ದಾವಣಗೆರೆ ಬಂಡಾಯ ಶಮನಕ್ಕೆ ಬಿಎಸ್‌ವೈ ಎಂಟ್ರಿ

Date:

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಭಿನ್ನಮತೀಯರ ಜತೆಗೆ ಮಾತುಕತೆ ನಡೆಸುತ್ತಿದ್ದು, ಭಿನ್ನಮತ ಸರಿಪಡಿಸಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನಾನೇ ದಾವಣಗೆರೆಗೆ ಹೋಗುತ್ತಿದ್ದೇನೆ. ಎಲ್ಲವೂ ಸರಿಯಾಗಲಿದೆ ಎಂದು ಹೇಳಿದ್ದರು.

ದಾವಣಗೆರೆಯ ಬಿಜೆಪಿಯಲ್ಲಿ ಭಿನ್ನಮತ ಬಿಕ್ಕಟ್ಟು ಜೋರಾಗಿದ್ದು, ಭಿನ್ನ ಸ್ವರ ಎತ್ತಿರುವವರ ಶಮನಕ್ಕೆ ಖುದ್ದು ಯಡಿಯೂರಪ್ಪನವರೇ ಎಂಟ್ರಿ ಆಗುತ್ತಿದ್ದು, ಸಂಧಾನ ಯಶಸ್ವಿಯಾಗುವುದೋ ಎಂಬ ಕುತೂಹಲ ಕೆರಳಿಸಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಎಸ್ ಎಂ ರವೀಂದ್ರನಾಥ್, ರೇಣುಕಾಚಾರ್ಯ ಬಣದವರು ಪಟ್ಟು ಹಿಡಿದಿದ್ದು, ಜಿ ಎಂ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಕೊಡಬಾರದೆಂದು ಬಂಡಾಯವೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ ಎಸ್ ವೈ ಆಗಮನ ಮಹತ್ವ ಪಡೆದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂದು ಮಧ್ಯಾಹ್ನ ಯಡಿಯೂರಪ್ಪ ಅವರು ದಾವಣಗೆರೆಗೆ ಬರಲಿದ್ದು, ಹಿರಿಯರು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದರೆ, ಎಸ್‌ಎಆರ್ ಅವರ ನಿವಾಸಕ್ಕೆ ಯಡಿಯೂರಪ್ಪ ಅವರು ಆಗಮಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ ರೆಬೆಲ್ ತಂಡದ ಸದಸ್ಯರೊಬ್ಬರ ಮನೆಯಲ್ಲಿ ಸಭೆ ನಡೆಸಲು ಮುಂದಾಗಲಿದ್ದಾರೆ. ಯಡಿಯೂರಪ್ಪರ ಸಂಧಾನದ ಮಾತುಕತೆ ಮಹತ್ವದ್ದಾಗಿದ್ದು , ಬಿಜೆಪಿ ಕಚೇರಿಗೆ ಆಗಮಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಧಾರವಾಡ ಲೋಕಸಭಾ ಕ್ಷೇತ್ರ | ವಿನೋದ್ ಅಸೂಟಿ ಕೈ ಹಿಡಿಯುವರೆ ಮತದಾರರು?

ಸಂಧಾನದ ಮಾತುಕತೆ ಯಶಸ್ವಿಯಾದರೆ, ಜಿಎಂಐಟಿಯಲ್ಲಿ ಎಲ್ಲರೂ ಬರಲಿದ್ದಾರೆ, ಇಲ್ಲದಿದ್ದರೆ ಬಿಜೆಪಿ ಕಚೇರಿಯಲ್ಲಿಯೇ ಒಗ್ಗಟ್ಟು ಪ್ರದರ್ಶನ ಮಾಡಲಾಗುತ್ತದೆಂದು ಹೇಳಲಾಗಿದ್ದರೂ ಕೂಡಾ ಮಾತುಕತೆಯ ಫಲಿತಾಂಶದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಟ್ ಕಾಯಿನ್ ಹಗರಣ​ | ಸೈಬರ್ ಕ್ರೈಂ ಠಾಣೆ ಇನ್ಸ್​ಪೆಕ್ಟರ್ ಚಂದ್ರಾಧರ್​ ಬಂಧನ

ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್‌ಪೆಕ್ಟರ್ ಚಂದ್ರಾಧರ್ ಎಂಬುವವರನ್ನು ಸಿಐಡಿ ಪೊಲೀಸರು...

ಹಿಂದುತ್ವ | ಭಾರತೀಯ ಸಮಾಜವನ್ನು ಒಳಗಿನಿಂದಲೇ ವಂಚಿಸುವ ‘ಗೋಮುಖ ವ್ಯಾಘ್ರ’

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಭಾರತದ ಅತಿದೊಡ್ಡ ರಾಜಕೀಯ ಶಕ್ತಿಯಾಗಿದೆ. ಆದರೆ,...

ಸಂತ್ರಸ್ತೆ ಅಪಹರಣ ಪ್ರಕರಣ | ಮೇ 31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪು

ಕೆ ಆರ್‌ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ...