ಗ್ರಾಹಕರಿಂದ ಅರಿವಿಲ್ಲದಂತೆ ಹಣ ವಸೂಲಿ: ಬುಕ್‌ಮೈಶೋ, ಝೆಪ್ಟೋ ಸೇರಿ 9 ಆ್ಯಪ್‌ಗಳಿಗೆ ದಂಡ

Date:

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಅಥವಾ ಟಿಕೆಟ್ ಬುಕ್ ಮಾಡುವಾಗ ಗ್ರಾಹಕರಿಗೆ ಅರಿವಿಲ್ಲದಂತೆ ಹೆಚ್ಚುವರಿ ಹಣ ವಸೂಲಿ ಮಾಡುವ ಹಾಗೂ ಅವರ ಆಯ್ಕೆಗಳನ್ನು ದಿಕ್ಕುತಪ್ಪಿಸುವ ‘ಡಾರ್ಕ್ ಪ್ಯಾಟರ್ನ್ಸ್’ (Dark Patterns) ತಂತ್ರಜ್ಞಾನ ಬಳಸಿದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) 9 ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿದೆ. ಝೆಪ್ಟೋ, ಬುಕ್‌ಮೈಶೋ, ಇಂಡಿಗೋ ಹಾಗೂ ಫಿಸಿಕ್ಸ್ ವಾಲಾ ಸೇರಿದಂತೆ 9 ಸಂಸ್ಥೆಗಳು ಗ್ರಾಹಕರನ್ನು ದಿಕ್ಕುತಪ್ಪಿಸುವ ವೆಬ್‌ಸೈಟ್ ವಿನ್ಯಾಸಗಳನ್ನು ಬಳಸಿರುವುದು ಸಾಬೀತಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ.

