ಅಮೆರಿಕಾದ 40% ಜನರಿಗೆ ಮೋದಿ ಯಾರೆಂದು ಗೊತ್ತೇ ಇಲ್ಲ; ಕೆಲವು ಯುರೋಪಿಯನ್ ದೇಶಗಳಿಗೆ ಭಾರತದ ಬಗ್ಗೆ ವಿಶ್ವಾಸವಿಲ್ಲ: ಸಮೀಕ್ಷೆ

Date:

ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವ್ಯವಹಾರಗಳ ವಿಷಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು 37% ಜನರು ಹೇಳಿದ್ದರೆ, 40% ಜನರು ಇಲ್ಲ ಎಂದಿದ್ದಾರೆ. 

ಅಮೆರಿಕಾದಲ್ಲಿ ವಾಸಿಸುತ್ತಿರುವ ಜನರಲ್ಲಿ ಬರೋಬ್ಬರಿ 40% ಜನರು ಪ್ರಧಾನಿ ಮೋದಿ ಬಗ್ಗೆ ಕೇಳಿಯೇ ಇಲ್ಲ. ಅವರಿಗೆ ಮೋದಿ ಯಾರೆಂಬುದೇ ಗೊತ್ತಿಲ್ಲ. ಅಲ್ಲದೆ, ಕನಿಷ್ಠ ಐದು ಯುರೋಪಿಯನ್ ರಾಷ್ಟ್ರಗಳಲ್ಲಿ ಭಾರತದ ಬಗೆಗಿನ ಅಭಿಪ್ರಾಯಗಳು ನಕಾರಾತ್ಮಕವಾಗಿ ಬದಲಾಗಿವೆ. ಅದರಲ್ಲೂ, ಮೆಕ್ಸಿಕೋ ಮತ್ತು ಬ್ರೆಜಿಲ್‌ನಂತಹ ದೇಶಗಳ ಜನರು ಮೋದಿ ನಾಯಕತ್ವವನ್ನು ಟೀಕಿಸುತ್ತಿದ್ದಾರೆ ಎಂದು ‘ವ್ಯೂ ರಿಸರ್ಚ್‌ ಸೆಂಟರ್‌’ ಸಮೀಕ್ಷೆ ತಿಳಿಸಿದೆ.

ಪ್ರಧಾನಿ ಮೋದಿಯ ಜಾಗತಿಕ ದೃಷ್ಟಿಕೋನ, ಭಾರತದ ಜಾಗತಿಕ ಶಕ್ತಿಯ ವ್ಯಾಪ್ತಿಗಳ ಕುರಿತು ‘ವ್ಯೂ ರಿಸರ್ಚ್ ಸೆಂಟರ್’ ಸಮೀಕ್ಷೆಗಳನ್ನು ನಡೆಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೂ ಮೊದಲು ಈ ಸಮೀಕ್ಷೆ ನಡೆದಿದ್ದು, ಭಾರತ ಮತ್ತು ಮೋದಿ ಅವರ ಬಗ್ಗೆ ಇತರ ದೇಶಗಳ ಅಭಿಪ್ರಾಯ ಮತ್ತು ದೃಷ್ಟಿಕೋನಗಳು ಹೇಗಿವೆ ಎಂಬುದನ್ನು ವಿಶ್ಲೇಷಿಸಿದೆ.

ಭಾರತ, ಉತ್ತರ ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ, ಏಷ್ಯಾ-ಪೆಸಿಫಿಕ್ ಪ್ರದೇಶ, ಉಪ-ಸಹಾರನ್ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಸೇರಿದಂತೆ 24 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಸುಮಾರು 46% ಮಂದಿ ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. 34% ಮಂದಿ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಹಾಗೂ 16% ಜನರು ಯಾವುದೇ ಅಭಿಪ್ರಾಯ ಹೊಂದಿಲ್ಲ ಎಂದು ವರದಿ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವ್ಯವಹಾರಗಳ ವಿಷಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು 37% ಜನರು ಹೇಳಿದ್ದರೆ, 40% ಜನರು ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ಬಗ್ಗೆ ಇಸ್ರೇಲ್‌ನ ಜನರು ಹೆಚ್ಚು ಸಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅಲ್ಲಿನ 71% ಜನರು ದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಮೆಕ್ಸಿಕೋ ಮತ್ತು ಬ್ರೆಜಿಲ್‌ನ ಜನರಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಮೋದಿ ಬಗ್ಗೆ ವಿಶ್ವಾಸ ಹೊಂದಿಲ್ಲ. ಅಲ್ಲದೆ, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹೆಚ್ಚಿನ ಸಂಖ್ಯೆಯ ಜನರು ಮೋದಿ ಬಗ್ಗೆ ವಿಶ್ವಾಸವನ್ನು ಹೊಂದಿಲ್ಲ ಎಂದು ವರಿದ ಹೇಳಿದೆ.

ಆದಾಗ್ಯೂ, ಜಪಾನ್, ಕೀನ್ಯಾ ಮತ್ತು ನೈಜೀರಿಯಾದ ಜನರು ಮೋದಿಯವರ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಫ್ರಾನ್ಸ್, ಯುಕೆ, ಸ್ಪೇನ್, ಜರ್ಮನಿ ಮತ್ತು ಪೋಲೆಂಡ್ – ಐದು ಯುರೋಪಿಯನ್ ರಾಷ್ಟ್ರಗಳು ಭಾರತ ಮತ್ತು ಮೋದಿ ನಾಯಕತ್ವದ ಬಗ್ಗೆ ವಿಶ್ವಾಸವನ್ನು ಹೊಂದಿಲ್ಲ ಎಂದು ಹೇಳಲಾಗಿದೆ.

“ಹಂಗೇರಿ, ಆಸ್ಟ್ರೇಲಿಯಾ ಮತ್ತು ಇಸ್ರೇಲ್‌ನಲ್ಲಿ ಬಲಪಂಥೀಯ ರಾಜಕೀಯ ಸಿದ್ದಾಂತ ಹೊಂದಿರುವವರು ಮೋದಿ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಆದರೆ, ಅಲ್ಲಿನ ಎಡಪಂಥೀಯರು ವಿಶ್ವಾಸ ಹೊಂದಿಲ್ಲ. ಇದಕ್ಕೆ ಅಮೆರಿಕಾ ವಿರುದ್ಧವಾಗಿದ್ದು, ಅಲ್ಲಿನ ಬಲಪಂಥೀಯರಿಗಿಂತ ಉದಾರವಾದಿಗಳು ಮೋದಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಗ್ರೀಸ್‌, ಇಟಲಿ, ಫ್ರಾನ್ಸ್‌ನ ಬಲಪಂಥೀಯರು ಮೋದಿ ಬಗ್ಗೆ ವಿಶ್ವಾಸ ಹೊಂದಿದ್ದಾರೆ.

ಆದರೆ, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯಾದಲ್ಲಿ 2018ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅಂದಿಗೆ ಹೋಲಿಸಿದರೆ, ಭಾರತದ ಬಗ್ಗೆ ಅನುಕ್ರಮವಾಗಿ 12% ಮತ್ತು 6% ವಿಶ್ವಾಸ ಕುಗ್ಗಿದೆ.

ಭಾರತೀಯರು ಏನು ಯೋಚಿಸುತ್ತಾರೆ

ಸಮೀಕ್ಷೆಗೆ ಒಳಪಟ್ಟ ಭಾರತೀಯರಲ್ಲಿ ಸುಮಾರು ಅರ್ಧದಷ್ಟು (ಸುಮಾರು 49%) ಜನರು ಪ್ರಪಂಚದಾದ್ಯಂತ ಅಮೆರಿಕಾ ಪ್ರಭಾವವು ಬಲಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಆದರೆ, 41% ಜನರು ರಷ್ಯಾದ ಬಲದ ಬಗ್ಗೆ ಮಾತನಾಡಿದ್ದಾರೆ. ಆದರೆ, ಚೀನಾ ಪ್ರಭಾವದ ಬಗ್ಗೆ ಭಾರತೀಯ ದೃಷ್ಟಿಕೋನಗಳು ಹೆಚ್ಚು ಮಿಶ್ರವಾಗಿವೆ ಎಂದು ಸಮೀಕ್ಷಾ ವರದಿ ವಿವರಿಸಿದೆ.

