ರಾಹುಲ್ ‘ಇಮೇಜ್’ ಎದುರು ಮಂಕಾದ ಮೋದಿ!

Date:

ಅವಸರವಿದ್ದರೂ ಸಾವಧಾನದ ಬೆನ್ನೇರಿ ಬೆಳೆಯುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಂತೆ ರಾಹುಲ್ ಅವರು ತಮ್ಮ ಇಮೇಜ್ ಅನ್ನು ತಾಳ್ಮೆಯಿಂದಲೇ ರೂಪಿಸಿಕೊಂಡರು.  ಇತ್ತ ಮೋದಿಯವರ ಸುತ್ತ ಕಟ್ಟಿದ್ದ ಅರಗಿನ ಅರಮನೆಯು ಚಳವಳಿಗಳ ಕಾವಿಗೆ ಕರಗಲಾರಂಭಿಸಿದೆ. 

ಈ ಕಾಲದ ಗಟ್ಟಿಕಾಳು ‘ರಾಹುಲ್ ಗಾಂಧಿ’. ಭಾರತದ ರಾಜಕಾರಣದಲ್ಲಿ ರಾಹುಲ್ ಅವರು ಎದುರಿಸಿರುವಷ್ಟು ನಿಂದನೆ, ಟ್ರೋಲ್, ಅವಮಾನ, ಅಪಹಾಸ್ಯಗಳನ್ನು ಬೇರೆ ಯಾವ ರಾಜಕಾರಣಿಯೂ ಎದುರುಗೊಂಡಿಲ್ಲ. ಅವರನ್ನು ‘ಪಪ್ಪು’, ‘ಏನೂ ಗೊತ್ತಿಲ್ಲದವ’ ಎಂದು ಬಿಂಬಿಸಲು ಬಿಜೆಪಿ ಮತ್ತು ಅದರ ಐಟಿ ಪಡೆ ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಎಲ್ಲವನ್ನೂ ಗುದ್ದಿ, ಕೆಡವಿ ರಾಹುಲ್ ಕಟ್ಟಿಕೊಂಡ ‘ಇಮೇಜ್’ ಇದೆಯಲ್ಲ, ಅದು ಭಾರತದ ರಾಜಕೀಯ ಚರಿತ್ರೆಯ ಮಹಾಪಲ್ಲಟವೂ ಹೌದು.

- Advertisement -

ಯಾರನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತೋ ಅವರನ್ನು ರಾಹುಲ್ ನಡುಗಿಸಿದರು. ‘ಭಾರತದಲ್ಲಿನ್ನೂ ಸೌಹಾರ್ದತೆಯ ಕೊನೆಯ ಮೊಳೆಯೊಂದನ್ನು ಹೊಡೆಯುವುದು ಬಾಕಿ ಇದೆ’ ಎಂದು ಅನಿಸುತ್ತಿರುವಾಗಲೇ, ರಾಹುಲ್ ಕಟ್ಟಿದ ಪ್ರೇಮದ ಭಾಷೆ, ವಾಗ್ವಾದದ ಭಾಷೆ ಭಾರತವು ತನ್ನನ್ನು ತಾನು ಮರುಶೋಧಿಸಿಕೊಳ್ಳುವ ದಾರಿಗೆ ಎಳೆಯಲ್ಪಟ್ಟವು. ‘ಪಪ್ಪು’ ಎನ್ನುತ್ತಿದ್ದವರು, ಈಗ ರಾಹುಲ್ ಅವರ ವರ್ಚಸ್ಸು ಮತ್ತು ದನಿಯನ್ನು ಕಂಡು ಬೆದರಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವಸರವಿದ್ದರೂ ಸಾವಧಾನದ ಬೆನ್ನೇರಿ ಬೆಳೆಯುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಂತೆ ರಾಹುಲ್ ಅವರು ತಮ್ಮ ಇಮೇಜ್ ಅನ್ನು ತಾಳ್ಮೆಯಿಂದಲೇ ರೂಪಿಸಿಕೊಂಡರು. ಚುನಾವಣೆಗಳ ಸೋಲು ಅವರನ್ನು ಕಂಗೆಡಿಸಲಿಲ್ಲ. ಫ್ಯಾಸಿಸ್ಟ್ ಶಕ್ತಿಯೊಂದರ ಎದುರು ಸೋಲು ದಾಖಲಾಗುವುದು ಸಾಮಾನ್ಯ, ಆದರೆ ಭಾರತಕ್ಕೆ ಬೇಕಿರುವುದು ಒಂದು ರಾಜಕೀಯ ಸಂವಾದ ಸಂಸ್ಕೃತಿ ಮತ್ತು ಜನ ಚಳವಳಿ ಎಂಬುದನ್ನು ಗಟ್ಟಿಯಾಗಿ ನಂಬಿ ಹೊರಟ ರಾಹುಲ್, ಬದಲಾವಣೆಯ ಪರ್ವವೊಂದನ್ನು ತೆರೆಯುತ್ತಿರುವಂತೆ ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಹತ್ತು ವರ್ಷ ವಿರಾಜಮಾನರಾಗಿ ಬೆಳೆದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವರ್ಚಸ್ಸು ಇಳಿಮುಖವಾಗುತ್ತಿರುವ ಸೂಚನೆಗಳು ದಟ್ಟವಾಗುತ್ತಿದ್ದರೆ, ಮತ್ತೊಂದೆಡೆ ರಾಹುಲ್ ಗಾಂಧಿಯವರು ಇನ್ನಷ್ಟು ಎನರ್ಜಿ ಪಡೆದವರಂತೆ ಪಾದರಸದ ರೀತಿಯಲ್ಲಿ ಯುವಜನರನ್ನು ಸೆಳೆಯಲಾರಂಭಿಸಿದ್ದಾರೆ. ಮೋದಿಯವರ ಸುತ್ತ ಕಟ್ಟಿದ್ದ ಅರಗಿನ ಅರಮನೆಯು ಚಳವಳಿಗಳ ಕಾವಿಗೆ ಕರಗಲಾರಂಭಿಸಿದೆ. ಬಿಜೆಪಿ ಬಿತ್ತಿದ ಮತಾಂಧತೆಯ ರಾಜಕಾರಣ, ಮುಂದಿನ ದಿನಗಳಲ್ಲಿ ತೀವ್ರತೆಯನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗುತ್ತಿದೆ.

ಇದನ್ನೂ ಓದಿರಿ: ಮೀಸಲಾತಿಯ ಲಾಭ ಪಡೆದ ನ್ಯಾ ಸಂತೋಷ್ ಹೆಗ್ಡೆ ಮತ್ತು ಬಂಟರು

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ಅಧ್ಯಕ್ಷಗಾದಿಯಿಂದ ಕೆಳಗಿಳಿದ ರಾಹುಲ್ ಗಾಂಧಿಯವರು ಮುಂದೆ ಕ್ರಮಿಸಿದ್ದು ಬೇರೆಯೇ ಹಾದಿಯನ್ನು. “ನಾನು ಕಾಂಗ್ರೆಸ್ಸಿನಲ್ಲಿರುವ ಅನೇಕರನ್ನು ವಿರೋಧಿಸಿದರೂ, ರಾಹುಲ್ ಗಾಂಧಿ ಅವರು ಮಾತ್ರ ನನ್ನ ನೆಚ್ಚಿನ ನಾಯಕ” ಎಂದು ಅನೇಕರು ಹೇಳುವಷ್ಟು ರಾಹುಲ್ ನಡೆಗಳು ಹೊಸತನಗಳಿಂದ, ಬದ್ಧತೆಗಳಿಂದ ಕೂಡಿವೆ.

