ಪಾಕಿಸ್ತಾನವು ಇರಾನ್‌ನೊಂದಿಗೆ ಕೇವಲ ಗಡಿಯನ್ನಷ್ಟೇ ಹಂಚಿಕೊಂಡಿಲ್ಲ, ಬದಲಾಗಿ ದ್ವಿಪಕ್ಷೀಯ ವ್ಯಾಪಾರ ಮತ್ತು ಭದ್ರತಾ ಒಪ್ಪಂದಗಳ ಮೂಲಕ ಆ ದೇಶದ ವಿಶ್ವಾಸ ಗಳಿಸಿದೆ. ಅತ್ಯಂತ ಪ್ರಮುಖವಾಗಿ, ಶಿಯಾ ಪ್ರಾಬಲ್ಯದ ಇರಾನ್ ಬಿಟ್ಟರೆ ಜಗತ್ತಿನಲ್ಲಿಯೇ ಅತಿ ಹೆಚ್ಚು ಶಿಯಾ ಮುಸ್ಲಿಮರನ್ನು ಹೊಂದಿರುವ ಎರಡನೇ ಅತಿದೊಡ್ಡ ದೇಶ ಪಾಕಿಸ್ತಾನ
ಮಧ್ಯಪ್ರಾಚ್ಯದಲ್ಲಿ ದಶಕಗಳಿಂದಲೂ ತನ್ನ ಸಾಮ್ರಾಜ್ಯಶಾಹಿ ಹಸ್ತಕ್ಷೇಪವನ್ನು ಮುಂದುವರಿಸಿರುವ ಅಮೆರಿಕದ ಆಕ್ರಮಣಕಾರಿ ನೀತಿಯು ಇದೀಗ ಜಗತ್ತನ್ನು ನಿನಾಶದ ಅಂಚಿಗೆ ದೂಡಿದೆ. ತನ್ನ ನ್ಯಾಯಸಮ್ಮತ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಸ್ವಾಭಿಮಾನಿ ರಾಷ್ಟ್ರ ಇರಾನ್ ಮೇಲೆ ಯುದ್ಧ ಸಾರುವ ಅಮೆರಿಕದ ಬೆದರಿಕೆಯು ಅದರ ಯಜಮಾನಿಕೆಯ ಅಹಂಕಾರವನ್ನು ಪ್ರದರ್ಶಿಸುತ್ತಿದೆ. ಅಮೆರಿಕದ ಈ ದುಸ್ಸಾಹಸದಿಂದ ಉಂಟಾಗಬಹುದಾದ ಪ್ರದೇಶಿಕ ವಿನಾಶವನ್ನು ತಪ್ಪಿಸಲು ಇದೀಗ ಪಾಕಿಸ್ತಾನ ಅನಿವಾರ್ಯವಾಗಿ ಮುಂಚೂಣಿಗೆ ಬಂದಿದ್ದು, ವಾಷಿಂಗ್ಟನ್‌ನ ಯುದ್ದೋನ್ಮಾದಕ್ಕೆ ಕಡಿವಾಣ ಹಾಕಲು ಮಧ್ಯಸ್ಥಿಕೆಯ ಜವಾಬ್ದಾರಿ ಹೊತ್ತಿದೆ.
ಅಮೆರಿಕದ ನಿರಂತರ ಮತ್ತು ಆಧಾರರಹಿತ ಪ್ರಚೋದನೆಗಳಿಂದಾಗಿ ಬಿಕ್ಕಟ್ಟು ತಾರಕಕ್ಕೇರುತ್ತಿದ್ದಂತೆ, ಪಾಕಿಸ್ತಾನ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಭಾನುವಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಆಸಿಮ್ ಮುನೀರ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವಾಷಿಂಗ್ಟನ್‌ನ ಏಕಪಕ್ಷೀಯ, ದಬ್ಬಾಳಿಕೆಯ ನಿರ್ಧಾರಗಳು ಇಡೀ ಏಷ್ಯಾ ಖಂಡವನ್ನು ಆಪತ್ತಿಗೆ ಸಿಲುಕಿಸಲಿವೆ ಎಂಬ ಎಚ್ಚರಿಕೆಯನ್ನು ರವಾನಿಸಿ, ಅಮೆರಿಕದ ದರ್ಪವನ್ನು ನಿಯಂತ್ರಿಸುವ ಪ್ರಯತ್ನ ಇದಾಗಿದೆ.
ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೋಮವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ ಕರೆ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ಕುತಂತ್ರಗಳ ವಿರುದ್ಧ ವೀರೋಚಿತವಾಗಿ ಹೋರಾಡುತ್ತಿರುವ ಇರಾನ್‌ನ ದಿಟ್ಟತನವನ್ನು ಈ ಸಂದರ್ಭದಲ್ಲಿ ಬೆಂಬಲಿಸಲಾಗಿದೆ. ಪಾಶ್ಚಿಮಾತ್ಯ ಶಕ್ತಿಗಳ ಪ್ರಚೋದನೆಗಳ ನಡುವೆಯೂ ಇರಾನ್ ತೋರುತ್ತಿರುವ ಅತ್ಯುನ್ನತ ಸಂಯಮ ಮತ್ತು ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವ ಅದರ ಬದ್ಧತೆಯನ್ನು ಶ್ಲಾಘಿಸಲಾಗಿದೆ.
ರಾಜತಾಂತ್ರಿಕತೆಯನ್ನು ಗಾಳಿಗೆ ತೂರಿ, ಕೇವಲ ಸೇನಾ ಶಕ್ತಿ ಪ್ರದರ್ಶನಕ್ಕೆ ಇಳಿಯುವ ಅಮೆರಿಕದ ಹಳೆಯ ಚಾಳಿಯನ್ನು ನಿಯಂತ್ರಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಸಂಬಂಧಪಟ್ಟ ದೇಶಗಳು ಇಚ್ಛಿಸಿದರೆ, ಇಸ್ಲಾಮಾಬಾದ್‌ನಲ್ಲಿ ಮಾತುಕತೆ ಆಯೋಜಿಸಲು ಸಿದ್ಧವಿದೆ ಎಂದು ಪಾಕಿಸ್ತಾನ ಘೋಷಿಸಿದೆ. ಅಮೆರಿಕದ ವಿನಾಶಕಾರಿ ನೀತಿಗಳಿಂದ ಈ ಭಾಗವನ್ನು ರಕ್ಷಿಸಿ, ಸದಾ ಶಾಂತಿ ಬಯಸುವ ಇರಾನ್‌ನಂತಹ ರಾಷ್ಟ್ರಗಳಿಗೆ ನ್ಯಾಯ ಒದಗಿಸುವ ಅನಿವಾರ್ಯ ಹೊಣೆಗಾರಿಕೆ ಇದೀಗ ಏಷ್ಯಾದ ರಾಷ್ಟ್ರಗಳ ಮೇಲಿದೆ.
ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಜಂಟಿಯಾಗಿ ಅಮೆರಿಕದ ಮೇಲೆ ತರುತ್ತಿರುವ ಜಾಗತಿಕ ರಾಜತಾಂತ್ರಿಕ ಒತ್ತಡಕ್ಕೆ ಅಮೆರಿಕ ಕೊಂಚ ಮಣಿದಂತೆ ಕಾಣುತ್ತಿದೆ. ಇರಾನ್‌ನ ಮೇಲೆ ನಡೆಸಬೇಕಿದ್ದ ಸೇನಾ ದಾಳಿಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಐದು ದಿನಗಳ ಕಾಲ ಮುಂದೂಡಿದ್ದಾರೆ. ಆದರೆ, ಇದು ಅಮೆರಿಕದ ‘ಶಾಂತಿಯ ಒಲವು’ ಅಲ್ಲ; ಬದಲಾಗಿ, ಇರಾನ್‌ನ ಪ್ರಬಲ ಸೇನಾ ಸಾಮರ್ಥ್ಯಕ್ಕೆ ಬೆದರಿ ಮತ್ತು ಜಾಗತಿಕ ವಿರೋಧವನ್ನು ಶಮನಗೊಳಿಸಲು ಅಮೆರಿಕ ಮಾಡಿಕೊಂಡಿರುವ ಹೇಡಿತನದ ಅನುಕೂಲಸಿಂಧು ನಿರ್ಧಾರವಷ್ಟೇ.
