ಆಂತರಿಕ ಸಂಘರ್ಷ: ಆಶ್ರಯಕ್ಕಾಗಿ ಭಾರತದೊಳಗೆ ಕಾಲಿಟ್ಟ 600ಕ್ಕೂ ಹೆಚ್ಚು ಮಯನ್ಮಾರ್‌ ಸೈನಿಕರು!

Date:

ಮಯನ್ಮಾರ್‌ನಲ್ಲಿ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ. ಇದರ ನಡುವೆಯೇ ಸುಮಾರು 600ಕ್ಕೂ ಹೆಚ್ಚು ಮಯನ್ಮಾರ್‌ ಸೈನಿಕರು ಭಾರತಕ್ಕೆ ಕಾಲಿಟ್ಟು, ಆಶ್ರಯ ಕೋರಿರುವುದಾಗಿ ವರದಿಯಾಗಿದೆ.

ಮಯನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ ಭಾರತದ ರಾಜ್ಯವಾಗಿರುವ ಮಿಝೋರಾಂನ ಕೆಲವು ಪ್ರದೇಶಗಳ ಮೂಲಕ ಸೈನಿಕರು ಪ್ರವೇಶಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಭಾರತ-ಮಯನ್ಮಾರ್‌-ಬಾಂಗ್ಲಾದೇಶದ ಗಡಿ ಭಾಗದ ಜಂಕ್ಷನ್‌ ಎಂದು ಗುರುತಿಸಲಾಗಿರುವ ಮಿಜೋರಾಂನ ಬಂಡುಕ್ಬಂಗಾ ಗ್ರಾಮದೊಳಗೆ ಬುಧವಾರ ಮಧ್ಯಾಹ್ನ ಕನಿಷ್ಠ 276 ಮಯನ್ಮಾರ್‌ ಸೇನೆಯ ಸಿಬ್ಬಂದಿಗಳು ಭಾರತದ ಭೂಪ್ರದೇಶದೊಳಗೆ ಪ್ರವೇಶಿಸುತ್ತಿರುವ ದೃಶ್ಯವು ಹರಿದಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಿಝೋರಾಂ ಸರ್ಕಾರವು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದು, ಈ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಎಚ್ಚರಿಸಿದೆ. ನೆರೆಯ ರಾಷ್ಟ್ರದ ಸೈನಿಕರನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ತ್ವರಿತವಾಗಿ ಖಚಿತಪಡಿಸಿ ಎಂದು ಒತ್ತಾಯಿಸಿದೆ.

ಮಯನ್ಮಾರ್‌ನಲ್ಲಿ ತೀವ್ರ ಘರ್ಷಣೆಯ ನಡುವೆ ಸುಮಾರು 600 ಮ್ಯಾನ್ಮಾರ್ ಸೇನೆಯ ಸೈನಿಕರು ಭಾರತವನ್ನು ದಾಟಿದ್ದಾರೆ. ಪಶ್ಚಿಮ ಮಯನ್ಮಾರ್‌ ರಾಜ್ಯದ ರಾಖೈನ್‌ನಲ್ಲಿ ಜನಾಂಗೀಯ ಸಶಸ್ತ್ರ ಗುಂಪು ಅರಕನ್ ಆರ್ಮಿ (ಎಎ) ಉಗ್ರಗಾಮಿಗಳು ತಮ್ಮ ಶಿಬಿರಗಳನ್ನು ವಶಪಡಿಸಿಕೊಂಡ ನಂತರ ಸೈನಿಕರು ಭಾರತದೊಳಗೆ ಬಂದಿದ್ದು, ಸೈನಿಕರು ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಮಾತುಕತೆ ನಡೆಸುವಂತೆ ಮಿಝೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಝೋರಾಂ ಮುಖ್ಯಮಂತ್ರಿ ಲಾಲ್ದುಹೋಮ, “ಜನರು ಆಶ್ರಯಕ್ಕಾಗಿ ಮಯನ್ಮಾರ್‌ನಿಂದ ನಮ್ಮ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ನಾವು ಅವರಿಗೆ ಮಾನವೀಯ ಆಧಾರದ ಮೇಲೆ ಸಹಾಯ ಮಾಡುತ್ತಿದ್ದೇವೆ. ಮಯನ್ಮಾರ್ ಸೈನಿಕರು ಕೂಡ ಬರುತ್ತಲೇ ಇದ್ದು, ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 450 ಸೇನಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ” ಎಂದು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ: ಸಿದ್ದರಾಮಯ್ಯ

ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ....

‘ಹಕ್ಕಿ ಗೂಡು ಕಟ್ಟಿದ್ದಂತೆ ಮನೆ ನಿರ್ಮಿಸಿದ್ದೆವು’; ಸಿಲ್ಕ್ಯಾರಾ ‘ಹೀರೋ’ ಹಸನ್‌ ಪತ್ನಿಯ ಅಳಲು

ಸಿಲ್ಕ್ಯಾರಾ ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರ್‍ಯಾಟ್ ಹೋಲ್ ಮೈನರ್ಸ್...

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ | ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರದ ತಡೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್...

ಚೀನಾದ ಒಪ್ಪಂದ ರದ್ದು; ಭಾರತದೊಂದಿಗೆ ಶ್ರೀಲಂಕಾ ಇಂಧನ ಒಪ್ಪಂದ

ಚೀನಾದ ಸಂಸ್ಥೆಯೊಂದು ಪಡೆದ ಟೆಂಡರ್‌ಅನ್ನು ರದ್ದುಗೊಳಿಸಿರುವ ಶ್ರೀಲಂಕಾ, ಮೂರು ಸೌರ ಮತ್ತು...