ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾರ್ಮಕ್ಕಿ ಗ್ರಾಮ ಮಹಿಳೆ ಹಾಗೂ ಮೂರು ವರ್ಷದ ಮಗು ಸಮೇತ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಮಹಿಳೆ ಪ್ರೇಮ, ನನ್ನ ಮಗ ಆದಿತ್ಯ ಕೂಡ ನಾಪತ್ತೆಯಾಗಿದ್ದಾನೆ. ಸುಮಾರು 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದೆ, ನಮಗೆ ಎರಡು ಮಕ್ಕಳಿದ್ದಾರೆ. ಮದವೆಯಾದಾಗಿನಿಂದಲೂ ನಾವು ಚನ್ನಾಗಿದ್ದೇವು.
11:00 ಗಂಟೆ ವೇಳೆ ನಾನು ಮೂಡಿಗೆರೆ ಕೆಲಸಕ್ಕೆ ಬಂದಿದ್ದೆನು ಮನೆಯಲ್ಲಿ ನನ್ನ ಪತ್ನಿ ಪ್ರೇಮ ಹಾಗೂ ನನ್ನ ಎರಡನೇ ಮಗ ಮೂರು ವರ್ಷದ ಆದಿತ್ಯ ಮನೆಯಲ್ಲಿದ್ದರು. ನನ್ನ ತಂಗಿಯೂ ಸಹ ಮನೆಯಲ್ಲಿದ್ದಳು. ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಪತ್ನಿ ಹಾಗೂ ಎರಡನೇ ಮಗ ಕಾಣಿಸಲಿಲ್ಲ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು
ನಮ್ಮ ಗ್ರಾಮದ ಹರೀಶ ಎಂಬಾತ ನನಗೆ ಪರಿಚಯವಿರುತ್ತಾನೆ. ಹರೀಶನೊಂದಿಗೆ ನನ್ನ ಪತ್ನಿ ಪ್ರೇಮ ಸಹ ಮಾತನಾಡುತ್ತಿದ್ದಳು. ಹಾಗು ಮೊಬೈಲ್ ನಲ್ಲಿ, Instagram ನಲ್ಲಿ ಹರೀಶನೊಂದಿಗೆ ಚಾಟ್ ಮಾಡುತ್ತಿದ್ದಳು ನಾನು ಅನೇಕ ಬಾರಿ ಅವಳಿಗೆ ಬುದ್ದಿ ಹೇಳಿದ್ದೆನು. ನಮ್ಮ ಗ್ರಾಮದ ಹರೀಶನೂ ಸಹ ನಿನ್ನೆ ಸಂಜೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಕಾಣೆಯಾದ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ.