rahul fitness

‘ವಿದೇಶ’ದಲ್ಲಿ ಬೆಳೆದವ ಎನ್ನುವ ವಿರೋಧಿಗಳ ಬಿರುಪ್ರಚಾರದ ನಡುವೆ ರಾಹುಲ್ ಜನರ ನಡುವೆ ಹೋಗುವುದೇ ಅಂತಿಮ ಗುರಿ ಎಂದು ಅರಿತರು. ಮನೆಯಲ್ಲಿ ಕೂರಲಿಲ್ಲ. ಅವರು ದೇಶದ ಉದ್ದಗಲಕ್ಕೂ ನಡೆದರು. ಆ ಮೂಲಕ, ರಾಹುಲ್ ಕಟ್ಟಿಕೊಂಡಿದ್ದು `ಇಮೇಜ್’ ಮಾತ್ರವಲ್ಲ, ಭಾರತದ ನಾಡಿಮಿಡಿತವನ್ನು ಚೆನ್ನಾಗಿ ಅರಿತರು. ಮಕ್ಕಳಿಂದ ಹಿಡಿದು ಮದುಕರವರೆಗೂ ಅವರು ಅಪ್ಪಿದರು. ಕೆಂಪು ಬಣ್ಣದ ಪುಟ್ಟ ಸಂವಿಧಾನ ಪ್ರತಿಯನ್ನಿಡಿದು ಹೊರಟರು. ಜಾತಿ, ಧರ್ಮಗಳ ಮೂಲಕ ಭಾರತವನ್ನು ಒಡೆಯುತ್ತಿರುವ ದೈತ್ಯ ಶಕ್ತಿಗಳ ಎದುರು, ‘ಭಾರತ್ ಜೋಡೋ’ ಎಂದಾಗ- ರಾಹುಲ್ ಎದೆಯಲ್ಲಿನ ನಿಜಕಾಳಜಿ ಈ ದೇಶದ ಜನರನ್ನು ಸ್ಪರ್ಶಿಸದೆ ಇರಲಿಲ್ಲ. ಅವರು ನಡೆದ ದಾರಿಯಲ್ಲಿ ಪಕ್ಷಕ್ಕೂ ನಿಧಾನವಾಗಿ ಬಲ ತುಂಬಿಕೊಂಡಿತು. ನೊಂದವರ ಕೈಹಿಡಿದರು, ವ್ಯವಸ್ಥೆಯಿಂದ ಬಲಿಪಶುಗಳಾದವರ ಮನೆಗಳಿಗೆ ಹೋದರು, ಶ್ರಮಜೀವಿಗಳ ಜೊತೆ ಕುಳಿತರು. ರಾಹುಲ್ ವಿಭಿನ್ನವಾಗಿ ಕಾಣಿಸಿಕೊಂಡರು. ಅಧಿಕಾರದ ಗದ್ದುಗೆ ಏರುವ ಆಸೆಯಲ್ಲಿ ರಾಜಕಾರಣಿಗಳು ಮಾಡುವ ಹತ್ತಾರು ಕಸರತ್ತುಗಳಲ್ಲಿ ರಾಹುಲ್ ಅವರ ಹೊಸ ಮುಖವೂ ಒಂದೆಂಬಂತೆ ಕಾಣಿಸಲಿಲ್ಲ. ನೋಡುಗರಿಗೆ ‘ಈ ಮನುಷ್ಯ ಪ್ರಾಮಾಣಿಕನಿದ್ದಾರ್ರೀ.. ಅವನೊಳಗ ಕಪಟತನ ಕಾಣಲ್ರೀ’ ಅನಿಸಲಾರಂಭಿಸಿದಾಗ ರಾಹುಲ್‌ ಇಂಚಿಂಚೇ ಜನಮಾನಸ ಗೆಲ್ಲುತ್ತಾ ಹೋದರು. ಇತ್ತ ಅವರ ನಡಿಗೆಯು ದೈಹಿಕ ಮತ್ತು ಮಾನಸಿಕ ಬಲವನ್ನೂ ಅನಾವರಣ ಮಾಡಿದ್ದವು.

ಚುನಾವಣಾ ಯಂತ್ರಾಂಗವೇ ಆಡಳಿತರೂಢ ಪಕ್ಷದ ಜೊತೆ ಇದ್ದಾಗ, ಚುನಾವಣಾ ಅಕ್ರಮಗಳನ್ನು ಬಿಡುಬೀಸಾಗಿ ನಡೆಸುವಾಗ- 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನೂರರ ಗಡಿಗೆ ಹೋಗಿ ನಿಂತಿದ್ದು ತಮಾಷೆಯ ಮಾತಾಗಿರಲಿಲ್ಲ. ಅದರಲ್ಲಿ ರಾಹುಲ್ ಅವರ ಶ್ರಮ ದೊಡ್ಡದಿತ್ತು. ಬಹುಮತವಿದ್ದ ಬಿಜೆಪಿಯನ್ನು ಸಮ್ಮಿಶ್ರ ಸರ್ಕಾರದ ಮಟ್ಟಕ್ಕೆ ಇಳಿಸಿದ್ದರಲ್ಲಿ ರಾಹುಲ್ ಅವರು ಕಟ್ಟಿದ ರಾಜಕೀಯ ಪರಿಭಾಷೆ ಇತ್ತು.

