ಟೋಲ್ ಪ್ಲಾಜ಼ಾಗಳ ಸುತ್ತಮುತ್ತಲ ನಿವಾಸಿಗಳಿಗೆ ಡಿಜಿಟಲ್ ಪಾಸ್ ನೆಪ; ಉದ್ದೇಶ ಹಣ ವಸೂಲಿಯಲ್ಲವೇ?

Date:

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ ‘ಬ್ಯಾರಿಯರ್-ರಹಿತ ಟೋಲ್ ವ್ಯವಸ್ಥೆ’ ಕಾರಣದಿಂದಾಗಿ, ಟೋಲ್ ಪ್ಲಾಜ಼ಾಗಳ ಸುತ್ತಮುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯ ನಿವಾಸಿಗಳಿಗಾಗಿ ಮುಂದಿನ ತಿಂಗಳಿನಿಂದ ಹೊಸ ಡಿಜಿಟಲ್ ಪಾಸ್ ವ್ಯವಸ್ಥೆಯನ್ನು ತರಲಾಗುತ್ತಿದೆ. ಆದರೆ ಡಿಜಿಟಲ್ ಪಾಸ್ ನೆಪದಲ್ಲಿ ಹಣ ವಸೂಲಿಯಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.

- Advertisement -

ಕೇಂದ್ರ ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ, ಈ ಡಿಜಿಟಲ್ ಪಾಸ್ ಕೇವಲ ಸ್ಥಳೀಯ ನಿವಾಸಿಗಳಿಗಾಗಿ ಮಾತ್ರ ಸಿಗಲಿದೆ. ಈ ಹೊಸ ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಮುಂದಿನ ತಿಂಗಳಿನಿಂದಲೇ ವಿತರಿಸಲು ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಸದ್ಯ ನಿಯಮಗಳ ಪ್ರಕಾರ ಸ್ಥಳೀಯ ಮಾಸಿಕ ಪಾಸ್‌ಗೆ ₹340 ರಿಂದ ₹350 ಶುಲ್ಕವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಇದನ್ನು ಓದಿದ್ದೀರಾ? ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಟೋಲ್‌ನಿಂದ 20 ಕಿ.ಮೀ ವ್ಯಾಪ್ತಿಯಲ್ಲೇ ವಾಸಿಸುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲೇ ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ಹಾಗೆಯೇ ಈ ಡಿಜಿಟಲ್ ಪಾಸ್ ವಾಹನದ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಜೊತೆಗೆ ನೇರವಾಗಿ ಲಿಂಕ್ ಆಗಿರುತ್ತದೆ.

ಈ ಪಾಸ್ ಹೊಂದಿರುವ ಸ್ಥಳೀಯರು ಆ ನಿರ್ದಿಷ್ಟ ಟೋಲ್ ಪ್ಲಾಜ಼ಾದಲ್ಲಿ ತಿಂಗಳಿಗೆ ಎಷ್ಟು ಬಾರಿಯಾದರೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸಂಚರಿಸಬಹುದು.

ಈ ಹಿಂದೆ ಸ್ಥಳೀಯರು ಟೋಲ್ ಸಿಬ್ಬಂದಿ ಪರಿಚಯದ ಮೇಲೆ ಅಥವಾ ಐಡಿ ಕಾರ್ಡ್ ತೋರಿಸಿ ಪಾಸ್ ಇಲ್ಲದೆಯೂ ಸಂಚರಿಸುತ್ತಿದ್ದರು. ಆದರೆ ಹೊಸ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಬ್ಯಾರಿಯರ್‌ಗಳಿರುವುದಿಲ್ಲ, ಬದಲಿಗೆ ಕ್ಯಾಮೆರಾಗಳು ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ನೇರವಾಗಿ ದಂಡ ಅಥವಾ ಇ-ನೋಟಿಸ್ ಕಳುಹಿಸುತ್ತವೆ. ಇದೀಗ ಈ ಡಿಜಿಟಲ್ ಪಾಸ್ ಕಡ್ಡಾಯಗೊಳಿಸಲಾಗುತ್ತಿದೆ.

ಪಾಸ್ ನೆಪದಲ್ಲಿ ಹಣ ವಸೂಲಿಯಲ್ಲವೇ?

ಹಲವು ವರ್ಷಗಳಿಂದ ಟೋಲ್ ಪ್ಲಾಜ಼ಾಗಳ ಸುತ್ತಮುತ್ತಲಿನ ಜನರು ತಮ್ಮ ದೈನಂದಿನ ಕೆಲಸ, ಕೃಷಿ ಅಥವಾ ಮಾರುಕಟ್ಟೆಗೆ ಹೋಗಲು ಯಾವುದೇ ಶುಲ್ಕವಿಲ್ಲದೆ ಸಂಚರಿಸುತ್ತಿದ್ದರು. ಈಗ ಡಿಜಿಟಲ್ ಪಾಸ್ ನೆಪದಲ್ಲಿ ಹಣ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ ಎಂಬುದು ಜನರ ಆರೋಪ. “ನಾವು ನಮ್ಮದೇ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗಲು ನಮ್ಮದೇ ಭೂಮಿ ಕಳೆದುಕೊಂಡು ನಿರ್ಮಾಣವಾದ ರಸ್ತೆಗೆ ದಿನಾ ಟ್ಯಾಕ್ಸ್ ಕಟ್ಟಬೇಕಾ?” ಎಂಬುದು ಸ್ಥಳೀಯ ಹೋರಾಟಗಾರರ ಪ್ರಶ್ನೆ.

ಅದಕ್ಕೂ ಮುಖ್ಯವಾಗಿ ಗ್ರಾಮೀಣ ಭಾಗದ ಹಿರಿಯ ನಾಗರಿಕರಿಗೆ ಅಥವಾ ಸಣ್ಣಪುಟ್ಟ ರೈತರಿಗೆ ಆನ್‌ಲೈನ್‌ನಲ್ಲಿ ದಾಖಲೆ ಅಪ್‌ಲೋಡ್ ಮಾಡುವುದು, ಫಾಸ್ಟ್‌ಟ್ಯಾಗ್ ಲಿಂಕ್ ಮಾಡುವುದು ಮತ್ತು ಪ್ರತಿ ತಿಂಗಳು ಆನ್‌ಲೈನ್ ರೀಚಾರ್ಜ್ ಮಾಡಿಕೊಳ್ಳುವುದು ತೀರಾ ಸಂಕೀರ್ಣ ಕೆಲಸ ಎಂಬ ವಾದವಿದೆ.

ಇನ್ನೊಂದೆಡೆ ಹಲವರ ಆಧಾರ್ ಕಾರ್ಡ್‌ನಲ್ಲಿ ಹಳ್ಳಿಯ ಹೆಸರಿರುತ್ತದೆಯೇ ಹೊರತು, ಟೋಲ್‌ನಿಂದ ನಿಖರವಾಗಿ ಎಷ್ಟು ಕಿಲೋಮೀಟರ್ ದೂರವಿದೆ ಎಂದು ನಮೂದಾಗಿರುವುದಿಲ್ಲ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ಅರ್ಹ ಸ್ಥಳೀಯರಿಗೂ ಪಾಸ್ ಸಿಗದೆ ವಂಚಿತರಾಗುವ ಭೀತಿಯೂ ಇದೆ.

ಇನ್ನು ಟೋಲ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಬಾಡಿಗೆಗೆ ಇರುವ ಉದ್ಯೋಗಿಗಳು ಅಥವಾ ಕಾರ್ಮಿಕರ ಆಧಾರ್ ಕಾರ್ಡ್‌ನಲ್ಲಿ ಅವರ ಸ್ವಂತ ಊರಿನ ವಿಳಾಸ ಇರುತ್ತದೆ. ಹೀಗಾಗಿ ಅವರು ಸ್ಥಳೀಯರಾಗಿದ್ದರೂ ಅವರಿಗೆ ಈ ರಿಯಾಯಿತಿ ಪಾಸ್ ಸಿಗುವುದಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ: ತಿಲಕ, ಆಧಾರ್ ಕಾರ್ಡ್ ಹಾಗೂ ಕುಟುಂಬ ಸಮೇತ ಆಗಮನ ಕಡ್ಡಾಯ!

ಮುಂಬೈನ ಬೋರಿವಲಿಯಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ ನವರಾತ್ರಿ ಗರ್ಬಾ ಮತ್ತು ದಾಂಡಿಯಾ ಉತ್ಸವದಲ್ಲಿ...

ಯುಪಿ ಚುನಾವಣೆ | ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಮತಗಳನ್ನು 27,000 ಕಡಿತಗೊಳಿಸುತ್ತೇವೆ: ಅಖಿಲೇಶ್ ಪ್ರತಿಜ್ಞೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ....

ಅಮೃತಸರದಲ್ಲಿ ಕಳೆದುಹೋಗಿ ಗಯಾದಲ್ಲಿ ಪತ್ತೆ; ಎಐ ತಂತ್ರಜ್ಞಾನದ ನೆರವಿನಿಂದ ಕುಟುಂಬವನ್ನು ಸೇರಿದ ವ್ಯಕ್ತಿ

ಪಂಜಾಬ್‌ನಿಂದ ದಾರಿ ತಪ್ಪಿ 1,200 ಕಿಲೋಮೀಟರ್‌ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...