ಕೇವಲ ಒಂದೇ ಇಮೇಲ್ ಮೂಲಕ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ‘ಒರ್ಯಾಕಲ್’

Date:

ಜಾಗತಿಕ ಟೆಕ್ ದೈತ್ಯ ಒರ್ಯಾಕಲ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಬೆಳಗಿನ ಜಾವ ಆರು ಗಂಟೆಗೆ ಸರಿಯಾಗಿ ಇಮೇಲ್ ಮೂಲಕ ವಜಾದೇಶದ ಮಾಹಿತಿ ರವಾನಿಸಲಾಗಿದೆ. ‘ಒರ್ಯಾಕಲ್ ಲೀಡರ್‌ಶಿಪ್’ ಹೆಸರಿನಿಂದ ಬಂದ ಈ ಇಮೇಲ್‌ನಲ್ಲಿ, “ನಿಮ್ಮ ಹುದ್ದೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ” ಎಂಬ ಸಂದೇಶವಿತ್ತು. ಇದು ಕಂಪನಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ಉದ್ಯೋಗ ಕಡಿತಗಳಲ್ಲಿ ಒಂದಾಗಿದೆ.

- Advertisement -

ಜೂನ್ 22 ರಂದು ಬಿಡುಗಡೆಯಾದ ವಾರ್ಷಿಕ ವರದಿಯ ಪ್ರಕಾರ, 2026ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಶೇಕಡಾ 13ರಷ್ಟು ಕುಸಿದಿದೆ. ಕಳೆದ ವರ್ಷ 1,62,000 ಸಂಖ್ಯೆ ಇದೀಗ 1,41,000 ಇಳಿಕೆಯಾಗಿದೆ. ಈ ಬೃಹತ್ ಪುನರ್‌ರಚನಾ ಪ್ರಕ್ರಿಯೆಗಾಗಿ ಕಂಪನಿಯು ಬರೋಬ್ಬರಿ 17 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತವನ್ನು ಪರಿಹಾರ ಹಾಗೂ ನಿರ್ಗಮನ ವೆಚ್ಚಗಳಿಗಾಗಿ ಭರಿಸಿದೆ. ಇದು ಹಿಂದಿನ ವರ್ಷದ ವೆಚ್ಚಕ್ಕಿಂತ ಹೆಚ್ಚಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಈ ಹಠಾತ್ ಉದ್ಯೋಗ ಕಡಿತಕ್ಕೆ ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ ಹಾಗೂ ಆಂತರಿಕ ಕಾರ್ಯತಂತ್ರದ ಬದಲಾವಣೆಗಳೇ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆಡಳಿತ ಮಂಡಳಿ ಮತ್ತು ಉತ್ಪನ್ನಗಳಲ್ಲಿನ ಮಹತ್ವದ ಬದಲಾವಣೆಗಳು, ಕಾರ್ಯಕ್ಷಮತೆಯ ಸಮಸ್ಯೆಗಳು, ಇತರ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆಗಳು ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಸವಾಲುಗಳಿಗೆ ಹೊಂದಿಕೊಳ್ಳಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕೃತಕ ಬುದ್ಧಿಮತ್ತೆಯು ಉದ್ಯೋಗದ ಮೇಲೆ ಬೀರಿದ ಪ್ರಭಾವವಿದು.

ಇದನ್ನು ಓದಿದ್ದೀರಾ? ರಾಮಮಂದಿರ ದೇವರ ಹುಂಡಿಗೆ ಕನ್ನ; ಡಬಲ್ ಎಂಜಿನ್ ಸರ್ಕಾರದ ಭ್ರಷ್ಟಾಚಾರ ಬಯಲು

ಅಮೆರಿಕದ ಉದ್ಯೋಗಿಗಳಿಗೆ ಒರ್ಯಾಕಲ್ ನೀಡುತ್ತಿರುವ ಪರಿಹಾರ ಪ್ಯಾಕೇಜ್ ಇತರ ಟೆಕ್ ಕಂಪನಿಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ. ಮೊದಲ ವರ್ಷದ ಸೇವೆಗಾಗಿ ಕೇವಲ ನಾಲ್ಕು ವಾರಗಳ ಮೂಲ ವೇತನ ಹಾಗೂ ತದನಂತರದ ಪ್ರತಿ ವರ್ಷದ ಸೇವೆಗೆ ಹೆಚ್ಚುವರಿಯಾಗಿ ಕೇವಲ ಒಂದು ವಾರದ ವೇತನವನ್ನು ನೀಡಲಾಗುತ್ತಿದೆ. ಇದು ಗರಿಷ್ಠ ಇಪ್ಪತ್ತಾರು ವಾರಗಳಿಗೆ ಮಾತ್ರ ಸೀಮಿತವಾಗಿದೆ. ಇದಲ್ಲದೆ, ಮೆಟಾ ಅಥವಾ ಇತರ ಕಂಪನಿಗಳಂತೆ ಯಾವುದೇ ರೀತಿಯ ಉಚಿತ ಆರೋಗ್ಯ ವಿಮೆ ಅಥವಾ ಹೆಚ್ಚುವರಿ ಸೌಲಭ್ಯಗಳನ್ನು ವಜಾಗೊಂಡ ನೌಕರರಿಗೆ ಒದಗಿಸಿಲ್ಲ.

ಭಾರತದಲ್ಲಿನ ಉದ್ಯೋಗಿಗಳಿಗೆ ಎನ್ ಪ್ಲಸ್ ಟು ಸೂತ್ರದಡಿ(ಪರಿಹಾರ ನೀಡುವ ಒಂದು ವಿಧಾನ)) ಪರಿಹಾರವನ್ನು ಕಂಪನಿ ನೀಡಲಿದೆ. ಅಂದರೆ, ಉದ್ಯೋಗಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಜೊತೆಗೆ ಹೆಚ್ಚುವರಿ ಎರಡು ತಿಂಗಳ ವೇತನ ಲಭ್ಯವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆರಿಗೆಯ ನಂತರ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ! ಬಾಲಕನ ವಿರುದ್ಧ ಪೋಕ್ಸೋ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕೇರಳ ಮೂಲದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ...

ಸತ್ಯ ಬರೆದ ಪತ್ರಕರ್ತನ ಹತ್ಯೆ, ಮಗನ ಒಂಟಿ ಹೋರಾಟ: ಪೆರೋಲ್ ಮೋಜಿನಲ್ಲಿ ಅತ್ಯಾಚಾರಿ ರಾಮ್ ರಹೀಮ್

ಸಾಧ್ವಿಗಳ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ...

800 ಉರ್ದು, 200 ಮರಾಠಿ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಸಭಾಪತಿ ಸಲೀಂ ಅಹ್ಮದ್‌ಗೆ ಮನವಿ

ಸರ್ಕಾರವು 800 ಉರ್ದು ಮತ್ತು 200 ಮರಾಠಿ ಮಾಧ್ಯಮ ಶಿಕ್ಷಕರ ಹುದ್ದೆಗಳನ್ನು...

ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ; ಸಚಿವೆಯ ಪುತ್ರಿ ಸೇರಿ ನಾಲ್ವರ ಸಾವು

ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ...