ಭಾರತ, ಚೀನಾ ನಡುವೆ ನೇರ ವಿಮಾನಯಾನ ಮತ್ತೆ ಆರಂಭ: ಪಿಎಂ ನರೇಂದ್ರ ಮೋದಿ

Date:

ಭಾರತ ಮತ್ತು ಚೀನಾ ನಡುವೆ ನೇರ ವಿಮಾನಯಾನ ಮತ್ತೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಯ ಬಳಿಕ ಈ ಮಾಹಿತಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ.

- Advertisement -

ಕೋವಿಡ್ ಸಾಂಕ್ರಾಮಿಕದ ಬಳಿಕ 2020ರಿಂದ ಐದು ವರ್ಷಗಳ ಕಾಲ ಉಭಯ ದೇಶಗಳ ನಡುವೆ ನೇರ ವಿಮಾನ ಹಾರಾಟ ಸೇವೆ ಇರಲಿಲ್ಲ. ಕೋವಿಡ್ ಬಳಿಕ ಗಾಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸಂಘರ್ಷದ ಹಿನ್ನೆಲೆ ವಿಮಾನ ಪುನರ್ ಆರಂಭ ಮಾಡಿರಲಿಲ್ಲ. ಇದೀಗ ವಿಮಾನಯಾನ ಪುನರಾರಂಭಿಸಲು ದೇಶಗಳು ಒಪ್ಪಿಕೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು

ಕೋವಿಡ್ ಬಳಿಕ ಸರಕು ಸಾಗಣೆ ಮತ್ತು ಪ್ರಯಾಣಿಕರ ಪ್ರಯಾಣ ಥೈಲ್ಯಾಂಡ್, ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಂತಹ ಮೂರನೇ ದೇಶಗಳ ಮೂಲಕ ನಡೆಯುತ್ತಿತ್ತು. ಇದು ಪ್ರಯಾಣದ ಅವಧಿ ಮತ್ತು ವೆಚ್ಚವನ್ನು ಹೆಚ್ಚಿಸಿತ್ತು. ಆದರೆ ಇದೀಗ ಮಾತುಕತೆ ನಡೆಸಿ ಮತ್ತೆ ವಿಮಾನಯಾನ ಆರಂಭಕ್ಕೆ ಒಪ್ಪಲಾಗಿದೆ.

“ನಾವು ಏಷ್ಯಾದ ಪ್ರಮುಖ ಆರ್ಥಿಕ ಕಾರಿಡಾರ್‌ಗಳಲ್ಲಿ ಒಂದನ್ನು ಮತ್ತೆ ತೆರೆಯುತ್ತಿದ್ದೇವೆ. ಈ ನಿರ್ಧಾರವು ಎರಡೂ ದೇಶಗಳಾದ್ಯಂತ ವ್ಯವಹಾರ ನಡೆಸಲು ಸಹಾಯವಾಗಲಿದೆ. ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ ಸಂಚಾರಕ್ಕೆ ಪ್ರಯೋಜನವಾಗಲಿದೆ” ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ವರದಿಯಾಗಿದೆ.

2019ರ ಹಣಕಾಸು ವರ್ಷದಲ್ಲಿ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ, ಭಾರತ, ಚೀನಾ ನಡುವೆ 816,000 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದರು, ಏರ್ ಇಂಡಿಯಾ ಮತ್ತು ಇಂಡಿಗೊದಂತಹ ಭಾರತೀಯ ವಿಮಾನಯಾನ ಸಂಸ್ಥೆಗಳು ಚೀನೀ ವಿಮಾನಯಾನ ಸಂಸ್ಥೆಗಳೊಂದಿಗೆ ನೂರಾರು ಮಾಸಿಕ ವಿಮಾನಗಳನ್ನು ನಿರ್ವಹಿಸುತ್ತಿದ್ದವು. ಸರಕು ಸಾಗಣೆಯು ಸಹ ಗಮನಾರ್ಹವಾಗಿತ್ತು. ವಾರ್ಷಿಕವಾಗಿ ಸುಮಾರು 30,000 ಟನ್‌ಗಳನ್ನು ರವಾನಿಸಲಾಗುತ್ತಿತ್ತು. ಭಾರತ ಮತ್ತು ಯುಎಸ್ ನಡುವಿನ ಸರಕು ಪ್ರಮಾಣಕ್ಕಿಂತ ಹೆಚ್ಚು ಇದಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾನು ಎಷ್ಟೇ ಮೂರ್ಖತನದ ಮಾತು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ: ಟ್ರಂಪ್

"ನಾನು ಎಷ್ಟೇ ಮೂರ್ಖತನದ ಮಾತುಗಳನ್ನು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ" ಎಂದು...

ಪ್ರತಿಭಟನಾಕಾರರ ಬಂಧನ ಪ್ರಜಾಪ್ರಭುತ್ವದ ಹಕ್ಕುಗಳ ದಮನ: ದೆಹಲಿ ಪೊಲೀಸ್ ಕ್ರಮಕ್ಕೆ ವಿಶ್ವಸಂಸ್ಥೆ ಆಕ್ಷೇಪ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ...