ರಾಜ್ಯ ಸ್ಥಾನಮಾನ ಬೇಡಿಕೆಗೆ ಆಗ್ರಹಿಸಿ ಲಡಾಖ್‌ನಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ

Date:

ಕೇಂದ್ರಾಡಳಿತ ಪ್ರದೇಶ ಲಡಾಖ್‌ ಅನ್ನು 6ನೇ ಪರಿಚ್ಛೇದದಡಿ ರಾಜ್ಯ ಸ್ಥಾನಮಾನ ಹಾಗೂ ಸಾಂವಿಧಾನಿಕ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಲಡಾಖ್‌ನ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು.

ಲೇಹ್‌ ಕೇಂದ್ರ ಸಂಸ್ಥೆ(ಎಲ್‌ಎಬಿ), ಕಾರ್ಗಿಲ್ ಪ್ರಜಾಸತ್ತಾತ್ಮಕ ಒಕ್ಕೂಟ(ಕೆಡಿಎ) ಆಯೋಜಿಸಿದ್ದ ಜಂಟಿ ಪ್ರತಿಭಟನೆಯಲ್ಲಿ ಸಾವಿರಾರು ಪುರುಷರು ಹಾಗೂ ಮಹಿಳೆಯರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಪಾಲ್ಗೊಂಡಿದ್ದರು. ಲಡಾಖ್‌ನಲ್ಲಿ ವಾಣಿಜ್ಯೋದ್ಯಮ ಸಂಪೂರ್ಣ ಸ್ಥಗಿತಗೊಂಡಿತ್ತು.

ಎಲ್‌ಎಬಿ ಹಾಗೂ ಕೆಡಿಎ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ ಅನ್ನು ಸಂವಿಧಾನದ ಆರನೇ ಪರಿಚ್ಚೇದದಡಿ ರಾಜ್ಯದ ಸ್ಥಾನಮಾನಕ್ಕಾಗಿ ಒತ್ತಾಯಿಸಿ 2021ರಿಂದ ಒತ್ತಾಯಿಸುತ್ತಾ ಬಂದಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯದ ಸ್ಥಾನಮಾನದ ಜೊತೆಗೆ ಬುಡಕಟ್ಟು ಸ್ಥಾನಮಾನ, ಸ್ಥಳೀಯರಿಗೆ ಉದ್ಯೋಗ ಮೀಸಲು ಹಾಗೂ ಲೇಹ್ ಹಾಗೂ ಕಾರ್ಗಿಲ್ ಜಿಲ್ಲೆಗಳನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳನ್ನಾಗಿ ರಚಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಆಗಸ್ಟ್ 5, 2019ರಂದು ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ  ಸಂವಿಧಾನದ 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?

ಅಂದಿನಿಂದ ಲಡಾಖ್ ನಿವಾಸಿಗಳು ಕೇಂದ್ರಾಡಳಿತ ಪ್ರದೇಶದ ಸುದೀರ್ಘ ಕಾಲದ ಆಡಳಿತಾತ್ಮಕ ನೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸಂಪೂರ್ಣ ಸ್ಥಾನಮಾನಕ್ಕಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. ರಾಜ್ಯ ಸ್ಥಾನಮಾನದಿಂದ ಪ್ರತ್ಯೇಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದರ ಜೊತೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಜನವರಿ 2023ರ ಮೊದಲು ಕೇಂದ್ರ ಗೃಹ ಸಚಿವಾಲಯ ಕೇಂದ್ರ ಸಚಿವರ ನೇತೃತ್ವದಲ್ಲಿ ಲಡಾಖ್ ಜನರಿಗೆ ಭೂಮಿ ಮತ್ತು ಉದ್ಯೋಗ ರಕ್ಷಣೆಯನ್ನು ಖಚಿತಗೊಳಿಸುವುದನ್ನು ಒಳಗೊಂಡು ಉನ್ನತ ಹಂತದ ಸಮಿತಿಯನ್ನು ಸ್ಥಾಪಿಸಲಾಗಿತ್ತು.

ಲಡಾಖ್ ಲೋಕಸೇವಾ ಆಯೋಗ ಸ್ಥಾಪಿಸುವುದರ ಮೂಲಕ ಲಡಾಖ್‌ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ ಒದಗಿಸಿಕೊಡುವ ಜ್ಞಾಪನಾ ಮನವಿಯ ಬೇಡಿಕೆಯನ್ನು ಲಡಾಖ್‌ ಸಂಘಸಂಸ್ಥೆಗಳ ಮುಖ್ಯಸ್ಥರು ಇತ್ತೀಚಿಗೆ ಸಲ್ಲಿಸಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೇಂದ್ರ ಸಚಿವರ ನಡುವೆ ಸಭೆಯ ದಿನಾಂಕ ಈ ತಿಂಗಳಲ್ಲಿ(ಫೆಬ್ರವರಿ) ಪೂರ್ಣಗೊಳ್ಳಲಿದೆ.

ಜ್ಞಾಪನಾ ಮನವಿಯು ಜಮ್ಮು ಕಾಶ್ಮೀರ ಕಾಯ್ದೆ 2019ರ ಪುನರ್ರಚನೆ ತಿದ್ದುಪಡಿಯ ಕರಡು ಮಸೂದೆಯನ್ನು ಒಳಗೊಂಡಿದೆ. ಸಿಕ್ಕೀಂನಂತೆ ಎರಡು ಲೋಕಸಭಾ ಸ್ಥಾನ ಹಾಗೂ ಒಂದು ರಾಜ್ಯಸಭಾ ಸ್ಥಾನ ಒಳಗೊಂಡಿರಬೇಕೆಂದು ಉದ್ದೇಶಿತ ಕರಡು ಮಸೂದೆ ತಿದ್ದುಪಡಿ ಹೇಳುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೆಎನ್‌ಯು ವಿವಿಯಲ್ಲಿ ಎಡ ಪಂಥೀಯ – ಎಬಿವಿಪಿ ವಿದ್ಯಾರ್ಥಿಗಳ ನಡುವೆ ಗಲಭೆ: ಹಲವರಿಗೆ ಗಾಯ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ಬೆಂಬಲಿತ...

ನ್ಯೂಸ್‌ ಚಾನೆಲ್‌ಗಳಲ್ಲಿ ಕೋಮು ದ್ವೇಷ ಪ್ರಸಾರ: ಟೈಮ್ಸ್‌ ನೌ, ನ್ಯೂಸ್‌18ಗೆ ದಂಡ; ಆಜ್ ತಕ್‌ಗೆ ಎಚ್ಚರಿಕೆ

ದ್ವೇಷ ಮತ್ತು ಕೋಮು ಸೌಹಾರ್ದತೆ ಕದಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಟೈಮ್ಸ್‌...

ಪೆಟ್ರೋಲಿಯಂ ಮೇಲಿನ ವಿಂಡ್‌ಫಾಲ್ ತೆರಿಗೆ ಹೆಚ್ಚಳ

ಶುಕ್ರವಾರದಿಂದ ಜಾರಿಗೆ ಬರುವಂತೆ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್...

ಗುಜರಾತ್‌ | 2 ವರ್ಷದಿಂದ 3.8 ಲಕ್ಷ ಅರ್ಹ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ

ಗುಜರಾತ್‌ನಲ್ಲಿ 2.75 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಿದ್ದಾರೆ....