ಈ ಸುದ್ದಿ ಓದಿದ್ದೀರಾ?: ಏರುತ್ತಿರುವ ರಾಹುಲ್ ಜನಪ್ರಿಯತೆಗೆ ಮೋದಿ ಆತಂಕಗೊಂಡಿದ್ದಾರೆಯೇ? ಅಂಕಿ-ಅಂಶ ಏನು ಹೇಳುತ್ತದೆ?

2023ರಲ್ಲಿ 10 ಭಾರತೀಯ ವಯಸ್ಕರಲ್ಲಿ ಏಳು ಮಂದಿ ಪಾಕಿಸ್ತಾನದ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾರೆ – ಇದು ದ್ವಿಪಕ್ಷೀಯ ಸಂಬಂಧಗಳ ನಡುವೆ ಸ್ಥಿರವಾದ ಪ್ರವೃತ್ತಿಯಾಗಿದೆ. ಪಾಕಿಸ್ತಾನದ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಭಾರತೀಯ ವಯಸ್ಕರ ಪಾಲು 2013ರಿಂದ ಇಲ್ಲಿಯವರೆಗೂ 60%ಗಿಂತ ಕಡಿಮೆಯಾಗಿಲ್ಲ.

ಏತನ್ಮಧ್ಯೆ, ಭಾರತವು ಇತ್ತೀಚೆಗೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು 10ರಲ್ಲಿ ಏಳು ಜನರು ಭಾವಿಸುತ್ತಾರೆ. ಇದು 19 ರಾಷ್ಟ್ರಗಳಲ್ಲಿ ನಡೆಸಿದ 2022ರ ವಿಶ್ಲೇಷಣೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಆ ರಾಷ್ಟ್ರಗಳ ಕೇವಲ 28% ಜನರು ಭಾರತದ ಪ್ರಭಾವದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. 19% ಜನರು ಭಾರತ ದುರ್ಬಲಗೊಳ್ಳುತ್ತಿದೆ ಎಂದು ಹೇಳುತ್ತಾರೆ. 13% ಜನರು ಅದರ ಪ್ರಭಾವ ಯಾವ ರೀತಿಯಲ್ಲೂ ಬದಲಾಗಿಲ್ಲ ಎಂದಿದ್ದಾರೆ.

ಇನ್ನು, ಮೋದಿ ಅವರ ವಿಚಾರದಲ್ಲಿ 10 ಭಾರತೀಯರಲ್ಲಿ ಸುಮಾರು 8 ಮಂದಿ ಸಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಅಲ್ಲದೆ, 55% ಜನರು ಮೋದಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಕೇವಲ 5ನೇ 1ರಷ್ಟು ಭಾರತೀಯರು ಮಾತ್ರ ಮೋದಿ ಬಗ್ಗೆ ವಿಶ್ವಾಸ ಹೊಂದಿಲ್ಲ ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಚಿನ್ನಾಭರಣ: ಹಸ್ತಾಂತರ ಪ್ರಕ್ರಿಯೆಗೆ ನೀಡಿದ್ದ ತಡೆ ವಿಸ್ತರಿಸಿದ ಹೈಕೋರ್ಟ್‌

ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ಸುಪರ್ದಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ...

ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೂಡ ಮರ್ಯಾದೆ ಕೊಡುವೆ: ಡಿ.ಕೆ. ಶಿವಕುಮಾರ್

"ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ...

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ಮೊದಲ ರ‍್ಯಾಂಕ್‌, 1016 ಮಂದಿ ತೇರ್ಗಡೆ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳನ್ನು...

‘ನಾನು ಭಯೋತ್ಪಾದಕನಲ್ಲ’; ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಸಂದೇಶ

ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ...