕಂಪನಿಗಳು ಗ್ರಾಹಕನಿಂದ ಸುಲಿಗೆ ಮಾಡಿದ ಬೆಲೆಗೆ ಸರಿಯಾದ ಸೇವೆಯನ್ನಾದರು ಒದಗಿಸುತ್ತಿದೆಯಾ ಕೇಳಿದರೆ ಅದೂ ಇಲ್ಲ. ಮಲೆನಾಡಿನಂತಹ ದಟ್ಟ ಕಾಡುಗಳಲ್ಲಿ ಬಿಡಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲೂ ನೆಟ್ವರ್ಕ್‌ ಸಮಸ್ಯೆ ಇದೆ. ಸಂಪರ್ಕ, ಸಂವಹನ ಸೇವೆ ಪಡೆಯುವುದು ಪ್ರತಿಯೊಬ್ಬ ದೇಶಿಗನ ಹಕ್ಕು. ಇದನ್ನು ಪ್ರಶ್ನಿಸ ಬೇಕಿದ್ದ ಸರ್ಕಾರವೇ ತನ್ನನ್ನು ಈ ಟೆಲಿಕಾಂ ಕಂಪನಿಯ ಮಾಲೀಕರಿಗೆ ಮಾರಿಕೊಂಡಿರುವಾಗ ಸಾರ್ವಜನಿಕರ ಹಿತ ಕಾಯುವವರು ಯಾರು?

ರಾಘವ್‌ ಚಡ್ಡರಂತಹ ಸಾರ್ವಜನಿಕ ಕಾಳಜಿ ಇರುವ ನಾಯಕರು ಈ ಕುರಿತು ಮಾತನಾಡಿದರೆ ಕೆಲ ಮಬ್ಬುಗಳು ಅವರ ಪ್ರಶ್ನಿಸುವ ನಡೆಯನ್ನು ಟೀಕಿಸುತ್ತವೆ. ಜೆನ್‌ ಝೀ ಗಮನ ಸೆಳೆಯಲು ಗಿಮಿಕ್‌ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆದುಕೊಳ್ಳಲು ಪ್ರಯೋಜನಕ್ಕೆ ಬರದ ಯಾವುದೋ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಆಡಿಕೊಳ್ಳುತ್ತಾರೆ. ಪ್ರಚಾರವೋ ಇನ್ನೇನೋ ಆಗಲಿ. ಗ್ರಾಹಕರ ಹಕ್ಕುಗಳ ಪರವಾಗಿ ಮಾತನಾಡುವ, ಹಣಪಿಪಾಸುಗಳು ಸಾರ್ವಜನಿಕರಿಗೆ ಮಾಡುತ್ತಿರುವ ದ್ರೋಹವನ್ನು ಪ್ರಶ್ನಿಸುವ ಎದೆಗಾರಿಕೆ ಇರುವ ನಾಯಕರು ಈಗ ಯಾರಿದ್ದಾರೆ?

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...