ದೇವರ ಹುಂಡಿಯಲ್ಲಿ 5 ಸಾವಿರ ರೂ. ಕದ್ದ ಕಳ್ಳ; ಕಾಣಿಕೆಯಾಗಿ ದೇವರ ಪಾದಕ್ಕೆ ಎಷ್ಟು ಹಣವಿಟ್ಟ ಗೊತ್ತಾ?

Date:

ಕಳ್ಳರು ಯಾವುದೇ ಜಾಗಕ್ಕೆ ಕಳ್ಳತನಕ್ಕೆ ಹೋದರೂ ಜಾಗರೂಕರಾಗಿರುತ್ತಾರೆ. ಆದರೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಕದಿಯುವುದಕ್ಕೆ ಹೋದಾಗ ಭಯಭಕ್ತಿ ಹೆಚ್ಚಾಗಿ ಕಾಡುತ್ತದೆ. ದೇವಸ್ಥಾನದ ವಸ್ತು ಕಳವು ಮಾಡಿದರೂ ಕೆಲವೊಮ್ಮೆ ಕ್ಷಮಾಪಣೆ, ತಪ್ಪೊಪ್ಪಿಗೆ ಸಲ್ಲಿಸುವುದುಂಟು. ಅಲ್ಲದೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯದಿಂದ ಕಳ್ಳತನವನ್ನು ನಿರಾಕರಿಸುವ ಸಾಧ್ಯತೆಯು ಇರುತ್ತದೆ. ಈಗ ಅದೇ ರೀತಿಯ ಒಂದು ಘಟನೆ ಹರಿಯಾಣ ರಾಜ್ಯದ ದೇವಸ್ಥಾನವೊಂದರಲ್ಲಿ ನಡೆದಿದೆ.

ಹರಿಯಾಣದ ರೇವಾರಿ ಜಿಲ್ಲೆಯ ಹನುಮಾನ್ ದೇವಸ್ಥಾನದೊಳಗೆ ಕಳ್ಳನೊಬ್ಬ ಹಗಲಿನ ವೇಳೆಯೆ ನುಗ್ಗಿದ್ದಾನೆ. ಹಲವು ಭಕ್ತರ ನಡುವೆಯೆ ದೇವರ ಮುಂದೆ ಕುಳಿತ ಕಳ್ಳ ಸುಮಾರು 10 ನಿಮಿಷ ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾನೆ. ಅರ್ಚಕರ ಸಮ್ಮುಖದಲ್ಲಿಯೇ ದೇವರ ಪಾದಗಳಿಗೆ 10 ರೂಪಾಯಿಗಳನ್ನು ಅರ್ಪಿಸುತ್ತಾನೆ.

ಈ ಸುದ್ದಿ ಓದಿದ್ದೀರಾ? ಪುರುಷತ್ವ ಪರೀಕ್ಷೆಗೆ ರಕ್ತದ ಮಾದರಿ ಬಳಸಿ, ಎರಡು ಬೆರಳು ಪರೀಕ್ಷೆ ನಿಲ್ಲಿಸಿ: ಮದ್ರಾಸ್‌ ಹೈಕೋರ್ಟ್

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೇವಾಸ್ಥಾನದಲ್ಲಿದ್ದ ಹತ್ತಾರು ಭಕ್ತರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಕಾಣಿಕೆ ಡಬ್ಬಿ ಬಳಿ ಹೋದ ಕಳ್ಳ ಯಾರ ಗಮನಕ್ಕೂ ಬಾರದಂತೆ ದೇವರ ಹುಂಡಿಯನ್ನು ಹೊಡೆದು 5 ಸಾವಿರ ರೂ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ನಡೆದಿರುವುದು ತಿಳಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿ ನೋಡಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೇಗುಲಕ್ಕೆ ಆಗಮಿಸಿ ವಿಚಾರಣೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ದೃಶ್ಯಗಳಲ್ಲಿ ಕಳ್ಳನ ಎಲ್ಲ ಚಲನವಲನಗಳು ದಾಖಲಾಗಿದೆ. ಕಳ್ಳತನಕ್ಕೆ ಮೊದಲು ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ದೇವರ ಪಾದಗಳಿಗೆ ದುಡ್ಡನ್ನು ಅರ್ಪಿಸುತ್ತಿರುವುದು ದಾಖಲಾಗಿದೆ.

ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನ | ಸರಬ್ಜಿತ್ ಸಿಂಗ್ ಕೊಲೆಯ ಆರೋಪಿ ಅಮೀರ್ ಸರ್ಫರಾಜ್ ಗುಂಡಿಕ್ಕಿ ಹತ್ಯೆ

ಭಾರತದ ಸರಬ್ಜಿತ್ ಸಿಂಗ್‌ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್‌...

ಮಧ್ಯಪ್ರದೇಶ| ಎರಡು ದಿನಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದ 6 ವರ್ಷದ ಬಾಲಕ ಮೃತ್ಯು

ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದೆ ತೆರೆದ...

ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವದ ಬಗ್ಗೆ ಏ.18ರಂದು ಸುಪ್ರೀಂ ತೀರ್ಪು

ಚುನಾವಣಾ ಬಾಂಡ್‌ ಗಳ ಯೋಜನೆಯ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ್ದ ಅರ್ಜಿಗಳ ಒಂದು...

ಲೋಕಸಭೆ ಚುನಾವಣೆ | ಪ್ರಣಾಳಿಕೆ: ಬಿಜೆಪಿ ‘ಸಂಕಲ್ಪ ಪತ್ರ’ V/s ಕಾಂಗ್ರೆಸ್‌ ‘ನ್ಯಾಯ ಪತ್ರ’; 10 ಪ್ರಮುಖ ಅಂಶಗಳು

ಮೂರನೇ ಬಾರಿಗೆ ಅಧಿಕಾರ ಹಿಡಿಯುತ್ತೇವೆಂದು ಅಬ್ಬರದ ಭಾಷಣ ಮಾಡುತ್ತಿರುವ ಬಿಜೆಪಿ, ಮುಂಬರು...