ಬಿಹಾರ ಚುನಾವಣೆ | ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ; ತೀವ್ರ ಪೈಪೋಟಿಯ ಕ್ಷೇತ್ರಗಳಿವು!

Date:

ಬಿಹಾರದಲ್ಲಿ ನವೆಂಬರ್ 6ರಂದು ಮೊದಲ ಹಂತದ ಮತದಾನ ಮುಗಿದಿತ್ತು. 121 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ 65% ಐತಿಹಾಸಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಿತ್ತು. ಇದೀಗ, ಇಂದು (ನ.11) 2ಎರಡನೇ ಹಂತದ ಮತದಾನ ನಡೆಯುತ್ತಿದೆ. 122 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಇದೆ. ಜೊತೆಗೆ, ಘಟಾನುಘಟಿಗಳ ಭವಿಷ್ಯವನ್ನೂ ಇಂದು ಮತದಾರರು ನಿರ್ಧರಿಸಲಿದ್ದಾರೆ.

- Advertisement -

ಮಂಗಳವಾರ ಮತದಾನ ನಡೆಯುತ್ತಿರುವ 122 ಕ್ಷೇತ್ರಗಳಲ್ಲಿ 2020ರಲ್ಲಿ ಎನ್‌ಡಿಎ ಭಾಗವಾಗಿರುವ ಬಿಜೆಪಿ 42, ಜೆಡಿಯು 20 ಕ್ಷೇತ್ರಗಳನ್ನು ಗೆದ್ದದ್ದವು. ಮಹಾಘಟಬಂಧನ್‌ನ ಆರ್‌ಜೆಡಿ 33, ಕಾಂಗ್ರೆಸ್‌ 11 ಹಾಗೂ ಎಡಪಕ್ಷಗಳು 5 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿಯೂ ತೀವ್ರ ಸ್ಪರ್ಧೆಯಿದೆ. ಎರಡೂ ಮೈತ್ರಿಕೂಟಗಳು ತಮ್ಮ ಗೆಲುವಿನ ಸ್ಥಾನಗಳನ್ನು ವಿಸ್ತರಿಸಿಕೊಳ್ಳಲು ಎದುರು ನೋಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಇಂದು, ಪೂರ್ವ ಚಂಪಾರಣ್‌ನಲ್ಲಿ 11, ಮಧುಬನಿ ಮತ್ತು ಗಯಾದಲ್ಲಿ ತಲಾ 10, ಪಶ್ಚಿಮ ಚಂಪಾರಣ್‌ನಲ್ಲಿ 9, ಸೀತಾಮರ್ಹಿಯಲ್ಲಿ 8, ಭಾಗಲ್ಪುರ್, ರೋಹ್ತಾಸ್, ಪೂರ್ಣಿಯಾ ಹಾಗೂ ಕತಿಹಾರ್‌ನಲ್ಲಿ ತಲಾ 7, ಅರಾರಿಯಾ ಮತ್ತು ಔರಂಗಾಬಾದ್‌ನಲ್ಲಿ ತಲಾ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಈ ಪೈಕಿ, ನಿತೀಶ್‌ ಕುಮಾರ್ ಸರ್ಕಾರದ ಸಚಿವ ಸಂಪುಟದಲ್ಲಿರುವ 12 ಸಚಿವರ ಭವಿಷ್ಯವೂ ಇಂದು ನಿರ್ಧಾರವಾಗಲಿದೆ. ಈ 12 ಮಂದಿ ಪುನರಾಯ್ಕೆಗಾಗಿ ಹೆಣಗಾಡುತ್ತಿದ್ದಾರೆ.

2ನೇ ಹಂತದ ಮತದಾನದಲ್ಲಿ ಪ್ರಮುಖ ಕ್ಷೇತ್ರಗಳು

  1. ಮಧುಬನ್ (ಚಂಪಾರಣ್)

ಚಂಪಾರಣ್ ಜಿಲ್ಲೆಯ ಮಧುಬನ್ ವಿಧಾನಸಭಾ ಕ್ಷೇತ್ರವು ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಒಂದಾಗಲಿದೆ. ಬಿಜೆಪಿ ಹಾಲಿ ಶಾಸಕ ರಾಣಾ ರಣಧೀರ್ ಅವರು ಮರು ಆಯ್ಕೆಗಾಗಿ ಎದುರು ನೋಡುತ್ತಿದ್ದಾರೆ. ಅವರ ಪ್ರತಿಸ್ಪರ್ಧಿ ಆರ್‌ಜೆಡಿ ಪಕ್ಷದ ಸಂಧ್ಯಾ ರಾಣಿ ಗೆಲುವಿನ ಉತ್ಸಾಹ ತೋರುತ್ತಿದ್ದಾರೆ. ಇವರಿಬ್ಬರಿಗೂ, ಜೆಎಸ್‌ಪಿಯ ವಿಜಯ್ ಕುಮಾರ್ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರವು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ವೈಶ್ಯ (ವ್ಯಾಪಾರಿ) ಸಮುದಾಯವು ಪ್ರಾಬಲ್ಯ ಹೊಂದಿರುವ ಮಧುಬನ್ ಕ್ಷೇತ್ರವು ರಾಣಾ ರಣಧೀರ್ ಕುಟುಂಬದ ಭದ್ರಕೋಟೆಯಾಗಿತ್ತು. ಅವರ ತಂದೆ ಸೀತಾರಾಮ್ ಸಿಂಗ್ 1985 ರಿಂದ 2005ರವರೆಗೆ ನಿರಂತರವಾಗಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ, ಈಗ ಕ್ಷೇತ್ರದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಕಂಡುಬಂದಿದೆ. ಪರಿಣಾಮ, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದೆ.

  1. ಕಹಲ್ಗಾಂವ್ (ಭಾಗಲ್ಪುರ್)

ರಾಜ್ಯದ ಚಿತ್ತ ಸೆಳೆದಿರುವ ಕ್ಷೇತ್ರಗಳಲ್ಲಿ ಭಾಗಲ್ಪುರ್ ಜಿಲ್ಲೆಯ ಕಹಲ್ಗಾಂವ್ ವಿಧಾನಸಭಾ ಸ್ಥಾನವೂ ಒಂದು. ಕ್ಷೇತ್ರದಲ್ಲಿ ಚತುಷ್ಕೋನ ಹೋರಾಟ ನಡೆಯುತ್ತಿದೆ.

ಮಹಾಘಟಬಂಧನ್ ಮಿತ್ರಪಕ್ಷಗಳಾದ RJD ಮತ್ತು ಕಾಂಗ್ರೆಸ್ ಇಲ್ಲಿ ಸ್ನೇಹಪರ ಸ್ಪರ್ಧೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿವೆ. ಆಡಳಿತಾರೂಢ ಎನ್‌ಡಿಎಯಿಂದ ಜೆಡಿಯು ಅಭ್ಯರ್ಥಿ ಕಣದಲ್ಲಿದ್ದಾರೆ. ಆದರೆ, ಬಿಜೆಪಿ ಹಾಲಿ ಶಾಸಕ ಪವನ್ ಕುಮಾರ್ ಯಾದವ್ ಬಂಡಾಯವೆದ್ದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆರ್‌ಜೆಡಿ-ಕಾಂಗ್ರೆಸ್‌ ಸ್ನೇಹಪರ ಸ್ಪರ್ಧೆ ಮತ್ತು ಪವನ್ ಕುಮಾರ್ ಬಂಡಾಯವು ಎನ್‌ಡಿಎಗೆ ಮುಳವಾಗಬಹುದು ಎಂಬ ಅಭಿಪ್ರಾಯಗಳಿವೆ.

  1. ಬೆಟ್ಟಿಯಾ (ಪಶ್ಚಿಮ ಚಂಪಾರಣ್)

ಬೆಟ್ಟಿಯಾ ಕ್ಷೇತ್ರವು ಬಿಜೆಪಿಯ ಭದ್ರಕೋಟಿಯಾಗಿದೆ. ಈ ಕ್ಷೇತ್ರವನ್ನು ಬಿಜೆಪಿ ನಿರಂತರವಾಗಿ ಗೆದ್ದಿದೆ. ಬಿಜೆಪಿಯಿಂದ ಸ್ಪರ್ಧಿಸಿ 5 ಬಾರಿ ಗೆದ್ದಿರುವ ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಅವರು ಮತ್ತೊಮ್ಮೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಅವರ ಎದುರಾಳಿಯಾಗಿ ಕಾಂಗ್ರೆಸ್‌ನ ವಾಸಿ ಅಹ್ಮದ್ ಮತ್ತು ಸ್ವತಂತ್ರ ಅಭ್ಯರ್ಥಿ ರೋಹಿತ್ ಸಿಕರಿಯಾ ಕಣದಲ್ಲಿದ್ದಾರೆ. ರೋಹಿತ್ ಅವರು ಸ್ಥಳೀಯ OBC ನಾಯಕನಾಗಿದ್ದು, ವಿರೋಧ ಪಕ್ಷದ (ಕಾಂಗ್ರೆಸ್‌) ಮತಗಳನ್ನು ವಿಭಜಿಸುವ ಸಾಧ್ಯತೆಗಳಿವೆ.

  1. ಕತಿಹಾರ್ (ಕತಿಹಾರ್ ಜಿಲ್ಲೆ)

ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ತರ್ಕಿಶೋರ್ ಪ್ರಸಾದ್ ಅವರು ಕಣದಲ್ಲಿದ್ದಾರೆ. ಅವರಿಗೆ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ. 2005ರಿಂದ ಈವರೆಗೆ ನಿರಂತರವಾಗಿ ಕ್ಷೇತ್ರದಲ್ಲಿ ಪ್ರಸಾದ್ ಗೆದ್ದಿದ್ದಾರೆ. ಈ ಬಾರಿ, ಅವರಿಗೆ ಪ್ರಸಾದ್‌ ಅವರ ನಿಕಟವರ್ತಿಯೇ ಆಗಿದ್ದ ಅಶೋಕ್ ಅಗರ್ವಾಲ್ ಅವರ ಮಗ ಸೌರಭ್ ಅಗರ್ವಾಲ್ ಪೈಪೋಟಿ ನೀಡುತ್ತಿದ್ದಾರೆ. ಮಹಾಘಟಬಂಧನ್‌ ಭಾಗವಾಗಿರುವ ವಿಕಾಸಶೀಲ್ ಇನ್ಸಾನ್ ಪಕ್ಷದಿಂದ ಸೌರಭ್‌ ಸ್ಪರ್ಧಿಸಿದ್ದಾರೆ.

ಜೊತೆಗೆ, ಜೆಎಸ್‌ಪಿಯಿಂದ ಘಾಜಿ ಶಾರಿಕ್ ಕೂಡ ಕಣದಲ್ಲಿದ್ದು, ಅವರು ಮುಸ್ಲಿಂ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ. ಪರಿಣಾಮ, ಎನ್‌ಡಿಎಗೆ ನೆರವಾಗಲಿದೆ ಎಂದು ಹೇಳಲಾಗಿದೆ.

  1. ಕಾರ್ಗಹರ್ (ರೋಹ್ತಾಸ್)

ಜೆಎಸ್‌ಪಿ ನಾಯಕ ಪ್ರಶಾಂತ್ ಕಿಶೋರ್ ಅವರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರೀಕ್ಷೆಯಿತ್ತು. ಆದರೆ, ಅವರು ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವುದಾಗಿ ಘೋಷಿಸಿದರು. ಕ್ಷೇತ್ರದಲ್ಲಿ ಭೋಜ್‌ಪುರಿ ಗಾಯಕ, ನಟ ರಿತೇಶ್ ಪಾಂಡೆ ಅವರನ್ನು ಜೆಎಸ್‌ಪಿ ಕಣಕ್ಕಿಳಿಸಿದೆ.

ತಮ್ಮ ಗಾಯನದ ಮೂಲಕ ಮನೆಮಾತಾಗಿರುವ ಪಾಂಡೆ ಅವರು ಹಾಲಿ ಕಾಂಗ್ರೆಸ್‌ ಶಾಸಕ ಸಂತೋಷ್ ಕುಮಾರ್ ಮಿಶ್ರಾ ವಿರುದ್ಧ ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಮತ್ತು ಜೆಡಿಯು ನಡುವಿನ ಪೈಪೋಟಿಯ ಕಣವಾಗಿದೆ. ಜೆಡಿಯುನಿಂದ ಬಶಿಷ್ಠ ಸಿಂಗ್ ಅಖಾಡದಲ್ಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...