- Advertisement -

ಆನ್‌ಲೈನ್‌ನಲ್ಲಿ ಆರಂಭದಲ್ಲಿ ಕಡಿಮೆ ಬೆಲೆ ತೋರಿಸಿ, ಪಾವತಿ ಮಾಡುವ ಅಂತಿಮ ಹಂತದಲ್ಲಿ ಗುಪ್ತ ಶುಲ್ಕಗಳನ್ನು ಸೇರಿಸುವುದು ಅಥವಾ ಗ್ರಾಹಕರಿಗೆ ಅರಿವಿಲ್ಲದಂತೆ ದೇಣಿಗೆ, ಸದಸ್ಯತ್ವಗಳನ್ನು ಬಿಲ್‌ಗೆ ಕಡ್ಡಾಯವಾಗಿ ಹೇರುವುದನ್ನು ‘ಡಾರ್ಕ್ ಪ್ಯಾಟರ್ನ್ಸ್’ ಎನ್ನಲಾಗುತ್ತದೆ. 2023ರ ಮಾರ್ಗಸೂಚಿ ಅನ್ವಯ, ಸುಳ್ಳು ಅವಸರ ಸೃಷ್ಟಿಸುವುದು, ದಾರಿ ತಪ್ಪಿಸುವ ಪ್ರಶ್ನೆಗಳು ಸೇರಿದಂತೆ 13 ಬಗೆಯ ಇಂತಹ ವಂಚನೆಗಳನ್ನು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಕ್ವಿಕ್-ಕಾಮರ್ಸ್ ಆ್ಯಪ್ ಝೆಪ್ಟೋ (Zepto), ಟಿಕೆಟ್ ಬುಕಿಂಗ್ ವೇದಿಕೆ ಬುಕ್‌ಮೈಶೋ (BookMyShow), ವಿಮಾನಯಾನ ಸಂಸ್ಥೆ ಇಂಡಿಗೋ (IndiGo), ಶಿಕ್ಷಣ ವೇದಿಕೆ ಫಿಸಿಕ್ಸ್ ವಾಲಾ (Physics Wallah), ಫಸ್ಟ್‌ಕ್ರೈ (FirstCry), ಫಾರ್ಮ್‌ಈಸಿ (PharmEasy), ಮೆಕಾಫೆ (McAfee), ಸ್ಪೈಸ್‌ಜೆಟ್ (SpiceJet) ಮತ್ತು ಆನ್‌ಲೈನ್ ಕೋಚಿಂಗ್ ವೇದಿಕೆ ಅನುಜ್ ಜಿಂದಾಲ್ (Anuj Jindal). ಈ ಒಂಬತ್ತು ಸಂಸ್ಥೆಗಳು ಗ್ರಾಹಕರನ್ನು ದಿಕ್ಕುತಪ್ಪಿಸುವ ವೆಬ್‌ಸೈಟ್ ವಿನ್ಯಾಸಗಳನ್ನು ಬಳಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ 20 ಲಕ್ಷ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ನಿಯಮ ಉಲ್ಲಂಘಿಸಿದ ಕ್ವಿಕ್-ಕಾಮರ್ಸ್ ಆ್ಯಪ್ ಝೆಪ್ಟೋಗೆ 7 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಆರಂಭದಲ್ಲಿ ಕಡಿಮೆ ಬೆಲೆ ತೋರಿಸಿ ಕೊನೆಗೆ ಹ್ಯಾಂಡ್ಲಿಂಗ್ ಶುಲ್ಕ ಸೇರಿಸುತ್ತಿತ್ತು . ಅಲ್ಲದೆ ಗ್ರಾಹಕರ ಒಪ್ಪಿಗೆಯಿಲ್ಲದೆ ತಾನಾಗಿಯೇ ಸದಸ್ಯತ್ವವನ್ನು ಬಿಲ್‌ನಲ್ಲಿ ಸೇರಿಸುತ್ತಿತ್ತು. ದಂಡದ ಬಳಿಕ ಝೆಪ್ಟೋ ಈ ಪದ್ಧತಿಯನ್ನು ಕೈಬಿಟ್ಟಿದೆ. ಸಿನಿಮಾ ಟಿಕೆಟ್ ಬುಕ್ ಮಾಡುವಾಗ ಗ್ರಾಹಕರು ಗಮನಿಸದಂತೆ ‘ಬುಕ್-ಎ-ಸ್ಮೈಲ್’ ಚಾರಿಟಿಗೆ 1 ರೂ. ದೇಣಿಗೆಯನ್ನು ಮೊದಲೇ ಆಯ್ಕೆ ಆಗಿರುವಂತೆ ವಿನ್ಯಾಸಗೊಳಿಸಿದ್ದ ಬುಕ್‌ಮೈಶೋ ಕೂಡ ನಿಯಮಗಳ ಉಲ್ಲಂಘನೆ ಮಾಡಿದ್ದು, ಈ ಗುಪ್ತ ಆಯ್ಕೆಯನ್ನು ಕೂಡಲೇ ತೆಗೆದುಹಾಕುವಂತೆ ಪ್ರಾಧಿಕಾರ ಸೂಚಿಸಿದೆ.

ಅಂತೆಯೇ, ವಿಮಾನಯಾನ ಸಂಸ್ಥೆ ಇಂಡಿಗೋ ಗ್ರಾಹಕರಿಗೆ ‘ಕನ್‌ಫರ್ಮ್ ಶೇಮಿಂಗ್’ ತಂತ್ರ ಬಳಸಿತ್ತು. ಅಂದರೆ, ಹೆಚ್ಚುವರಿ ಸೇವೆ ನಿರಾಕರಿಸುವಾಗ “ಇಲ್ಲ, ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ” ಎಂಬ ಆಯ್ಕೆ ನೀಡಿ ಗ್ರಾಹಕರಲ್ಲಿ ಮುಜುಗರ ಉಂಟುಮಾಡುತ್ತಿತ್ತು. ಇದೀಗ ಪ್ರಾಧಿಕಾರದ ಸೂಚನೆ ಮೇರೆಗೆ ಅದನ್ನು “ಇಲ್ಲ, ನಾನು ಪ್ರವಾಸಕ್ಕೆ ಸೇರಿಸುವುದಿಲ್ಲ” ಎಂದು ತಟಸ್ಥವಾಗಿ ಬದಲಾಯಿಸಲಾಗಿದೆ. ಡಿಜಿಟಲ್ ಶಿಕ್ಷಣ ವೇದಿಕೆ ಫಿಸಿಕ್ಸ್ ವಾಲಾಗೆ 5 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಪಿಡಬ್ಲ್ಯೂ ಫೌಂಡೇಶನ್‌ಗೆ 10 ರೂ. ದೇಣಿಗೆಯನ್ನು ಮೊದಲೇ ಆಯ್ಕೆ ಮಾಡಿ, ಗ್ರಾಹಕರು ಅದನ್ನು ತೆಗೆಯದಂತೆ ಭಾವನಾತ್ಮಕ ಸಂದೇಶಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, ಉಚಿತ ಕೋರ್ಸ್‌ಗಳನ್ನು ವೀಕ್ಷಿಸುವ ಮುನ್ನ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಕಡ್ಡಾಯವಾಗಿ ನೀಡುವಂತೆ ಒತ್ತಾಯಿಸಲಾಗುತ್ತಿತ್ತು.

ಇತರ ಸಂಸ್ಥೆಗಳಾದ ಫಸ್ಟ್‌ಕ್ರೈ, ಫಾರ್ಮ್‌ಈಸಿ, ಮೆಕಾಫೆ ಮತ್ತು ಸ್ಪೈಸ್‌ಜೆಟ್ ಸಂಸ್ಥೆಗಳಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ, ಆನ್‌ಲೈನ್ ಕೋಚಿಂಗ್ ವೇದಿಕೆ ಅನುಜ್ ಜಿಂದಾಲ್‌ಗೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ. ಗುಪ್ತ ಶುಲ್ಕಗಳು, ಬಲವಂತದ ಚಂದಾದಾರಿಕೆ, ದಾರಿ ತಪ್ಪಿಸುವ ಕೌಂಟ್‌ಡೌನ್‌ಗಳನ್ನು ತೋರಿಸಿ ಗ್ರಾಹಕರನ್ನು ವಂಚಿಸಿದ ಆರೋಪದಡಿ ಒಟ್ಟಾರೆಯಾಗಿ ಪ್ರಾಧಿಕಾರವು ಈ 9 ಸಂಸ್ಥೆಗಳಿಂದ 20 ಲಕ್ಷ ರೂ. ದಂಡವನ್ನು ವಸೂಲಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ: ತಿಲಕ, ಆಧಾರ್ ಕಾರ್ಡ್ ಹಾಗೂ ಕುಟುಂಬ ಸಮೇತ ಆಗಮನ ಕಡ್ಡಾಯ!

ಮುಂಬೈನ ಬೋರಿವಲಿಯಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ ನವರಾತ್ರಿ ಗರ್ಬಾ ಮತ್ತು ದಾಂಡಿಯಾ ಉತ್ಸವದಲ್ಲಿ...

ಯುಪಿ ಚುನಾವಣೆ | ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಮತಗಳನ್ನು 27,000 ಕಡಿತಗೊಳಿಸುತ್ತೇವೆ: ಅಖಿಲೇಶ್ ಪ್ರತಿಜ್ಞೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ....

ಅಮೃತಸರದಲ್ಲಿ ಕಳೆದುಹೋಗಿ ಗಯಾದಲ್ಲಿ ಪತ್ತೆ; ಎಐ ತಂತ್ರಜ್ಞಾನದ ನೆರವಿನಿಂದ ಕುಟುಂಬವನ್ನು ಸೇರಿದ ವ್ಯಕ್ತಿ

ಪಂಜಾಬ್‌ನಿಂದ ದಾರಿ ತಪ್ಪಿ 1,200 ಕಿಲೋಮೀಟರ್‌ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...