‘ನಾಯಕರೇ ಇಲ್ಲದ ಚಳವಳಿ ಎನ್ನುವುದೂ ಒಂದು ರಾಜಕಾರಣವೇ’: ಐಸಾ ಅಧ್ಯಕ್ಷೆ ನೇಹಾ ಬೋರಾ

Date:

ದೇಶಾದ್ಯಂತ ಇತ್ತೀಚೆಗೆ ಕಾಡ್ಗಿಚ್ಚಿನಂತೆ ಹಬ್ಬಿದ ವಿದ್ಯಾರ್ಥಿ-ಯುವಜನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ರಾಷ್ಟ್ರೀಯ ಅಧ್ಯಕ್ಷೆ, ಜೆಎನ್‌ಯು ಸಂಶೋಧನಾ ವಿದ್ಯಾರ್ಥಿನಿ ನೇಹಾ ಬೋರಾ ಕೂಡ ಒಬ್ಬರು. ದೆಹಲಿಯ ಜಂತರ್ ಮಂತರ್‌ನಲ್ಲಿ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಅವರೊಂದಿಗೆ 23 ದಿನಗಳ ನಿರಂತರ ಸತ್ಯಾಗ್ರಹ ನಡೆಸಿದ್ದ ನೇಹಾ, ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಾಗ ಅವರ ಮೇಲೆ ಸಂಘಿಗಳು ಮಸಿ ಎರಚಿದ್ದರು.

- Advertisement -

ಜಂತರ್ ಮಂತರ್‌ನಲ್ಲಿ ನಡೆದ ಯುವಜನರ ಬೃಹತ್ ಪ್ರತಿಭಟನೆಯನ್ನು ‘ನಾಯಕರೇ ಇಲ್ಲದ ಚಳವಳಿ’ ಎಂದು ಬಣ್ಣಿಸಲಾಗುತ್ತಿದೆ. ಜನರು ತಾವು ಯಾವುದೇ ನಿರ್ದಿಷ್ಟ ನಾಯಕ ಅಥವಾ ಸಿದ್ಧಾಂತಕ್ಕಾಗಿ ಬಂದಿಲ್ಲ, ತಮ್ಮ ಹಕ್ಕುಗಳಿಗಾಗಿ ಬಂದಿದ್ದೇವೆ ಎಂದು ಹೇಳುವುದು ಸಹ ಒಂದು ರೀತಿಯ ರಾಜಕಾರಣವೇ ಆಗಿದೆ. ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದೆ, ಜನರ ಪರವಾಗಿ ನಿಲ್ಲುವುದು ರಾಜಕೀಯಪ್ರಜ್ಞೆಯ ದೊಡ್ಡ ಸಂಕೇತ. ಧರ್ಮ, ಜಾತಿ, ಪ್ರಾಂತ್ಯಗಳ ಗಡಿ ದಾಟಿ ಸಾಮಾನ್ಯ ಅಜೆಂಡಾಗಳ ಮೇಲೆ ಒಂದಾಗುವುದೇ ನಿಜವಾದ ರಾಜಕಾರಣ ಎಂದು ಐಸಾ (AISA) ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇತ್ತೀಚೆಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜಂತರ್ ಮಂತರ್ ಪ್ರತಿಭಟನೆ, ಝಾರ್ಖಂಡ್‌ ಉದ್ಯೋಗ ಬಿಕ್ಕಟ್ಟು, ‘ಆಜಾದಿ’ ಘೋಷಣೆಯ ರಾಜಕೀಯ, ಎಡಪಂಥೀಯ ವಿದ್ಯಾರ್ಥಿ ಚಳವಳಿ ಹಾಗೂ ಉಮರ್ ಖಾಲಿದ್ ಬಂಧನದವರೆಗಿನ ಹಲವು ವಿಷಯಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ.

“ಈ ಹಿಂದೆ ಸಿಎಎ ವಿರೋಧಿ ಹೋರಾಟವನ್ನು ಮುಸ್ಲಿಮರ ಚಳವಳಿ ಎಂದೂ, ರೈತರ ಹೋರಾಟವನ್ನು ಖಲಿಸ್ತಾನಿ ಹೋರಾಟ ಎಂದೂ ಸಂಘಪರಿವಾದ ಹಣೆಪಟ್ಟಿ ಕಟ್ಟಲು ಯತ್ನಿಸಿತ್ತು. ಅದೇ ರೀತಿ, ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯಲ್ಲಿದ್ದ ವಿದ್ಯಾರ್ಥಿಗಳನ್ನೂ ಕೇಂದ್ರ ಸಚಿವರು ‘ಕಿಡಿಗೇಡಿಗಳು’, ‘ವೈರಸ್‌ಗಳು’ ಎಂದು ನಿಂದಿಸಿದರು. ಆದರೆ, ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಕ್ಷೇತ್ರದ ಕುಸಿತಕ್ಕೆ ಸರ್ಕಾರದ ಬಳಿ ಉತ್ತರವಿಲ್ಲದಿದ್ದಾಗ ಇಂತಹ ನಿಂದನೆಗಳನ್ನು ಅಸ್ತ್ರ ಮಾಡಿಕೊಳ್ಳಲಾಗುತ್ತದೆ” ಎಂದು ಅವರು ವಿಮರ್ಶಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ತಮ್ಮ ಉಪಸ್ಥಿತಿಗೆ ವಿರೋಧ ವ್ಯಕ್ತವಾಗಿತ್ತು ಎಂಬುದನ್ನು ನೇಹಾ ತಳ್ಳಿಹಾಕಿದ್ದಾರೆ. “ಜಾರ್ಖಂಡ್‌ನಲ್ಲಿ ಸತತವಾಗಿ ಹೋರಾಟ ರೂಪಿಸುತ್ತಿರುವ ವಿದ್ಯಾರ್ಥಿಗಳು ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಆರ್‌ಎಸ್ಎಸ್ ಬೆಂಬಲಿತ ಮಾಧ್ಯಮಗಳು ಹರಡಿದ ವಿಡಿಯೋದಲ್ಲಿ ವೇದಿಕೆಯಿಂದ ಇಳಿಯಲು ಹೇಳಿದ್ದು ಮಾಧ್ಯಮದವರಿಗೇ ಹೊರತು ನನಗಲ್ಲ. ದೇಶದಾದ್ಯಂತ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಾಗ ಗೈರಾಗಿದ್ದ ಬಿಜೆಪಿ-ಆರ್‌ಎಸ್ಎಸ್, ದಿಢೀರನೆ ವಿದ್ಯಾರ್ಥಿ ಪರವೆಂದು ನಾಟಕವಾಡಲು ಶುರುಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (CJP) ಯಂತಹ ಹೊಸ ಸಂಘಟನೆಗಳ ಜೊತೆ ಕೆಲಸ ಮಾಡುವ ಕುರಿತು ಪ್ರತಿಕ್ರಿಯಿಸಿದ ನೇಹಾ, “ಜನರ ಮತ್ತು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುವ ಯಾವುದೇ ಸಂಘಟನೆಯ ಜೊತೆ ಕೆಲಸ ಮಾಡಲು ಸಿದ್ಧ” ಎಂದಿದ್ದಾರೆ.

ವಿದ್ಯಾರ್ಥಿ ನಾಯಕರು ತಮ್ಮ ವೃತ್ತಿಜೀವನಕ್ಕಾಗಿ ಚಳವಳಿಗಳನ್ನು ಬಳಸಿಕೊಳ್ಳುತ್ತಾರೆ ಎಂಬ ಟೀಕೆಗಳನ್ನು ಅಲ್ಲಗಳೆದ ನೇಹಾ, “ಜನರು ಕೇವಲ ಕನ್ಹಯ್ಯ ಕುಮಾರ್ ಅವರಂತಹ ಉದಾಹರಣೆಗಳನ್ನು ಮಾತ್ರ ನೋಡುತ್ತಾರೆ. ಆದರೆ, ಜೆಎನ್‌ಯು ಅಧ್ಯಕ್ಷರಾಗಿದ್ದ ಸುಚೇತಾ ದೇ ಇಂದು ಕಾರ್ಮಿಕ ಸಂಘಟನೆಯಲ್ಲಿದ್ದಾರೆ, ಸಂದೀಪ್ ಸೌರವ್ ಶಾಸಕರಾಗಿ ಜನರ ಧ್ವನಿಯಾಗಿದ್ದಾರೆ. 1990ರ ದಶಕದಿಂದಲೂ ಐಸಾ ಒಬಿಸಿ ಮೀಸಲಾತಿ, ನಿರ್ಭಯಾ ಹೋರಾಟ, ಶುಲ್ಕ ಏರಿಕೆ ವಿರೋಧಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿದೆ. ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವು ನೆಲಮೂಲದ ಚಳವಳಿಗಳನ್ನು ವಿಸ್ತರಿಸಲು ಬಯಸಿದರೆ ಮಾತ್ರ ನಾನು ಚುನಾವಣಾ ರಾಜಕೀಯಕ್ಕೆ ಸ್ಪರ್ಧಿಸುತ್ತೇನೆಯೇ ಹೊರತು ವೈಯಕ್ತಿಕ ಮಹತ್ವಾಕಾಂಕ್ಷೆಗೆ ಅಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಲೇಖನ ಓದಿದ್ದೀರಾ?: ಜಾರ್ಖಂಡ್‌ | ಸರ್ಕಾರ ದಮನಿಸಿದರೂ, ಮೂರು ಪರೀಕ್ಷೆ ರದ್ದಾದರೂ ಶಮನವಾಗದ ವಿದ್ಯಾರ್ಥಿಗಳ ಆಕ್ರೋಶ

‘ಆಜಾದಿ’ ಘೋಷಣೆಯ ಕುರಿತು ಮಾತನಾಡಿದ ಅವರು, “ಆಜಾದಿ ಎಂಬುದು ಮೂಲತಃ ಮಹಿಳೆಯರ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಸ್ತ್ರೀವಾದಿ ಘೋಷಣೆಯಾಗಿತ್ತು. ಬಿಜೆಪಿ, ಮೋದಿ-ಶಾ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರದಿಂದ ಆಜಾದಿ (ಸ್ವಾತಂತ್ರ್ಯ) ಕೇಳುವುದು ಯಾವುದೇ ರೀತಿಯಲ್ಲೂ ದೇಶದ್ರೋಹವಲ್ಲ. ಬಲಪಂಥೀಯರು ಈ ಪದಕ್ಕೆ ಅನಗತ್ಯವಾಗಿ ಕಪ್ಪುಚುಕ್ಕೆ ಹಚ್ಚಿದ್ದಾರೆ” ಎಂದು ವಿವರಿಸಿದ್ದಾರೆ.

“ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಂತಹ ರಾಜಕೀಯ ವಿದ್ಯಾರ್ಥಿ ನಾಯಕರು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು. ಉಮರ್ ಖಾಲಿದ್ ವಿಷಯವು ದೇಶಪ್ರೇಮ ಅಥವಾ ದೇಶದ್ರೋಹದ ಪ್ರಶ್ನೆಯಲ್ಲ; ಅದು ದೇಶದಲ್ಲಿ ಕಾನೂನು ಪ್ರಕ್ರಿಯೆ ಮತ್ತು ಸಂವಿಧಾನ ಜೀವಂತವಾಗಿದೆಯೇ ಎಂಬುದರ ಪ್ರಶ್ನೆ. ಮಾಧ್ಯಮ ವಿಚಾರಣೆ ಅಥವಾ ರಾಜಕೀಯ ಗುಂಪುಗಳು ಯಾರನ್ನೂ ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಸಂವಿಧಾನಬದ್ಧ ನ್ಯಾಯಾಲಯಗಳು ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ನೀಡಿದ್ದು, ಪ್ರಜಾಪ್ರಭುತ್ವದ ಪರ ಇರುವ ಎಲ್ಲರೂ ಎಲ್ಲ ರಾಜಕೀಯ ಬಂದಿಗಳ ಬಿಡುಗಡೆಗೆ ಧ್ವನಿ ಎತ್ತಬೇಕು” ಎಂದು ಪ್ರತಿಪಾದಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...