ರಾಯಚೂರು | ಮಹಿಳೆಯರ ಹಕ್ಕು, ಸಮಾನತೆಗಾಗಿ ಹೋರಾಡಿದವರು ಅಂಬೇಡ್ಕರ್: ದೀಕ್ಷಾ ಎಸ್.ಎಲ್

Date:

ದೇಶದಲ್ಲಿ ತಾರತಮ್ಯ ಹಾಗೂ ನಿರ್ಲಕ್ಷಕ್ಕೆ ಒಳಗಾದ ಮಹಿಳೆಯರಿಗೆ, ಸಮಾಜದಲ್ಲಿ ಸಮಾನತೆಯಿಂದ ಬದುಕಲು ಬೇಕಾಗುವ ಎಲ್ಲಾ ಅವಕಾಶ ಮತ್ತು ಹಕ್ಕುಗಳಿಗಾಗಿ ಹೋರಾಡಿದವರು ಬಾಬಾಸಾಹೇಬ್ ಅಂಬೇಡ್ಕರ್ ಎಂದು ಬೇವಿನಬೆಂಚಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯಗುರುಗಳಾದ ದೀಕ್ಷಾ ಎಸ್.ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಮಂಜುಳಾ ಮಾಣಿಕ್ಯಂ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ಹಾಗೂ ಜನತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಬಲ್ಲಟಗಿ ವತಿಯಿಂದ ಶನಿವಾರ ಆಯೋಜಿಸಿದ್ದ 126 ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಬಹುಜನ ಚಿಂತಕ ಹಾಗೂ ಉಪನ್ಯಾಸಕ ಎಸ್.ಪ್ಯಾಟೆಪ್ಪ, ಅರಣ್ಯ ಇಲಾಖೆಯ ಯಲ್ಲಪ್ಪ ಮರ್ಚೆಡ್ ರಾಯಚೂರು, ಮುಖ್ಯಗುರುಗಳಾದ ಸುರೇಶ ರಘುನಾಥನಹಳ್ಳಿ, ಶಿಕ್ಷಕ ಆನಂದಕುಮಾರ್ ಗಾಜರಾಳ,, ಶಿಕ್ಷಕ ಮೋಹನ್ ರಾಮಕೃಷ್ಣ ರಾಯಚೂರು, , ನಿವೃತ್ತ ಎಎಸ್ಐ ರಾಜಪ್ಪ ಆಶಾಪೂರ, ಶಂಕರ್ ಜಗ್ಲಿ ಪೋಲೀಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ, ವಾಣಿಜ್ಯ ತೆರಿಗೆ ಇನ್ಸ್ ಪೆಕ್ಟರ್ ಮಹಾದೇವ ರಂಗೋಲಿ ಚಂದ್ರಬಂಡಾ, ಉಪನ್ಯಾಸಕ ಮಲ್ಲಿಕಾರ್ಜುನ ದಂಡು ಕುರುಬದೊಡ್ಡಿ, ಗ್ರಾಮಸ್ಥರಾದ ವೆಂಕಟೇಶ, ರೆಡ್ಡಿ ಕಾರ್ಯಮವನ್ನುದೇಶಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿ ಸಾವಿರಾರು ವರ್ಷಗಳ ಕಾಲ ಮೂಲನಿವಾಸಿ ಬಹುಜನರು ದೈಹಿಕ ಹಾಗೂ ಮಾನಸಿಕ ಗುಲಾಮಗಿರಿಗೆ ಒಳಾಗಾಗಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಮೂಲಕ ವಿದ್ಯೆ, ಆಸ್ತಿ, ರಾಜಕೀಯ ಅಧಿಕಾರ ನೀಡುವ ಮೂಲಕ ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಿ ಮಾಡಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಮಾಣಿಕ್ಯಂ ಹೆಗ್ಗಸನಹಳ್ಳಿ ವಹಿಸಿದ್ದರು. ಶಿಕ್ಷಕ ಶಿವರಾಜ ಅರಸ್ ಹೆಗ್ಗಸನಹಳ್ಳಿ ಗಾಜರಾಳ ನಿರೂಪಿಸಿ ವಂದಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಯುವಜನರ ಮೇಲಿನ ದಾಳಿ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿಲ್ಲ: ಸಂಸದ ಜಿ.ಕುಮಾರ ನಾಯಕ ಆರೋಪ

ಈ ಸಂದರ್ಭದಲ್ಲಿ ಗ್ರಾಮದ ನರಸಪ್ಪ ಗೋನ್ವಾರ್, ಹಸನಪ್ಪ, ಶಿಕ್ಷಣ ಇಲಾಖೆಯ ಈರಣ್ಣ ಸಿಂಧನೂರು, ಪ್ರೌಢಶಾಲಾ ಶಿಕ್ಷಕ ವಸಂತಕುಮಾರ್, ನಿವೃತ್ತ ಎಎಸ್ಐ ಜನಾಧನ ಭಂಡಾರಿ, ನರಸಪ್ಪ ಗೋನ್ವಾರ್, ಹಸನಪ್ಪ, ಶಿಕ್ಷಕ ಆನಂದಕುಮಾರ್ ಗಾಜರಾಳ, ಬಹುಜನ ಸಂಘರ್ಷ ಸಮಿತಿ ಅರಕೇರಾ ತಾಲೂಕಾಧ್ಯಕ್ಷ ಬಸವರಾಜ ಮರಕಂದಿನ್ನಿ, ಗ್ರಾಮದ ಮುಖಂಡರಾದ ನರಸಿಂಹಲು, ಬಾಬು.ಸಿ , ಬಾಬು ಎಚ್, ರಾಮಪ್ಪ, ತಾಯಪ್ಪ, ಶರಣಪ್ಪ, ಹನುಮಂತು, ರಾಮಪ್ಪ. ಸಿ ಅಂಬರೇಶ, ರೆಡ್ಡಿ, ವೆಂಕಟೇಶ, ನಾಗರಾಜ್, ಸೂಗೂರಪ್ಪ, ಯಲ್ಲಪ್ಪ ಬಸವರಾಜ್, ರಘು, ಬಸವ, ಪಾಂಡು, ಲಿಂಗಪ್ಪ ಹೆಗ್ಗಸನಹಳ್ಳಿ, ಅಂಬೇಡ್ಕರ್ ಯುವಕ ಮಂಡಳಿಯ ಎಲ್ಲಾ ಸದಸ್ಯರು ಸೇರಿದಂತೆ ಮಹಿಳೆಯರು, ಮಕ್ಕಳು, ಕುಟುಂಬಸ್ಥರು ಭಾಗವಹಿಸಿದ್ದರು.

237f7ffccb444279d008bf3b9996085b28ea2ee502b53dcd4b516808491f04d0?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಚಿಕ್ಕಮಗಳೂರು | ‘ಮಳಲೂರು ಏತ ನೀರಾವರಿ ಯೋಜನೆ’: ಹೆಸರಿಗಷ್ಟೇ ಈ ಯೋಜನೆ ಆಗಿದೆಯೇ?

ಸರ್ಕಾರದಿಂದ ಅನೇಕ ರೀತಿಯ ಯೋಜನೆ ಮಾಡುತ್ತ ಬರುತ್ತಿದೆ. ಹಾಗೆಯೇ, ಚಿಕ್ಕಮಗಳೂರು ತಾಲೂಕಿನ...