ಅಧಿಕಾರದಲ್ಲಿ 12 ವರ್ಷ ಕಳೆದಿರುವ ಮೋದಿ- ಅಮಿತ್ ಶಾ ಜೋಡಿಯ ವರ್ಚಸ್ಸು ಈಗ ಸಂಧ್ಯಾಕಾಲದಲ್ಲಿದೆ. 2024ರ ಚುನಾವಣೆಯ ಕಾಲಕ್ಕಾಗಲೇ ಬಿಜೆಪಿ ನಾಯಕರು, ಅಭಿವೃದ್ಧಿಯ ಮಾತುಗಳನ್ನು ಬಿಟ್ಟು, ಕೋಮುದ್ವೇಷವೇ ಅಂತಿಮ ಆಯ್ಕೆಯನ್ನಾಗಿ ಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು. ಜನರಿಗೆ ಅಗತ್ಯವಾಗಿ ಬೇಕಿರುವ ಉದ್ಯೋಗವನ್ನಾಗಲೀ, ಮೂಲಭೂತ ಸೌಕರ್ಯವನ್ನಾಗಲೀ ಮುಂದೆ ಇಟ್ಟುಕೊಂಡು ಚುನಾವಣೆ ನಡೆಸುವ ತಾಕತ್ತು ಅವರಲ್ಲಿ ಇಲ್ಲವಾಗಿತ್ತು. ಆದರೆ ಈಗ ನಿರುದ್ಯೋಗಿಗಳಾಗಿರುವ ಭಾರೀ ಸಂಖ್ಯೆಯ ಯುವಜನರು ಬಿಜೆಪಿ ಮೇಲಿನ ಎಲ್ಲ ಭರವಸೆಗಳನ್ನು ಕಳೆದುಕೊಂಡು ನಿಂತಿದ್ದಾರೆ. ಮೋದಿ- ಶಾ ಅವರು ಹೇಳುವ ಕಾಗಕ್ಕ ಗುಬ್ಬಕ್ಕನ ಕಥೆಗಳಾಗಲೀ, ಅವರು ತೋರಿಸುವ ಇಸ್ಲಾಮಾಫೋಬಿಯಾ ಭೂತವಾಗಲೀ ಅನಗತ್ಯ ಎಂದು ಹೊಸತಲೆಮಾರು ಅರಿತಿದೆ ಎಂಬುದು ಜೆನ್ ಝೀಗಳ ಹೋರಾಟ ಸಾಬೀತು ಮಾಡಿದೆ. ಯಾವ ಮಾದರಿಯ ರಾಜಕಾರಣ ಕಟ್ಟಬೇಕು ಎಂದು ರಾಹುಲ್ ಬಯಸಿದ್ದರೋ, ಅಂತಹ ರಾಜಕಾರಣಕ್ಕೆ ವಿದ್ಯಾರ್ಥಿ ಚಳವಳಿ ಮತ್ತಷ್ಟು ಬಲತುಂಬುತ್ತಿದ್ದಂತೆ ರಾಹುಲ್, ಪುಟಿದೇಳಲಾರಂಭಿಸಿದ್ದಾರೆ. ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮತ್ತು ಮೊಳೆಸಹಿತ ಲಾಟಿಯಲ್ಲಿ ಹೊಡೆದಿರುವ ಪ್ರಭುತ್ವದ ಕ್ರೌರ್ಯದ ವಿರುದ್ಧ ಗಟ್ಟಿಯಾಗಿ ನಿಂತಿರುವ ರಾಹುಲ್‌, ಉತ್ತರ ಕೊಡುವವರೆಗೂ ಬಿಡುವುದಿಲ್ಲ ಎಂದು ಸವಾಲು ಎಸೆದಿರುವುದು ಮೋದಿ ಮತ್ತು ಶಾ ಜೋಡಿಯ ನಿದ್ದೆಗೆಡಿಸಿದೆ. ಸಂಸತ್ ಕಲಾಪದ ಕೊನೆಯ ದಿನದವರೆಗೂ ಮೌನ ತಾಳಿದ್ದ ಶಾ, ಕೊನೆಗೂ ಸದನಕ್ಕೆ ಬರಲು ಒಪ್ಪಿದ್ದು, ತಮಾಷೆಯ ಸಂಗತಿಯಲ್ಲ. ಅದು ಚಳವಳಿಯೊಂದರ ಗೆಲುವು ಮಾತ್ರವಲ್ಲ, ವಿರೋಧ ಪಕ್ಷದ ನಾಯಕ ರಾಹುಲ್ ಅವರ ಅವರ ದಿಟ್ಟ ದನಿಯ ಮಾರ್ಧನಿಯೂ ಹೌದು.

