ಉಡುಪಿ | ದೇವರಾಜ ಅರಸು: ವಂಚಿತರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಚೇತನ

Date:

  • ಉಳುವವನೇ ಭೂ ಓಡೆಯ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದವರು ದೇವರಾಜ್ ಅರಸು
  • ಬಿಜೆಪಿ ಪಕ್ಷ ಸುಳ್ಳಿನ ಮೇಲೆಯೇ ದೇಶವನ್ನಾಳಲು ಹೊರಟಿದೆ

ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ನೆಟ್ ವ್ಯವಸ್ಥೆಯಲ್ಲಿ ಕ್ರಾಂತಿ ತಂದು ಭವ್ಯ ಭಾರತ ನಿರ್ಮಾಣವನ್ನು ಸಾಕರಗೊಳಿಸಿದ ರಾಜೀವ್ ಗಾಂಧಿ ಹಾಗೂ ಉಳುವವನೇ ಭೂ ಒಡೆಯ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿದ ದೇವರಾಜ ಅರಸು ಮಹಾ ಚೇತನರು ಎಂದು ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಹರೀಶ್ ಕಿಣಿ ಹೇಳಿದರು.

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಗಾಂಧಿ ಸಂಘಟನೆಯ ಆಶ್ರಯದಲ್ಲಿ ನಗರದ ಓಸ್ಕರ್ ಸ್ಮಾರಕ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ನಾಗೇಶ್ ಉದ್ಯಾವರ್ ಮಾತನಾಡಿ , “ಇಂದು ವ್ಯಾಪಕವಾಗೆ ಸುಳ್ಳು ಸುದ್ದಿಗಳನ್ನು ಹರಡಿಸುವ ಬಿಜೆಪಿ ಸುಳ್ಳಿನ ಮೇಲೆಯೇ ದೇಶವನ್ನಾಳಲು ಹೊರಟಿದೆ. ಆದರೆ ಸುಳ್ಳುಗಳಿಂದ ದೇಶ ಸುಧಾರಣೆ ಸಾಧ್ಯವಿಲ್ಲ. ನಮ್ಮ ಹಿರಿಯ ಚೇತನರಾದ ರಾಜೀವ್ ಗಾಂಧಿ, ದೇವರಾಜ್ ಅರಸು ಸೇರಿದಂತೆ ಮಂತಾದವರ ಆದರ್ಶಗಳನ್ನು ಅನುಷ್ಠಾನಗೊಳಿಸಿ ಈ ಸುಳ್ಳು ಪಡೆಯನ್ನು ನಿಶಕ್ತಗೊಳಿಸಿ ಸಮೃದ್ಧ ಭಾರತ ಕಟ್ಟೋಣ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ದೇಶದ ಎಲ್ಲಾ ರಂಗಗಳಲ್ಲೂ ಯುವ ಸಮೂಹದ ಭವಿಷ್ಯ ರೂಪಿಸುವಲ್ಲಿ ರಾಜೀವ್ ಗಾಂಧಿಯವರ ಕೊಡುಗೆ ಅಪಾರವಾಗಿದೆ. ನಾಡಿನ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಜಾರಿಗೊಳಿಸಿ ಭೂ ಮಸೂದೆ ಕಾನೂನು ಮೂಲಕ ಕ್ರಾಂತಿಗೈದ ಡಿ.ದೇವರಾಜ್ ಅರಸುಗೆ ಸಲ್ಲುತ್ತದೆ” ಎಂದು ನಗರ ಸಭೆಯ ಸದಸ್ಯ ರಮೇಶ್ ಕಾಂಚನ್‌ ನುಡಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ನರಸಿಂಹ ಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮೃತಾ ಪೂಜಾರಿ ಅವರು ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಜಿಲ್ಲಾ ಸಮಿತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸಹ ಸಂಚಾಲಕಿ ರೋಶಿನಿ ವಲಿವರ್, ಗೌರವ ಸಲಹೆಗಾರ ವೆರೋನಿಕ ಕರ್ನೇಲಿಯೋ, ಜಿಲ್ಲಾ ಉಸ್ತುವಾರಿ ಡಾ.ಸುನೀತಾ ಶೆಟ್ಟಿ, ಕಿಶನ್ ಹೆಗ್ಡೆ, ರೋಶನ್ ಶೆಟ್ಟಿ, ಕುಶಲ ಶೆಟ್ಟಿ ಕೀರ್ತಿ ಶೆಟ್ಟಿ ಶಶಿಧರ್ ಶೆಟ್ಟಿ, ಶಬರೀಶ್, ಮೇರಿ ಡಿಸೋಜ, ಸೂರ್ಯ ಸಾಲಿಯಾನ್, ಶಂಕರ ನಾಯ್ಕ, ಮಾರ್ಗರೇಟ್ ಸೀಮಾ, ಶಾಂತಿ ಪಿರೇರಾ, ಸತೀಶ್ ಜಪ್ತಿ,ಜೋಯ್ಸ್ ಟೆನ್ನಿಸ್, ಲಿಲ್ಲಿ ಡಿಸೋಜ, ಉದಯ, ನಜೀರ್, ರೋನಾಲ್ಡ್, ಲಕ್ಷ್ಮಿ ನಾರಾಯಣ, ಕುಮುದ, ವಾರೀಜಾಕ್ಷಿ ಮತ್ತಿತರರಿದ್ದರು. ಆನಂದ್ ಪೂಜಾರಿ ಸ್ವಾಗತಿಸಿ, ರೋಶನ್ ಬರಟೋ ವಂದಿಸಿದರು, ಅಮೃತಾ ಪೂಜಾರಿ ನಿರೂಪಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...

ಮತದಾರರಿಗೆ ಉಚಿತ ಆಹಾರ ನೀಡಲು ಹೋಟೆಲ್‌ಗಳಿಗೆ ಹೈಕೋರ್ಟ್ ಅನುಮತಿ

ಚುನಾವಣೆಯ ದಿನ ಮತದಾನ ಮಾಡಿದವರಿಗೆ ಉಚಿತ ಆಹಾರ ವಿತರಣೆ ಮಾಡಲು ಬೃಹತ್...

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...