ನಡುರಸ್ತೆಯಲ್ಲೇ ಪ್ರೇಯಸಿ ಕೊಂದ ವಿಕೃತ ಪ್ರೇಮಿ: ‘ಲವ್ ಜಿಹಾದ್ ಅಲ್ಲ – ಮಾಧ್ಯಮಗಳು ಸುದ್ದಿ ಮಾಡಿಲ್ಲ’ ನೆಟ್ಟಿಗರ ಆಕ್ರೋಶ

Date:

ಮುಂಬೈನ ವಸಾಯ್‌ನ ಜನನಿಬಿಡ ರಸ್ತೆಯೊಂದರಲ್ಲಿ 20 ವರ್ಷದ ಯುವಕನೋರ್ವ ತನ್ನ ಮಾಜಿ ಪ್ರಿಯತಮೆಯನ್ನು ಕಬ್ಬಿಣದ ಸ್ಪ್ಯಾನರ್‌ನಿಂದ 15 ಬಾರಿ ಹೊಡೆದು ಕೊಂದಿರುವ ಅಮಾನುಷ ದುರ್ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನನ್ನು ತಡೆಯದ ಜನರು ಸುತ್ತಲೂ ನಿಂತು ನೋಡುವುದು ವಿಡಿಯೋದಲ್ಲಿ ಕಂಡುಬಂದಿದೆ.

ಆರೋಪಿ ರೋಹಿತ್ ಯಾದವ್ ಎಂಬ ಯುವಕ ತನ್ನ ಮಾಜಿ ಪ್ರೇಯಸಿ ಆರತಿ ಯಾದವ್‌ ಎಂಬಾಕೆಯನ್ನು ನಡುರಸ್ತೆಯಲ್ಲೇ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿಗೆ ಬೇರೆ ಯುವಕನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆ ಸಾಯುವವರೆಗೂ ನಿರಂತರವಾಗಿ ಹೊಡೆದಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರತಿ ಯಾದವ್ ಕೆಲಸಕ್ಕೆ ಹೋಗುತ್ತಿದ್ದಾಗ ವಸಾಯ್‌ನ ಪೂರ್ವ ಚಿಂಚ್ಪಾಡಾ ಪ್ರದೇಶದಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಕೊಪ್ಪಳ | ಗುಟ್ಕಾ ತಂದುಕೊಡದ ಕಾರಣಕ್ಕೆ 7 ವರ್ಷದ ಬಾಲಕಿ ಹತ್ಯೆ: ಆರೋಪಿ ಬಂಧನ

“ಇದು ಲವ್‌ ಜಿಹಾದ್ ಅಲ್ಲದ ಕಾರಣ, ಸುದ್ದಿ ಮಾಧ್ಯಮಗಳು ಸುದ್ದಿ ಮಾಡಿಲ್ಲ. ಸುದ್ದಿಯನ್ನು ಹೈಲೈಟ್ ಮಾಡುವುದಿಲ್ಲ” ಎಂದು ಪತ್ರಕರ್ತ ಮೊಹಮ್ಮದ್ ಜುಬೇರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜುಬೇರ್, “ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯನ್ನು ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ರೋಹಿತ್ ಮತ್ತು ಆರತಿ 6 ವರ್ಷಗಳ ಕಾಲ ಪ್ರೀತಿಸಿದ್ದರು. ಇತ್ತೀಚೆಗೆ ಅವರ ಸಂಬಂಧ ಮುರಿದುಬಿದ್ದಿದೆ. ಇಲ್ಲಿ ‘ಲವ್ ಜಿಹಾದ್’ ಇಲ್ಲದ ಕಾರಣ ಸುದ್ದಿ ಸಂಸ್ಥೆಗಳು ಇದನ್ನು ಹೈಲೈಟ್ ಮಾಡುವುದಿಲ್ಲ” ಎಂದಿದ್ದಾರೆ.

ವ್ಯಕ್ತಿಯೋರ್ವ ರೋಹಿತ್‌ನನ್ನು ತಡೆಯಲು ಪ್ರಯತ್ನಿಸಿದ್ದು, ಆ ವ್ಯಕ್ತಿಯನ್ನು ದೂರ ತಳ್ಳಿ, ಆತನಿಗೂ ಸ್ಪ್ಯಾನರ್‌ನಲ್ಲಿ ಹೊಡೆಯುವ ಬೆದರಿಕೆ ಹಾಕಿದ್ದಾನೆ. ಆತಂಕಗೊಂಡ ವ್ಯಕ್ತಿ ದೂರ ಸರಿದಿರುವುದು ವಿಡಿಯೋದಲ್ಲಿ ಕಾಣಬಹುದು. ಇನ್ನು ಜನರು ಅತ್ತಿತ್ತ ಓಡಾಡುತ್ತಿದ್ದರೂ ಕೂಡಾ ಬೇರೆ ಯಾರೂ ದಾಳಿಯನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ.

ಇದನ್ನು ಓದಿದ್ದೀರಾ?  ಮಹಿಳೆಯರ ಕೊಲೆ | ಪೊಲೀಸರ ತನಿಖೆಯಲ್ಲೇ ಲೋಪವಿದೆ: ಬಾಲನ್‌

ಇನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ರೋಹಿತ್ ಆಕೆ ಸತ್ತ ಬಳಿಕ ಶವವನ್ನು ಹಿಡಿದು ‘ನನಗೇಕೆ ಹೀಗೆ ಮಾಡಿದೆ, ಯಾಕೆ ಹೀಗೆ ಮಾಡಿದೆ’ ಎಂದು ಹಿಂದಿಯಲ್ಲಿ ಕಿರುಚಾಡಿ ಮತ್ತೊಮ್ಮೆ ಆಕೆಗೆ ಹೊಡೆದಿರುವುದು ಕಂಡುಬಂದಿದೆ. ಅದಾದ ಬಳಿಕ ರಕ್ತಸಿಕ್ತ ಸ್ಪ್ಯಾನರ್ ಅನ್ನು ಪಕ್ಕಕ್ಕೆ ಎಸೆದು ಹೋಗಿದ್ದಾನೆ.

ಪೊಲೀಸರು ಆರೋಪಿ ರೋಹಿತ್ ಯಾದವ್‌ನನ್ನು ಬಂಧಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

"ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ...

ಕೇರಳ | ಆಸ್ಪತ್ರೆಗೆ ತಪಾಸಣೆಗೆಂದು ತೆರಳಿ 2 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ!

ವ್ಯಕ್ತಿಯೊಬ್ಬರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತೆರಳಿ 2 ದಿನಗಳ...

ಮೋದಿ ನೇತೃತ್ವದಲ್ಲಿ ಟೈಟಾನಿಕ್ ಹಡಗಿನಂತೆ ಶಾಶ್ವತವಾಗಿ ಮುಳಗಲಿರುವ ಬಿಜೆಪಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗುತ್ತದೆ...

ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೋಮವಾರ...