‘ಅಮೃತ್ ಭಾರತ್ ಎಕ್ಸ್‌ಪ್ರೆಸ್‌’ನಲ್ಲಿ ಪೇಪರ್ ಬಾಕ್ಸ್‌ಗಳನ್ನು ತೊಳೆದು ಮರುಬಳಕೆ; ವಿಡಿಯೋ ವೈರಲ್

Date:

ಬಳಸಿ ಬಿಸಾಡಬೇಕಾದ (ಯೂಸ್‌ ಅಂಡ್‌ ಥ್ರೋ) ಪೇಪರ್ ಬಾಕ್ಸ್‌ಗಳನ್ನು ರೈಲಿನ ಸಿಬ್ಬಂದಿ ತೊಳೆದು ಮರುಬಳಕೆಗೆ ಎತ್ತಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (16601) ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿ.ವಿ ಅವರು ಆಹಾರ ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ವಿಡಿಯೋದಲ್ಲಿ; ವ್ಯಕ್ತಿಯೊಬ್ಬ ಬಳಸಿ ಬಿಸಾಡುವ ಆಹಾರದ ಬಾಕ್ಸ್‌ಗಳನ್ನು ತೊಳೆಯುತ್ತಿರುವುದು ಕಂಡುಬಂದಿದೆ. ತೊಳೆದ ಆ ಬಾಕ್ಸ್‌ಗಳನ್ನು ಪ್ರಯಾಣಿಕರಿಗೆ ಊಟ ಬಡಿಸಲು ಮರುಬಳಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ವಿಡಿಯೋ ಹಂಚಿಕೊಂಡಿರುವ ಶ್ರೀನಿವಾಸ್, “ರೈಲ್ವೆ ಸಚಿವರೇ, ಇದು ನಿಮ್ಮ ಮೂಲಸೌಕರ್ಯ. ಸಾರ್ವಜನಿಕರಿಂದ ಪೂರ್ಣ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆದರೆ ಮತ್ತೊಂದೆಡೆ, ಈ ನಾಚಿಕೆಗೇಡಿನ ಕೃತ್ಯ ಎಸಗಲಾಗುತ್ತದೆ. ಇಂತಹ ಘಟನೆಗಳಿಗೆ ನೀವು ನಾಚಿಕೆಪಡಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ವಿಡಿಯೋ ರೈಲಿನಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೂ, ವಿಡಿಯೋ ಮತ್ತು ಘಟನೆ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, IRCTC ಪ್ರತಿಕ್ರಿಯೆ ನೀಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

“ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಬಳಸಿ ಬಿಸಾಡುವ ಆಹಾರದ ಬಾಕ್ಸ್‌ಗಳನ್ನು ತೊಳೆಯುವ ಮತ್ತು ಮರುಬಳಕೆ ಮಾಡುತ್ತಿರುವವರನ್ನು ಗುರುತಿಸಲಾಗಿದೆ. ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ರೈಲಿನಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದವರಿಗೆ ಭಾರೀ ದಂಡ ವಿಧಿಸಲಾಗಿದೆ. ಜೊತೆಗೆ, ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.

ಘಟನೆ ಬಗ್ಗೆ ಹಲವಾರು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. “ಇದು ಪ್ರಯಾಣಿಕರಿಗೆ ಅನೈರ್ಮಲ್ಯ ಮತ್ತು ಅಸುರಕ್ಷಿತವಾಗಿದೆ” ಎಂದು ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಪ್ರತಿಭಟನೆ ವೇಳೆ ಪತ್ರಕರ್ತೆಗೆ ಕಿರುಕುಳ ಆರೋಪ; ಎಸಿಪಿ ಭಗತ್ ಬಡ್ತಿಗೆ ಬ್ರೇಕ್‌

CEC ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ...

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು...

ಆಕಾಶವಾಣಿ ಭವನಕ್ಕೆ ಬಲವಂತದ ಪ್ರವೇಶ ಆರೋಪ: ರಾಹುಲ್, ಪ್ರಿಯಾಂಕಾ ವಿರುದ್ಧ FIR

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಪಕ್ಷಗಳ ಪ್ರತಿಭಟನೆ ವೇಳೆ...