ಮೊದಲ ಹಂತದ ನೀಟ್ ಯುಜಿ ಕೌನ್ಸೆಲಿಂಗ್ ಫಲಿತಾಂಶ ಮತ್ತು ಕಾಲೇಜು ಹಂಚಿಕೆ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾವೂರ್ಛತ್ರಮ್ ಮೂಲದ 19 ವರ್ಷದ ಯುವತಿ ಮುರುಗೇಶ್ವರಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ನೀಟ್ ಪರೀಕ್ಷೆಯಲ್ಲಿ ಯುವತಿ ಉತ್ತೀರ್ಣರಾಗಿದ್ದರೂ, ಮೊದಲ ಹಂತದ ಕೌನ್ಸೆಲಿಂಗ್ನಲ್ಲಿ ನಿರೀಕ್ಷಿತ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ ಎಂಬ ಕಾರಣದಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ನೀಟ್ ಯುಜಿ ಮರುಪರೀಕ್ಷೆ ಫಲಿತಾಂಶ ಜು.20ಕ್ಕೂ ಮುನ್ನ ಪ್ರಕಟ: NTA
ಈ ನಡುವೆ ಆಕೆಯ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ, ಪರೀಕ್ಷಾ ಒತ್ತಡ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ಸವಾಲುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನೀಟ್ ಯುಜಿ 2026ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಮೇ 3ರಂದು ನಡೆದಿದ್ದ ಈ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಎನ್ಟಿಎ ಮೇ 7 ರಂದು ಲೀಕ್ ಆದ ಪಿಡಿಎಫ್ ‘ಗೆಸ್ ಪೇಪರ್’ ಪತ್ತೆಯಾದ ನಂತರ ರದ್ದುಗೊಳಿಸಿತ್ತು. ಇದಾದ ಬಳಿಕ ಜೂನ್ 21 ಮರುಪರೀಕ್ಷೆ ನಡೆದಿದೆ. ಈ ನಡುವೆ ಹಲವು ವಿದ್ಯಾರ್ಥಿಗಳು ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.




