ಪ್ರಸಾದ ವಿಚಾರಕ್ಕೆ ಗಲಾಟೆ; ದೇವಾಲಯ ಸೇವಕನನ್ನು ಹೊಡೆದು ಕೊಂದ ದುರುಳರು

Date:

ಪ್ರಸಾದ ವಿನಿಯೋಗದ ವಿಚಾರವಾಗಿ ಆರಂಭವಾದ ಜಗಳವು ಹಿಂಸಾಚಾರಕ್ಕೆ ತಿರುಗಿದ್ದು, ದೇವಾಲಯದ ಸೇವಕನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದಿದೆ. ದುರುಳರ ಗುಂಪಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ದೇವಾಲಯದಲ್ಲಿ ಸೇವಕನಾಗಿ ಕೆಲಸ ಮಾಡುತ್ತಿದ್ದ ಯೋಗೇಂದ್ರ ಅವರನ್ನು ದುರುಳರ ಗುಂಪು ಕೊಂದಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಶುಕ್ರವಾರ ರಾತ್ರಿ ಸುಮಾರು 9:30ರ ವೇಳಗೆ ದೇವಾಲಯದ ಆವರಣದಲ್ಲಿ ಜಗಳ ನಡೆಯುತ್ತಿದೆ ಎಂಧು ಪಿಸಿಆರ್‌ ಕರೆ ಬಂದಿತ್ತು. ಪೊಲೀಸರ ತಂಡ ಸ್ಥಳಕ್ಕೆ ತಲುಪಿದಾಗ ಯೋಗೇಂದ್ರ ಅವರು ನಿತ್ರಾಣರಾಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ದೇವಾಲಯಕ್ಕೆ ಬಂದಿದ್ದ ಐದಾರು ಆರೋಪಿಗಳ ಗುಂಪು ಯೋಗೇಂದ್ರ ಸಿಂಗ್ ಅವರ ಬಳಿ ಚುನ್ನಿ ಪ್ರಸಾದಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಪ್ರಸಾದ ಇಲ್ಲವೆಂದು ಯೋಗೇಂದ್ರ ಹೇಳಿದ್ದಾರೆ. ಬಳಿಕ, ಗುಂಪು ಯೋಗೇಂದ್ರರೊಂದಿಗೆ ಜಗಳ ನಡೆಸಿದ್ದು, ಅವರ ಮೇಲೆ ಕೋಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ದಕ್ಷಿಣಪುರಿ ನಿವಾಸಿ ಅತುಲ್ ಪಾಂಡೆ (30) ಅವರನ್ನು ಸಾರ್ವಜನಿಕರು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶನಿವಾರ ಸಂಜೆ – ತುಘಲಕಾಬಾದ್ ನಿವಾಸಿಗಳಾದ ಮೋಹನ್ (19) ಮತ್ತು ಕುಲದೀಪ್ ಬಿಧುರಿ (20), ಗೋವಿಂದಪುರಿ ನಿವಾಸಿ ನಿತಿನ್ ಪಾಂಡೆ (26) ಹಾಗೂ ಆತ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆತನ ತಂದೆ ಅನಿಲ್ ಕುಮಾರ್ (55) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಆಡಳಿತಾರೂಢ ಬಿಜೆಪಿಯನ್ನು ಎಎಪಿ ತರಾಟೆಗೆ ತೆಗೆದುಕೊಂಡಿದೆ. ಎಎಪಿ ನಾಯಕಿ, ಕಲ್ಕಾಜಿ ಶಾಸಕಿ ಅತಿಶಿ ಅವರು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಪತ್ರ ಬರೆದಿದ್ದು, “ಬಿಜೆಪಿ ಆಡಳಿತದಲ್ಲಿ ದೆಹಲಿಯು ಅಪರಾಧ, ಸುಲಿಗೆ ಹಾಗೂ ಗ್ಯಾಂಗ್ ವಾರ್‌ಗಳ ರಾಜಧಾನಿಯಾಗಿ ಮಾರ್ಪಟ್ಟಿದೆ. ದೆಹಲಿಯ ನಿವಾಸಿಗಳು ಇನ್ನು ಮುಂದೆ ತಮ್ಮ ಮನೆಗಳು, ಮಾರುಕಟ್ಟೆಗಳು ಅಥವಾ ಪೂಜಾ ಸ್ಥಳಗಳಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು, “ಕಲ್ಕಾಜಿ ದೇವಾಲಯದಲ್ಲಿ ಸೇವಕನನ್ನು ಕ್ರೂರವಾಗಿ ಕೊಲ್ಲುವ ಮೊದಲು ಈ ದುಷ್ಕರ್ಮಿಗಳ ಕೈಗಳು ನಡುಗಲಿಲ್ಲವೇ? ಇದು ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವಲ್ಲದಿದ್ದರೆ, ಮತ್ತೇನು? ಬಿಜೆಪಿಯ ನಾಲ್ಕು ಎಂಜಿನ್‌ಗಳು ದೆಹಲಿಯನ್ನು ಇಂತಹ ದುಸ್ಥಿತಿಗೆ ತಂದಿವೆ. ಈಗ ದೇವಾಲಯಗಳಲ್ಲಿಯೂ ಸಹ ಇಂತಹ ಘಟನೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಯಾರಾದರೂ ಸುರಕ್ಷಿತವಾಗಿದ್ದಾರೆಯೇ ಅಥವಾ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ಎಎಪಿಯ ಆರೋಪಕ್ಕೆ ಬಿಜೆಪಿ ಅಥವಾ ದೆಹಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳವನ್ನು BJPಗೆ ಕೊಟ್ಟ ಗ್ಯಾನೇಶ್‌ ಕುಮಾರ್‌ಗೆ ‘ಭಾರತ ರತ್ನ’ ಕೊಡಿ: ಜೆಕೆ ಸಿಎಂ ಒಮರ್ ಅಬ್ದುಲ್ಲಾ

ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿರುವ ಕೇಂದ್ರ ಚುನಾವಣಾ ಆಯೋಗದ (ECI)...

ನಾವು ‘ಇಂಡಿಯಾ’ ಒಕ್ಕೂಟದ ಭಾಗವಲ್ಲ, ಸಭೆಗೆ ಹಾಜರಾಗಲ್ಲ: ಎಎಪಿ ನಾಯಕ ಸಂಜಯ್ ಸಿಂಗ್

ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಸಭೆಯಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)...

SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ...

​’ಇದು ಶತಮಾನದ ಅತಿ ದೊಡ್ಡ ನಾಟಕ’: ನಿರ್ಮಲಾ ಸೀತಾರಾಮನ್ ಸಿಟಿ ಬಸ್ ಪ್ರಯಾಣಕ್ಕೆ ನೆಟ್ಟಿಗರ ಕಟು ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ...