ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಕಡಿತ ಘೋಷಿಸಿದ ಸೌದಿ ಅರೇಬಿಯಾ; ಭಾರತದಲ್ಲಿ ಇಳಿಯುವುದೇ ಪೆಟ್ರೋಲ್-ಡೀಸೆಲ್ ಬೆಲೆ?

Date:

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ, ಕಳೆದ 20 ವರ್ಷಗಳಲ್ಲೇ ಮೊದಲ ಬಾರಿಗೆ ಕಚ್ಚಾ ತೈಲದ ಬೆಲೆಯಲ್ಲಿ ದಾಖಲೆಯ ಕಡಿತ ಘೋಷಿಸಿದೆ. ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 11 ಡಾಲರ್‌ನಷ್ಟು ದರ ಕಡಿತ ಮಾಡುವುದಾಗಿ ಹೇಳಿದೆ. ಈ ನಿರ್ಧಾರದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗಲಿದೆ ಎಂಬ ಚರ್ಚೆ ಮುನ್ನೆಲೆ ಬಂದಿದೆ.

- Advertisement -

ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ‘ಸೌದಿ ಅರಾಮ್ಕೊ’ ಸಂಸ್ಥೆಯು ತನ್ನ ಪ್ರಮುಖ ‘ಅರಬ್ ಲೈಟ್ ಕಚ್ಚಾ ತೈಲದ ಅಧಿಕೃತ ಮಾರಾಟ ದರ’ವನ್ನು (Official Selling Price – OSP) ಪ್ರತಿ ಬ್ಯಾರೆಲ್‌ಗೆ 11 ಡಾಲರ್‌ ಕಡಿತ ಮಾಡಿದೆ. ಪ್ರಸ್ತುತ, ಪ್ರತಿ ಬ್ಯಾರಲ್‌ ಕಚ್ಚಾ ತೈಲವನ್ನು ಸೌದಿ ಅರಾಮ್ಕೊ 71 ಡಾಲರ್‌ಗೆ ಮಾರಾಟ ಮಾಡುತ್ತಿದೆ. ಕಡಿತ ಘೋಷಣೆಯಿಂದಾಗಿ 60 ಡಾಲರ್‌ಗೆ ಇಳಿಕೆಯಾಗಲಿದೆ. ಈ ಪರಿಷ್ಕೃತ ದರವು ಆಗಸ್ಟ್ ತಿಂಗಳಿಂದ ಜಾರಿಗೆ ಬರಲಿದೆ ಎಂದು ಸೌದಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿದ್ದು, ಅಮೆರಿಕ-ಇರಾನ್ ನಡುವಿನ ಯುದ್ಧ ಅಂತ್ಯಗೊಂಡು ಶಾಂತಿ ಒಪ್ಪಂದ ಜಾರಿಯಲ್ಲಿದೆ. ಪರಿಣಾಮವಾಗಿ, ಜಾಗತಿಕ ತೈಲ ಪೂರೈಕೆ ವಹಿವಾಟು ಸ್ಥಿರಗೊಂಡಿದೆ. ಆದರೆ, ಸಂಘರ್ಷದ ಸಮಯದಲ್ಲಿ, ಏಷ್ಯಾದ ಪ್ರಮುಖ ರಾಷ್ಟ್ರಗಳು ಕಚ್ಚಾ ತೈಲ ಖರೀದಿಗೆ ಪರ್ಯಾಯ ಮಾರ್ಗಗಳನ್ನೂ ಹುಡುಕಿಕೊಂಡವು. ಈಗ ಮಧ್ಯಪ್ರಾಚ್ಯದ ಬಿಕ್ಕಟ್ಟು ಶಮನಗೊಂಡಿದ್ದರೂ, ಏಷ್ಯಾದ ರಾಷ್ಟ್ರಗಳು ಹಿಂದಿನಂತೆ ಇಂಧನಕ್ಕಾಗಿ ಸೌದಿಯತ್ತ ನೋಡುತ್ತಿಲ್ಲ. ಆದ್ದರಿಂದ, ಸೌದಿ ಅರೇಬಿಯಾ ಬೆಲೆ ಕಡಿತ ಘೋಷಿಸುವ ಮೂಲಕ, ಹಲವು ರಾಷ್ಟ್ರಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿಯೂ ಸೌದಿ ಅರಾಮ್ಕೊ ಪ್ರತಿ ಬ್ಯಾರೆಲ್‌ಗೆ 6 ಡಾಲರ್‌ಗಳಷ್ಟು ಬೆಲೆ ಕಡಿತ ಮಾಡಿತ್ತು. ಈಗ ಮತ್ತೊಮ್ಮೆ 11 ಡಾಲರ್ ಕಡಿತ ಘೋಷಿಸಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಬೆಳವಣಿಗೆಯಾಗಿದೆ.

ಈ ಲೇಖನ ಓದಿದ್ದೀರಾ?: 2010ರಲ್ಲೂ, ಈಗಲೂ ‘ಕಚ್ಚಾ ತೈಲ’ ಬೆಲೆ 79 ಡಾಲರ್‌; ಆದರೆ, ಪೆಟ್ರೋಲ್ ಬೆಲೆ ಅಂದು ₹52,ಇಂದು ₹110! ಯಾಕೀ ವ್ಯತ್ಯಾಸ?

ಭಾರತ ತನ್ನ ಕಚ್ಚಾ ತೈಲದ ಅಗತ್ಯದ 85%ಕ್ಕಿಂತ ಹೆಚ್ಚಿನ ಪ್ರಮಾಣವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುವುದು ದೇಶಕ್ಕೆ ಅನುಕೂಲಕರ ಬೆಳವಣಿಗೆಯಾಗಲಿದೆ. ಆದರೆ, ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ದೇಶದ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗುವ ಯಾವುದೇ ನಿರೀಕ್ಷೆಗಳಿಲ್ಲ.

ಯಾಕೆಂದರೆ, “ಸಂಘರ್ಷದ ಸಮಯದಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಂಡಿತ್ತು. ಆದರೂ, ತೈಲ ಕಂಪನಿಗಳು ಇಂಧನ ಬೆಲೆ ಹೆಚ್ಚಿಸದೆ, ಹೆಚ್ಚಿನ ಹೊರೆಯನ್ನು ತಾವೇ ಹೊತ್ತಿದ್ದವು. ಇದರಿಂದ, ಭಾರೀ ನಷ್ಟ ಅನುಭವಿಸಿವೆ. ಆ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡುವುದಿಲ್ಲ” ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದ್ದರಿಂದ, ಕಚ್ಚಾ ತೈಲ ಇಳಿದರೂ, ದೇಶದಲ್ಲಿ ಹೇರಲಾಗಿರುವ ಬೆಲೆ ಏರಿಕೆಯ ಹೊರೆಯನ್ನು ಸಾಮಾನ್ಯ ಭಾರತೀಯರು ಹೊರಲೇಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆಜಾನ್‌ನಲ್ಲಿ ಮತ್ತೆ ಉದ್ಯೋಗ ಕಡಿತ ; ಭಾರತದ ಉದ್ಯೋಗಿಗಳಿಗೂ ತಟ್ಟಿದ ಪರಿಣಾಮ

ದೆಹಲಿ/ವಾಷಿಂಗ್ಟನ್‌ ಡಿಸಿ : ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತೊಮ್ಮೆ ಉದ್ಯೋಗ ಕಡಿತದ...

ರಾಯಚೂರು | ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿ

ರಾಜ್ಯ ಸರ್ಕಾರವು ರಾಯಚೂರು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ಎಂಟು ತಾಲ್ಲೂಕು...

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್; ದೆಹಲಿ ಪೊಲೀಸರಿಗೆ ಕೇಸ್ ಹಾಕುವುದಷ್ಟೇ ಕೆಲಸ: ಅಖಿಲೇಶ್ ಯಾದವ್ ಆಕ್ರೋಶ

ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಆಕಾಶವಾಣಿ ಭವನಕ್ಕೆ ಅಕ್ರಮ ಪ್ರವೇಶಿಸಿದ ಕಾರಣಕ್ಕೆ ಕಾಂಗ್ರೆಸ್...

ಹಿರಿಯ ನಟ ನಾನಾ ಪಾಟೇಕರ್‌ ನಿಧನ

ಪಣಜಿ:  ಹಿರಿಯ ನಟ ನಾನಾ ಪಾಟೇಕರ್ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ...