ಪಾಕ್ ಜನರು ಭಾರತೀಯರ ಬದ್ಧ ಶತ್ರುಗಳಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

Date:

“ಪಾಕಿಸ್ತಾನದ ಜನರು ಭಾರತೀಯರ ಸಂಪೂರ್ಣ ಬದ್ಧ ವೈರಿಗಳೇನೂ ಅಲ್ಲ. ಶಾಶ್ವತ ದ್ವೇಷವು ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

- Advertisement -

ಮುಂಬೈನಲ್ಲಿ ನಡೆದ ‘ಭಾರತದ ಅಂತರರಾಷ್ಟ್ರೀಯ ಏಕೀಕರಣ ರಾಷ್ಟ್ರಗಳ ಚಳವಳಿ’ಯ (IIMUN) 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಜನರೊಂದಿಗೆ (Gen Z) ನಡೆಸಿದ ಸಂವಾದದಲ್ಲಿ ಅವರು ಮಾತನ್ನಾಡಿದ್ದಾರೆ. “ದೇಶದಲ್ಲಿ ಯಾವುದೇ ಯುದ್ಧ ಅಥವಾ ಸಂಘರ್ಷದ ಪರಿಸ್ಥಿತಿ ಬಂದಾಗ ನಾವು ನಮ್ಮ ಸರ್ಕಾರ ಮತ್ತು ಮಿಲಿಟರಿಯ ನಿರ್ಧಾರಗಳ ಪರವಾಗಿ ದೃಢವಾಗಿ ನಿಲ್ಲುವುದು ಸಹಜ. ಭದ್ರತಾ ಬೆದರಿಕೆಯನ್ನು ಎದುರಿಸಲು ಅದು ಅಗತ್ಯ. ಆದರೆ, ಸಂಘರ್ಷದಿಂದ ಉಂಟಾಗುವ ವೈರತ್ವವೇ ಶಾಶ್ವತವಾಗಿ ಉಳಿಯಬಾರದು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

“ಯಾವುದೇ ಸಂಘರ್ಷಕ್ಕೆ ‘ಭಾರತೀಯ ಪರಿಹಾರ’ ಎಂದರೆ ಇತರರನ್ನು ನಾಶಮಾಡುವುದಲ್ಲ; ಬದಲಿಗೆ ಸಂವಾದ ಮತ್ತು ಸಾಮರಸ್ಯದ ಮೂಲಕ ಪರಿಹಾರ ಕಂಡುಕೊಳ್ಳುವುದಾಗಿದೆ” ಎಂದು ಹೇಳಿದ್ದಾರೆ.

“ನೆರೆಯ ರಾಷ್ಟ್ರಗಳೊಂದಿಗಿನ ನಮಗೆ ಐತಿಹಾಸಿಕ ಸಂಬಂಧವಿದೆ. ಚೀನಾದ ಜನರು ತಾವು ಭಾರತದಿಂದ 2,000 ವರ್ಷಗಳ ಕಾಲ ಸಾಂಸ್ಕೃತಿಕ ಮೌಲ್ಯಗಳನ್ನು ಪಡೆದುಕೊಂಡಿರುವುದಾಗಿ ಹೇಳುತ್ತಾರೆ. ಇತ್ತ ಪಾಕಿಸ್ತಾನವು ಕೇವಲ 100 ವರ್ಷಗಳ ಹಿಂದಿನವರೆಗೂ ಭಾರತದ್ದೇ ಭಾಗವಾಗಿತ್ತು. ಈ ಐತಿಹಾಸಿಕ ಸತ್ಯವನ್ನು ಮರೆಯಲು ಸಾಧ್ಯವಿಲ್ಲ. ಯುದ್ಧ ಅಥವಾ ಬಿಕ್ಕಟ್ಟು ಮುಗಿದ ನಂತರ, ನಾವು ಎಲ್ಲಿ ಸಂಬಂಧಗಳನ್ನು ಬಿಟ್ಟಿದ್ದೇವೋ ಅಲ್ಲಿಂದಲೇ ಮತ್ತೆ ಮುಂದುವರಿಯಬೇಕಾಗುತ್ತದೆ” ಎಂದಿದ್ದಾರೆ.

“ಭಾರತ ಮತ್ತು ಪಾಕಿಸ್ತಾನದ ನಡುವಿನ ಇಂದಿನ ಬಿಕ್ಕಟ್ಟಿಗೆ ಮುಖ್ಯವಾಗಿ ರಾಜಕೀಯ ಸನ್ನಿವೇಶಗಳೇ ಕಾರಣ. ಗಡಿಗಳು ಮತ್ತು ರಾಜಕೀಯ ವ್ಯವಸ್ಥೆಗಳು ಇಂದಿನ ವಾಸ್ತವಗಳಾಗಿದ್ದರೂ, ಅಂತಿಮವಾಗಿ ಮಾನವೀಯತೆಯೇ ಪ್ರಮುಖವಾದದ್ದು. ಒಂದು ದಿನ ಈ ಸಂಘರ್ಷ ಕೊನೆಗೊಂಡು ನಾವು ಒಂದಾಗಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಅಂದಹಾಗೆ,‌ ‘ಫ್ಯಾಸಿಸಂ ಹಲವು ನಾಲಿಗೆಗಳಲ್ಲಿ ನುಡಿಯುತ್ತದೆ’ ಎಂಬ ಮಾತಿದೆ. ಸರ್ವಾಧಿಕಾರಿ ಅಥವಾ ಉಗ್ರ ಕೋಮು ರಾಷ್ಟ್ರೀಯವಾದಿ ಸಿದ್ಧಾಂತಗಳು ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಭಾಷೆ ಮತ್ತು ಧೋರಣೆಯನ್ನು ಬದಲಾಯಿಸಿಕೊಳ್ಳುತ್ತವೆ. ಮೋಹನ್ ಭಾಗವತ್ ಅವರು ಜಾಗತಿಕ ವೇದಿಕೆಯಲ್ಲಿ ಅಥವಾ ‘Gen Z’ ಯುವಜನತೆಯೊಂದಿಗೆ ಸಂವಾದ ನಡೆಸುವಾಗ ಶಾಂತಿ, ಮಾನವೀಯತೆ ಹಾಗೂ ಸಂವಾದದಂತಹ ಉದಾರವಾದಿ ಮಾತುಗಳನ್ನು ಆಡುವುದು ಮೇಲ್ನೋಟಕ್ಕೆ ಸೌಹಾರ್ದಯುತವಾಗಿ ಕಂಡರೂ, ಇದು ಆರ್‌ಎಸ್‌ಎಸ್‌ನ ಮೂಲಭೂತ ಹಿಂದುತ್ವ ಅಜೆಂಡಾವನ್ನು ಮರೆಮಾಚುವ ಜಾಣತನದ ತಂತ್ರ ಎಂಬ ವಿಮರ್ಶೆಯಿದೆ. ಏಕೆಂದರೆ, ಒಂದೆಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಜನರ ಜೊತೆ ಸೌಹಾರ್ದತೆ ಮತ್ತು ಐತಿಹಾಸಿಕ ಏಕತೆಯ ಮಾತಾಡುವ ಆರ್‌ಎಸ್‌ಎಸ್, ದೇಶೀಯ ರಾಜಕೀಯದಲ್ಲಿ ಅದೇ ನೆರೆಯ ದೇಶವನ್ನು ಮತ್ತು ಅಲ್ಪಸಂಖ್ಯಾತರನ್ನು ‘ಶತ್ರು’ಗಳಾಗಿ ಬಿಂಬಿಸಿ ಧ್ರುವೀಕರಣದ ಲಾಭ ಪಡೆಯುತ್ತದೆ. ಬಹಿರಂಗವಾಗಿ ಶಾಂತಿ-ಮಾನವೀಯತೆಯ ಭಾಷೆ ಮತ್ತು ಆಂತರಿಕವಾಗಿ ಆಕ್ರಮಣಕಾರಿ ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರಚಾರ — ಈ ರೀತಿಯ ದ್ವಿಮುಖ ನಿಲುವುಗಳೇ ಫ್ಯಾಸಿಸ್ಟ್ ಮನಸ್ಥಿತಿಯು ವಿಭಿನ್ನ ವೇದಿಕೆಗಳಲ್ಲಿ ‘ಹಲವು ನಾಲಿಗೆಗಳಲ್ಲಿ’ ಮಾತನಾಡುವುದಕ್ಕೆ ಸ್ಪಷ್ಟ ಉದಾಹರಣೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...