ಗುಜರಾತ್ | ಎಮ್ಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ಹತ್ಯೆಗೈದ ಗೋರಕ್ಷಕರು

Date:

ಎಮ್ಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಗೋರಕ್ಷಕರು ಹತ್ಯೆ ಗೈದಿದ್ದಾರೆ ಎಂದು ವರದಿಯಾಗಿದೆ. ಗುಜರಾತ್‌ನ ಬನಸ್ಕಾಂತದಲ್ಲಿ ಗುರುವಾರ ಘಟನೆ ನಡೆಸಿದೆ. ಆದರೆ, ಇದು ಗುಂಪುಹತ್ಯೆಯಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಗುರುವಾರ ಮುಂಜಾನೆ ಮಿಶ್ರಿಖಾನ್ ಬಲೋಚ್ ಎಂಬಾತ ಎಮ್ಮೆಗಳನ್ನು ಪ್ರಾಣಿ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಈ ವೇಳೆ, ಅವರನ್ನು ತಡೆದ ಐವರ ಗುಂಪು, ಆತನನ್ನು ಹೊಡೆದು ಕೊಂದಿದೆ ಎಂದು ಟಿಒಐ ವರದಿ ಮಾಡಿದೆ.

ಮಿಶ್ರಿಖಾನ್ ಜೊತೆಯಲ್ಲಿ ಹುಸೇನ್ಖಾನ್ ಬಲೋಚ್ ಎಂಬ ಮತ್ತೊಬ್ಬ ವ್ಯಕ್ತಿ ಇದ್ದರು. ಆತ ದಾಳಿಕೋರರಿಂದ ತಪ್ಪಿಸಿಕೊಂಡಿದ್ದು, ಬದುಕುಳಿದಿದ್ದಾನೆ. ಪೊಲೀಸರಿಗೆ ಆತನೇ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರೋಪಿಗಳ ವಿರುದ್ಧ ಕೊಲೆ ಮತ್ತು ಮಾರಕಾಸ್ತ್ರ ಬಳಸಿ ಗಲಭೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ‘ಇದು ಗುಂಪು ಹತ್ಯೆಯಲ್ಲ. ಬದಲಾಗಿ, ಮೃತ ಮತ್ತು ಆರೋಪಿಗಳ ನಡುವಿನ ಹಳೆಯ ವೈಷಮ್ಯದಿಂದ ಕೃತ್ಯ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಆರೋಪಿಗಳಲ್ಲಿ ಅಖೇರಾಜ್‌ಸಿನ್ಹ್ ಪರ್ಬತ್‌ಸಿನ್ಹ್ ವಘೇಲಾ ಎಂಬಾತನೂ ಸೇರಿದ್ದಾನೆ ಎನ್ನಲಾಗಿದೆ. ಆತ, ಕಳೆದ ವರ್ಷ ಜುಲೈನಿಂದ ಗೋರಕ್ಷಣೆ ಸಂಬಂಧಿತ ಹಿಂಸಾಚಾರ ಘಟನೆಯಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಐವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇತರ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀರಿನ ಸಮಸ್ಯೆ| ದೆಹಲಿ ಜಲ ಮಂಡಳಿ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು

ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ...

ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ....

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...

ಯುಎಸ್‌ನ ಪ್ರತಿ ಐವರು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರು!

ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ವಲಸಿಗ ವೈದ್ಯರು, ಶಸ್ತ್ರಚಿಕಿತ್ಸಕರ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನವನ್ನು...