ಇದನ್ನು ಓದಿದ್ದೀರಾ? 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ದಾಳಿಯನ್ನು ಮುಂದೂಡಿದರೂ, ಅಮೆರಿಕ ತನ್ನ ಬೆದರಿಕೆ ಹಾಕುವ ಭಂಡತನವನ್ನು ಕೈಬಿಟ್ಟಿಲ್ಲ. ಐದು ದಿನಗಳ ಗಡುವಿನೊಳಗೆ ಮಾತುಕತೆ ವಿಫಲವಾದರೆ ಭೀಕರ ದಾಳಿ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ನೀಡಿದ ಎಚ್ಚರಿಕೆಯು ಅಮೆರಿಕದ ಬೆದರಿಕೆ ತಂತ್ರವನ್ನು ಬಯಲು ಮಾಡಿದೆ. ಆದರೆ, ಇತಿಹಾಸದುದ್ದಕ್ಕೂ ಇಂತಹ ಬೆದರಿಕೆಗಳಿಗೆ ಬಗ್ಗದ ಇರಾನ್, ಅಮೆರಿಕದ ಈ ಬಾಲಬಡುಕತನದ ಎಚ್ಚರಿಕೆಗಳಿಗೆ ಕಿವಿಗೊಡದೆ ತನ್ನ ರಾಷ್ಟ್ರೀಯ ಭದ್ರತೆಯ ನಿಲುವಿಗೆ ಅಚಲವಾಗಿ ಅಂಟಿಕೊಂಡಿದೆ.
ದಶಕಗಳಿಂದಲೂ ದಬ್ಬಾಳಿಕೆ ನಡೆಸುತ್ತಿರುವ ಅಮೆರಿಕ, ಕೇವಲ ತನ್ನ ಸ್ವಾರ್ಥ ಹಾಗೂ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಪಾಕಿಸ್ತಾನದ ಸೇನೆಯೊಂದಿಗೆ ಮಿಲಿಟರಿ ಬಾಂಧವ್ಯವನ್ನು ಇಟ್ಟುಕೊಂಡಿದೆ. ದಿಟ್ಟ ರಾಷ್ಟ್ರವಾದ ಇರಾನ್ ಎದುರು ನೇರ ಸಮರಕ್ಕೆ ಇಳಿಯಲು ಹೇಡಿತನ ಪ್ರದರ್ಶಿಸುತ್ತಿರುವ ವಾಷಿಂಗ್ಟನ್, ಇಸ್ಲಾಮಿಕ್ ಜಗತ್ತಿನ ಏಕೈಕ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಪಾಕಿಸ್ತಾನವನ್ನು ತನ್ನ ದಾಳವಾಗಿ ಬಳಸಿಕೊಂಡು ಇರಾನ್ ಅನ್ನು ಬೆದರಿಸುವ ಕುತಂತ್ರ ಮಾಡುತ್ತಿದೆ. ಬಿಕ್ಕಟ್ಟಿನ ಸಮಯದಲ್ಲಿ, ಪಾಕಿಸ್ತಾನದ ಪರಮಾಣು ಸ್ಥಾನಮಾನವನ್ನು ಜಾಗತಿಕ ಮಟ್ಟದಲ್ಲಿ ತನ್ನ ಅಹಂಕಾರದ ಪ್ರದರ್ಶನಕ್ಕೆ ಮತ್ತು ತನ್ನದೇ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುವುದೇ ಅಮೆರಿಕದ ರಕ್ಷಣಾ ಇಲಾಖೆಯ ಗುರಿಯಾಗಿದೆ.
