ಪಂಜಾಬ್ | ಬಿಜೆಪಿ ನಾಯಕ ಬಲ್ವಿಂದರ್ ಗಿಲ್‌ ಮೇಲೆ ಗುಂಡಿನ ದಾಳಿ; ಅಪಾಯದಿಂದ ಪಾರು

Date:

  • ಅಮೃತಸರದ ನಿವಾಸದಲ್ಲಿ ಬಲ್ವಿಂದರ್ ಗಿಲ್ ಮೇಲೆ ದಾಳಿ
  • ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸ್

ಪಂಜಾಬ್ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಲ್ವಿಂದರ್ ಗಿಲ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಭಾನುವಾರ (ಏಪ್ರಿಲ್ 16) ನಡೆದಿದೆ.

- Advertisement -

ಅಮೃತಸರದ ಜಂಡಿಯಾಲ ಗುರು ಪ್ರದೇಶದಲ್ಲಿರುವ ಬಲ್ವಿಂದರ್ ನಿವಾಸದಲ್ಲಿ ಈ ಘಟನೆ ನಡೆದಿದೆ. ಬಲ್ವಿಂದರ್ ಅವರು ಮನೆಯಲ್ಲಿ ಇರುವಾಗ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಮೇಲೆ ಗುಂಡು ಹಾರಿಸಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಇದರಿಂದ ಬಲ್ವಿಂದರ್ ಗಿಲ್ ಅವರ ಬಾಯಿಗೆ ಗಾಯವಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ.

“ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಬಲ್ವಿಂದರ್ ನಿವಾಸದ ಬಳಿ ಬಂದು ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಬಲ್ವಿಂದರ್‌ ಬಾಯಿಗೆ ಗುಂಡು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ” ಎಂದು ಅಮೃತಸರ ಗ್ರಾಮಾಂತರ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್ಎಸ್‌ಪಿ) ಸತೇಂದರ ಸಿಂಗ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಿಬಿಐ ವಿಚಾರಣೆ ಗೌರವಿಸುತ್ತೇನೆ ಎಂದ ಅರವಿಂದ್‌ ಕೇಜ್ರಿವಾಲ್

“ಸದ್ಯ ಈ ಬಗ್ಗೆ ನಿವಾಸದ ಬಳಿಯಿರುವ ಸಿಸಿಟಿವಿಯನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಬಲ್ವಿಂದರ್‌ ಮೇಲೆ ನಡೆದ ದಾಳಿಯಲ್ಲಿ ಒಬ್ಬನ ಪಾತ್ರ ಇದೆ ಎಂದು ಇದುವರೆಗೆ ಕಂಡು ಬಂದಿದೆ” ಎಂದು ಅವರು ಹೇಳಿದರು.

ಪೊಲೀಸರು ಅಪರಿಚಿತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 307 (ಕೊಲೆ ಯತ್ನ), ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆಯ ಹಲ್ಲೆ ಆರೋಪಿ ಸಂಘಿ ಭಾರದ್ವಾಜ್‌ಗೆ 3 ವಾರ ಮಧ್ಯಂತರ ಜಾಮೀನು

ಜಂತರ್‌ ಮಂತರ್‌ನಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಪ್ರತಿಭಟನೆ ವೇಳೆ...

ಯುಪಿ ಪೊಲೀಸರ ‘ಮಧ್ಯರಾತ್ರಿ ದಾಳಿ’: ದೆಹಲಿ ಮಾಜಿ ಮೇಯರ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪತ್ರಕರ್ತರೊಬ್ಬರನ್ನು ಹುಡುಕುವ ನೆಪದಲ್ಲಿ ಉತ್ತರ ಪ್ರದೇಶ ಪೊಲೀಸರು ತಮ್ಮ ನಿವಾಸದ ಮೇಲೆ...

TMC ಬಂಡಾಯ ಸಂಸದರು ಬಿಜೆಪಿ ಸೇರಲಿದ್ದಾರೆ ಎಂದ ಬಸುನಿಯಾ; ಇಲ್ಲ ಎಂದ BJP

ತೃಣಮೂಲ ಕಾಂಗ್ರೆಸ್‌ (TMC) ತೊರೆದು ನ್ಯಾಷನಲಿಸ್ಟ್‌ ಸಿಟಿಜನ್ಸ್‌ ಪಾರ್ಟಿ ಆಫ್‌ ಇಂಡಿಯಾ...

ಮೋದಿ ಸರ್ಕಾರದ UPI ವಿನಾಯಿತಿ ಮೋಸ; ₹2,000 ಮೇಲ್ಪಟ್ಟ ಪಾವತಿಗಳಿಗೆ MDR ವಿಧಿಸಲು ಅನುಮತಿ

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಿಧಿಸಲು...