ನ್ಯಾಯಾಲಯವನ್ನು ‘ಸರ್ವಾಧಿಕಾರ, ಸ್ವೇಚ್ಛಾಚಾರ’ ಎಂದು ಜರೆದ ಯೂಟ್ಯೂಬರ್‌ಗೆ 6 ತಿಂಗಳು ಜೈಲು

Date:

ನ್ಯಾಯಾಲಯಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ನ್ಯಾಯಾಂಗ ವ್ಯವಸ್ಥೆಯನ್ನು ‘ತಾನಾಶಾಹಿ’ (ಸರ್ವಾಧಿಕಾರ) ಮತ್ತು ‘ಮನ್‌ಮರ್ಜಿ’ (ಸ್ವೇಚ್ಛಾಚಾರ) ಎಂದು ಜರೆದ ಯೂಟ್ಯೂಬರ್ ಗುಲ್ಶನ್ ಪಹುಜಾ ಎಂಬಾತನಿಗೆ ದೆಹಲಿ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ಹಾಗೂ 2,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

- Advertisement -

ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ‘ಫೈಟ್ 4 ಜ್ಯುಡಿಷಿಯಲ್ ರಿಫಾರ್ಮ್ಸ್’ (Fight 4 Judicial Reforms) ಎಂಬ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯಗಳ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮತ್ತು ಕೋರ್ಟ್ ಕಲಾಪದ ವೇಳೆ ಅಸಂಬದ್ಧ ಮಾತುಗಳನ್ನಾಡಿದ್ದಕ್ಕಾಗಿ ಪಹುಜಾ ವಿರುದ್ಧ ‘ಕ್ರಿಮಿನಲ್ ನ್ಯಾಯಾಲಯ ನಿಂದನೆ’ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 21 ರಂದು ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಮಾನಿಸಿತ್ತು. ತದನಂತರ ಶಿಕ್ಷೆಯ ಪ್ರಮಾಣ ನಿರ್ಧರಿಸಲು ಪ್ರತ್ಯೇಕ ವಿಚಾರಣೆ ನಡೆಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಶಿಕ್ಷೆಯ ವಿಚಾರಣೆ ಸಂದರ್ಭದಲ್ಲೂ ಪಹುಜಾ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ ಹಾಗೂ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಬದಲಾಗಿ ಮತ್ತಷ್ಟು ಉದ್ದಟತನ ಪ್ರದರ್ಶಿಸಿದ ಆತ, “ಅದಾಲತೋನ್ ಕೀ ಮನ್‌ಮರ್ಜಿ ಬಢ್ತೀ ಜಾ ರಹೀ ಹೈ ಔರ್ ಮೈ ಕೋಯಿ ನ್ಯಾಯ್ ಕೀ ಉಮ್ಮೀದ್ ನಹೀ ಕರ್ ರಹಾ” (ನ್ಯಾಯಾಲಯಗಳ ಸ್ವೇಚ್ಛಾಚಾರ ಹೆಚ್ಚಾಗುತ್ತಿದೆ ಮತ್ತು ನಾನು ಭಾರತೀಯ ನ್ಯಾಯ ವ್ಯವಸ್ಥೆಯಿಂದ ಯಾವುದೇ ನ್ಯಾಯವನ್ನು ನಿರೀಕ್ಷಿಸುತ್ತಿಲ್ಲ) ಮತ್ತು “ಮನ್‌ಮರ್ಜಿ ಕಾ ದೂಸ್ರಾ ಅರ್ಥ್ ತಾನಾಶಾಹಿ ಹೋತಾ ಹೈ” (ಸ್ವೇಚ್ಛಾಚಾರದ ಇನ್ನೊಂದು ಅರ್ಥ ಸರ್ವಾಧಿಕಾರ) ಎಂದು ವಾದಿಸಿದ್ದ. ಈ ಮೂಲಕ ನ್ಯಾಯಾಲಯವನ್ನು ಸರ್ವಾಧಿಕಾರಕ್ಕೆ ಹೋಲಿಸಿರುವುದು ಆತನ ಮೊಂಡುತನವನ್ನು ತೋರಿಸುತ್ತದೆ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನು ಓದಿದ್ದೀರಾ? ‘ನೋಡ್ತಾ ಇರಿ, ಬಂಗಾಳದ ಥರ ಕೇರಳನೂ ಗೆಲ್ತೀವಿ’: ಪ್ರಲ್ಹಾದ್‌ ಜೋಷಿ ಬಡಾಯಿ!

ಇದೇ ವಿಡಿಯೊದಲ್ಲಿ ಭಾಗಿಯಾಗಿದ್ದ ವಕೀಲರಾದ ಶಿವನಾರಾಯಣ್ ಶರ್ಮಾ ಮತ್ತು ದೀಪಕ್ ಸಿಂಗ್ ಅವರು ನ್ಯಾಯಾಲಯದ ಬೇಷರತ್ ಕ್ಷಮೆಯಾಚಿಸಿದ್ದರಿಂದ ಅವರ ಮೇಲಿನ ನ್ಯಾಯಾಲಯ ನಿಂದನೆ ಪ್ರಕರಣವನ್ನು ಕೋರ್ಟ್ ಕೈಬಿಟ್ಟಿದೆ. ಆದರೆ, ಯಾವುದೇ ಪಶ್ಚಾತ್ತಾಪವಿಲ್ಲದ ಯೂಟ್ಯೂಬರ್ ಪಹುಜಾಗೆ ಕಡಿಮೆ ಶಿಕ್ಷೆ ನೀಡಿದರೆ, ಮುಂದೆ ಇಂತಹ ಕೃತ್ಯಗಳನ್ನು ಎಸಗಲು ಆತನಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ನ್ಯಾಯಾಲಯ ನಿಂದನೆ ಕಾಯ್ದೆಯಡಿಯ ಗರಿಷ್ಠ ಶಿಕ್ಷೆಯಾದ 6 ತಿಂಗಳ ಜೈಲುವಾಸವನ್ನು ಕಟ್ಟುನಿಟ್ಟಾಗಿ ವಿಧಿಸಿದೆ.

ಆದಾಗ್ಯೂ, ಗುಲ್ಶನ್ ಪಹುಜಾ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ, ಈ ಶಿಕ್ಷೆಯ ಜಾರಿಯನ್ನು 60 ದಿನಗಳ ಕಾಲ ತಡೆಹಿಡಿಯಲಾಗಿದೆ. “ನ್ಯಾಯಾಂಗವನ್ನು ಸುಧಾರಿಸುವ ಹೆಸರಿನಲ್ಲಿ ತನ್ನ ತಪ್ಪನ್ನು ಸಮರ್ಥಿಸಿಕೊಂಡು, ನ್ಯಾಯಾಲಯದ ಘನತೆಗೆ ಧಕ್ಕೆ ತರುವುದನ್ನು ಎಂದಿಗೂ ಸಹಿಸಲಾಗದು” ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...