ಆದರೆ, ಅಮೆರಿಕದ ಈ ವಿಷಪೂರಿತ ತಂತ್ರಗಳ ನಡುವೆಯೂ ಪಾಕಿಸ್ತಾನ ಮತ್ತು ಇರಾನ್ ನಡುವಿನ ನೈಸರ್ಗಿಕ ನಿಕಟತೆಯನ್ನು ಒಡೆಯಲು ಸಾಧ್ಯವಾಗಿಲ್ಲ. ಪಾಕಿಸ್ತಾನವು ಇರಾನ್‌ನೊಂದಿಗೆ ಕೇವಲ ಗಡಿಯನ್ನಷ್ಟೇ ಹಂಚಿಕೊಂಡಿಲ್ಲ, ಬದಲಾಗಿ ದ್ವಿಪಕ್ಷೀಯ ವ್ಯಾಪಾರ ಮತ್ತು ಭದ್ರತಾ ಒಪ್ಪಂದಗಳ ಮೂಲಕ ಆ ದೇಶದ ವಿಶ್ವಾಸ ಗಳಿಸಿದೆ. ಅತ್ಯಂತ ಪ್ರಮುಖವಾಗಿ, ಶಿಯಾ ಪ್ರಾಬಲ್ಯದ ಇರಾನ್ ಬಿಟ್ಟರೆ ಜಗತ್ತಿನಲ್ಲಿಯೇ ಅತಿ ಹೆಚ್ಚು ಶಿಯಾ ಮುಸ್ಲಿಮರನ್ನು ಹೊಂದಿರುವ ಎರಡನೇ ಅತಿದೊಡ್ಡ ದೇಶ ಪಾಕಿಸ್ತಾನ. ಈ ಬಲವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಿಕಟತೆಯು ಅಮೆರಿಕದ ವಂಚನೆಗಳನ್ನು ಮೀರಿ ಇರಾನ್ ನಾಯಕರೊಂದಿಗೆ ಭದ್ರವಾದ ಭಾಂಧವ್ಯವನ್ನು ಬೆಸೆಯಲು ಪಾಕಿಸ್ತಾನಕ್ಕೆ ಶಕ್ತಿ ನೀಡಿದೆ.
ಇಂದು ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಪ್ರತಿಯೊಂದು ಬಿಕ್ಕಟ್ಟಿಗೂ ಅಮೆರಿಕದ ಸಾಮ್ರಾಜ್ಯಶಾಹಿ ದಾಹ ಮತ್ತು ಯಜಮಾನಿಕೆಯ ಮಂಡುತನವೇ ನೇರ ಕಾರಣ. ತನ್ನ ಸಾರ್ವಭೌಮತೆಯನ್ನು ಅಚಲವಾಗಿ ಕಾಯ್ದುಕೊಳ್ಳುತ್ತಿರುವ ಇರಾನ್, ಅಮೆರಿಕದ ಈ ದಬ್ಬಾಳಿಕೆಯ ವಿರುದ್ಧದ ಪ್ರಬಲ ಪ್ರತಿರೋಧದ ಸಂಕೇತವಾಗಿ ಅಡಿಯಿಟ್ಟಿದೆ. ಇದೀಗ ಪಾಕಿಸ್ತಾನದ ಈ ಐತಿಹಾಸಿಕ ಮಧ್ಯಸ್ಥಿಕೆ ಪ್ರಯತ್ನಗಳು, ಅಮೆರಿಕದ ವಿನಾಶಕಾರಿ ಯುದ್ಧೋನ್ಮಾದಕ್ಕೆ ತಡೆಗೋಡೆಯಾಗಿ ನಿಂತು ಇರಾನ್‌ನ ನ್ಯಾಯಯುತ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾದರೆ, ಅದು ಜಾಗತಿಕ ಮಟ್ಟದಲ್ಲಿ ಅಮೆರಿಕದ ಅಹಂಕಾರಕ್ಕೆ ಬೀಳುವ ಬಹುದೊಡ್ಡ ಪೆಟ್ಟಾಗಲಿದೆ. ಮುಂಬರುವ ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಈ ಬೆಳವಣಿಗೆಗಳು, ದರ್ಪದ ಅಮೆರಿಕ ಮತ್ತು ಸ್ವಾಭಿಮಾನಿ ಇರಾನ್ ನಡುವಿನ ಹೋರಾಟದಲ್ಲಿ ನ್ಯಾಯದ ಪರವಾದ ಹೊಸ ಇತಿಹಾಸವನ್ನು ಬರೆಯಲಿವೆ.