rahul in parliment

ಪೆಲೆಟ್ ಗನ್‌ ನಿಂದ ಏಟು ತಿಂದ ಯುವಜನರನ್ನು ಮಾಧ್ಯಮಗಳ ಎದುರು ರಾಹುಲ್ ತಂದು ನಿಲ್ಲಿಸಿದರು, ಮೈಮೇಲಿನ ಗಾಯಗಳನ್ನು ಕ್ಯಾಮೆರಾಗಳಿಗೆ ಹಿಡಿದರು, ಹೋರಾಟದ ಕಾರಣಕ್ಕೆ ಆನ್‌ಲೈನ್‌ ನಲ್ಲಿ ನಿಂದನೆಗೆ ಒಳಗಾದ ಯುವಕ ಯುವತಿಯರ ಹೇಳಿಕೆಗಳನ್ನು ಬಿಡುಗಡೆ ಮಾಡಿಸಿದರು. ಉತ್ತರಪ್ರದೇಶದ ಪ್ರಯಾಗ್ ರಾಜ್‌ ನಲ್ಲಿ ರಾಹುಲ್‌ ನಡೆಸಿದ `ಛಾತ್ರೋಂಕಿ ಗೂಂಜ್’ ಸಮಾವೇಶಕ್ಕೆ ಹರಿದುಬಂದ ಭಾರೀ ಯುವ ಸಮೂಹ ರಾಹುಲ್ ಅವರ ವರ್ಚಸ್ಸು ಏರುಗತಿಯಲ್ಲಿರುವುದನ್ನು ತೋರಿಸಿತು. ಮೋದಿ, ಅಮಿತ್ ಶಾ ಮತ್ತು ಅದಾನಿ- ಈ ಮೂವರು ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ ಎಂಬುದನ್ನು ಜನರಿಗೆ ದಾಟಿಸುವುದಕ್ಕೆ ಈ ವೇದಿಕೆಯನ್ನು ಸಶಕ್ತವಾಗಿ ರಾಹುಲ್‌ ಬಳಸಿಕೊಂಡರು. ಉತ್ತರಪ್ರದೇಶದ ಚುನಾವಣೆ ಹೊಸ್ತಿಲಲ್ಲಿ ರಾಹುಲ್ ಅವರನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಯೋಗಿ ಸರ್ಕಾರ ಮಾಡಿ ವಿಫಲವಾಯಿತು. ರಾಹುಲ್ ಅವರು ಅಧಿಕೃತವಾಗಿಯೇ ಚುನಾವಣಾ ಪ್ರಚಾರವನ್ನು ಲಾಂಚ್ ಮಾಡಿದ್ದಾರೆಂದು ರಾಜಕೀಯ ವಿಶ್ಲೇಷಣೆಗಳು ಬರುತ್ತಿವೆ.

ಇದನ್ನೂ ಓದಿರಿ: ‘ಮಾತೆ’ ಎನ್ನುತ್ತಾ ಡಿಜಿಟಲ್ ನಿಂದನೆ: ಸಿಜೆಪಿ ಮಹಿಳಾ ಪ್ರತಿಭಟನಾಕಾರರಿಗೆ ಬಿಜೆಪಿ ‘ಡಾಕ್ಸಿಂಗ್’ ದಾಳಿ

ಇದೇ ಸಂದರ್ಭದಲ್ಲಿ ಝಾರ್ಖಂಡ್ ಸರ್ಕಾರ, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಯೋಗಿಸಿದ್ದನ್ನು ರಾಹುಲ್ ಖಂಡಿಸಿದ್ದಾರೆ. “ಯಾವುದೇ ಕಾರಣಕ್ಕೂ ಇಂತಹ ಕ್ರಮಗಳನ್ನು ನಾನು ಸಮರ್ಥಿಸುವುದಿಲ್ಲ. ಈ ವಿಚಾರದಲ್ಲಿ ನನ್ನ ಸ್ಪಷ್ಟ ವಿರೋಧವಿದೆ” ಎಂದಿರುವುದು ಬದ್ಧತೆಗೂ ಸಾಕ್ಷಿಯಾಗಿದೆ.  ನೀಟ್ ಪರೀಕ್ಷೆ ರದ್ದುಗೊಂಡ ಬಳಿಕ 11 ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಹೋರಾಟದ ವೇಳೆ ಪೆಲೆನ್ ಗನ್ ಬಳಕೆಯು ಕೇಂದ್ರ ಸರ್ಕಾರದ ಕ್ರೌರ್ಯವನ್ನು ಅನಾವರಣ ಮಾಡಿರುವುದನ್ನು ರಾಹುಲ್‌ ಪ್ರಶ್ನಿಸುತ್ತಿರುವ ರೀತಿ, ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಮತ್ತದೆ ಸವಕಲು ನಿಂದನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಬೆಂಬಲಿಗರು ಹರಿಯಬಿಟ್ಟರೂ ಪ್ರಯೋಜನಕ್ಕೆ ಬರುತ್ತಿಲ್ಲ.  ರಾಹುಲ್‌ ಮಹಾಗೋಡೆಯಂತೆ ನಿಂತುಬಿಟ್ಟಿದ್ದಾರೆ. ಈ ಗಟ್ಟಿತನ ರಾಹುಲ್ ಅವರಿಗೆ ಬಂದಿದ್ದು- ಅವರು ಕಟ್ಟಿಕೊಂಡ ‘ಇಮೇಜ್‌’ನಿಂದ ಮತ್ತು ಸೈದ್ಧಾಂತಿಕ ಬದ್ಧತೆಯಿಂದ.

ಪ್ರಧಾನಿ ಮೋದಿಯವರ ‘ಇಮೇಜ್’- ಮಾಧ್ಯಮ ಮತ್ತು ಪಿಆರ್ ಸ್ಟಂಟ್‌ಗಳಿಂದ ಕಟ್ಟಿದ್ದು ಎಂಬುದು ಢಾಳಾಗಿ ಗುರುತಿಸುವಷ್ಟು ಎದ್ದು ಕಾಣುತ್ತಿದೆ. ನೂರಾರು ಪತ್ರಕರ್ತರನ್ನು ಕೂರಿಸಿಕೊಂಡು ರಾಹುಲ್ ನಡೆಸುವ ಸುದ್ದಿಗೋಷ್ಠಿಗಳ ಫೋಟೋಗಳ ನಡುವೆ ಮೋದಿಯವರದ್ದು ಇಂತಹದ್ದೊಂದು ಫೋಟೋದ ಗೈರು ಹಾಜರಿ ಎದ್ದುಕಾಣುತ್ತದೆ. ಖಚಿತ ದಾಖಲೆಗಳ ಮೂಲಕ ರಾಹುಲ್ ನಡೆಸುವ ಹೊಸ ಮಾದರಿ ಸುದ್ದಿಗೋಷ್ಠಿಗಳ ನಡುವೆ, ಮೋದಿಯವರ ಪೂರ್ವನಿಯೋಜಿತ ಸಂದರ್ಶನಗಳು ತೇಜಸ್ಸು ಕಳೆದುಕೊಂಡಂತೆ ಭಾಸವಾಗುತ್ತವೆ. ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವನ್ನು ತೋರಿಸುವ ರಾಹುಲ್ ಎದುರು, ಪ್ರಶ್ನೆಗಳಿಗೆ ಪಲಾಯನ ಮಾಡುವ ಮೋದಿ-ಶಾ ಜೋಡಿ, ಕಟು ಟೀಕೆಗೆ ಗುರಿಯಾಗುವುದು ಕಾಣಿಸುತ್ತದೆ. ರಾಹುಲ್ ಅವರನ್ನು ಎದುರಿಸಬೇಕಾದ ಬಿಜೆಪಿ ನಾಯಕರು ಮತ್ತಷ್ಟು ಪಿಆರ್ ಸ್ಟಂಟ್‌ಗಳನ್ನು ಮಾಡುವುದು ಅನಿವಾರ್ಯವಾಗಿರುವುದು ರಾಹುಲ್ ಅವರ ಶಕ್ತಿಯ ಹೊಸ ಅಧ್ಯಾಯವೂ ಹೌದು.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ ಮಾದರಿ

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ,...