ಚಿಕ್ಕಮಗಳೂರು | ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ; ಜೆ.ಪಿ ಹೆಗ್ಡೆಗೆ ಜನ ಬೆಂಬಲ

Date:

ಚಿಕ್ಕಮಗಳೂರು ಹಾಗೂ ಉಡುಪಿ ಲೋಕಾಸಭಾ ಕ್ಷೇತ್ರವಾಗಿದೆ. ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡ ಲೋಕಸಭಾ ಕ್ಷೇತ್ರವಾಗಿದೆ. ಅದರಲ್ಲಿ ಅರ್ಧ ಭಾಗ ಮಲೆನಾಡು ಪ್ರದೇಶವಾಗಿದೆ.ಮಲೆನಾಡಿನಲ್ಲಿಅನೇಕ ಗಂಭೀರ ಸಮಸ್ಯೆಗಳಿರುತ್ತವೆ ಆ ಎಲ್ಲಾ ಸಮಸ್ಯೆಗಳು ಚುನಾವಣೆಯ ಪ್ರಮುಖ ವಿಷಯ ಆಗಬೇಕಿತ್ತು ಇಲ್ಲಿ ಪ್ರಸ್ತಾಪಿಸಿದ ಕೆಲವು 8 ಸಮಸ್ಯೆಗಳನ್ನು ಜೈಪ್ರಕಾಶ್ ಹೆಗ್ಡೆ ಇವರನ್ನು ಬಿಟ್ಟು ಉಳಿದ ಯಾವುದೇ ಅಭ್ಯರ್ಥಿಗಳು ಮಲೆನಾಡಿನ ಸಮಸ್ಯೆಗಳ ಬಗ್ಗೆ ಮತಾನಾಡಲ್ಲಿ ಅಂದಿನ ಚುನಾವಣೆಯಲ್ಲಿ ನಾವು ಚಿಕ್ಕಮಗಳೂರು ಉಡುಪಿ ಜಿಲ್ಲೆಗಳಲ್ಲಿ ಮಲೆನಾಡು ಸಂರಕ್ಷಣಾ ವೇದಿಕೆಯಿಂದ ಸಾರ್ವಜನಿಕರು ಮತ್ತು ಅಭ್ಯರ್ಥಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದೆವು.ಎರಡು ಬಾರಿ ಸಂಸದರಾಗಿ ಗೆದ್ದ ಶೋಭ ಕರಂದ್ಲಾಜೆಯವರ ಗಮನಕ್ಕೆ ಮೇಲಿಂದ ಮೇಲೆ ಮನವಿ ಮಾಡಿದ್ದರೂ, ಈ ಬಗ್ಗೆ ಲೋಕಸಭೆಯಲ್ಲಾಗಲಿ ಬೇರೆ ಬೇಡಿಕೆಗಳಲ್ಲಾಗಲಿ ಪ್ರಸ್ತಾಪ ಮಾಡಿಲ್ಲ.

ಮಲೆನಾಡಿನ ಅಭಿವೃದ್ಧಿ ಹಾಗೂ ಭವಿಷ್ಯಕ್ಕೆ ಮಾರಕವಾದ 202495/96 ಗೋಧವರ್ಮನ್ ತಿರುಮಲಪಾಡ್ V/S ಕೇಂದ್ರ ಸರ್ಕಾರ ಸೌರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಲ್ಲಿ ಅರಣ್ಯ ಎಂಬುದಕ್ಕೆ ಹೊಸ ವ್ಯಖ್ಯಾನ ಬರೆದು ಅರಣ್ಯದಲ್ಲಿ ಅರಣೇತರ ಚಟುವಟಿಕೆ ನಿಷೇದಿಸಲಾಗಿದೆ. ಇದರಿಂದ ಬಗರ್ ಹುಕುಂ ಸಾಗುವಳಿಯೆಲ್ಲವು ಒತ್ತುವರಿ ಎಂದು ಪರಿಗಣಿಸಲಾಗಿದೆ ಒಂದು ಸಾರಿ ಸರ್ಕಾರಿ ದಾಖಲೆಯಲ್ಲಿ ಅರಣ್ಯ ನಮೂದಿಸಿದ ಯಾವುದೇ ಪ್ರದೇಶವನ್ನು ಡಿ ನೋಟಿಫೈ ಮಾಡುವ ಅಥವಾ ಮಂಜೂರು ಮಾಡುವ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳಿಗಿಂತಲೂ ಆರಣ್ಯಧಿಕಾರಿಗಳ ಕಿರುಕುಳ ಹೆಚ್ಚಾಗಿದೆ ಕೇಳಿದರೆ ಸುಪ್ರಿಂ ಕೋರ್ಟ್ ತೀರ್ಪನ್ನು ಮುಂದಿಟ್ಟು ಬದುಕನ್ನು ಕಸಿಯುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕ ಉದ್ದೇಶವಾದ ಶಾಲೆ, ಆಸ್ಪತ್ರೆ, ವಿದ್ಯತ್ ಶಾಖೆ ಕೊನೆಗೆ ಸ್ಮಶಾನಕ್ಕೂ ಕೂಡ ಜಾಗ ಮಂಜೂರು ಮಾಡಲು ಕಂದಾಯ ಭೂಮಿ ಇಲ್ಲ. ಬಗರಹುಕುಂ ಸಾಗುವಳಿ ಮಾಡಿದವರಿಗೆ ಹಕ್ಕು ಪತ್ರವಿಲ್ಲ ಒಂದು ಅಂದಾಜಿನ ಪ್ರಕಾರ ಈ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸ್ವಂತ ಮನೆಯಿಲ್ಲದವರ ಅರ್ಜಿ ಬಾಕಿಯಿದೆ ಜಿಲ್ಲೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಇದ್ದ ಕಂದಾಯ ಭೂಮಿಯಲ್ಲಿ 3,30.186.93 ಹೆಕ್ಟರ್ ಡಿಮ್ಸ್ ಅರಣ್ಯವೆಂದು ಪುನರ್ ರಚಿತ ಸಮಿತಿ ಶಿಫಾರಸ್ಸು ಮಾಡಿದೆ ಆದರೆ ಅರಣ್ಯ ಇಲಾಖೆ ಪಟ್ಟಿ ಮಾಡಿದ 9,94,881.11 ಹೆಕ್ಟರ್ ಪ್ರಸ್ತಾವನೆ ಹಸಿರು ಪೀಠದಲ್ಲಿ ಬಾಕಿಯಿದೆ ಸುಪ್ರಿಂ ಕೋರ್ಟ್ ತೀರ್ಪನ್ನು ( ಗೋಧವರ್ಮನ್ ಕೇಸ್) ದುರುಪಯ ಪಡಿಸಿಕೊಂಡ ಜಿಲ್ಲಾಧಿಕಾರಿಯಾಗಿ ಗೋಪಾಲಕೃಷ್ಣ ಗೌಡ ಮಲೆನಾಡಿನ ಕಂದಾಯ ಭೂಮಿಯನ್ನು ಹೆಕ್ಟ್ ರ್‌ಗೆ ಗಿಡ ಮರ ಇರುವುದೆಲ್ಲವೂ ದಟ್ಟ ಅರಣ್ಯವೆಂದು ಘೋಷಿಸಿ ಮಲೆನಾಡಿನ ಜನರಿಗೆ ಕೊಡಲಿ ಪೆಟ್ಟು ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅರಣ್ಯ ಮಿಸಲು ಎಂದು ಘೋಷಿಸಿದ 1,38,000 ಎಕರೆ ವಾಪಸ್ಸು ಪಡೆಯಲು ಈ ವರೆಗೂ ಸಾಧ್ಯವಾಗಿಲ್ಲ ಆದರೆ ಅದೇ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡವರಿಗೆ ಫಾರಂ ನಂ 50/53 ರಲ್ಲಿ ಹಕ್ಕು ಪತ್ರ ನೀಡಲಾಗದೆ- ಇದು ಎಂದಾದರು ಒಂದು ದಿನ ಸರ್ವೋಚ್ಚ ನ್ಯಾಯಾಲಯ ಕಠಿಣ ನಿರ್ಧಾರ ತೆಗೆದುಕೊಂಡರೆ ಹಳ್ಳಿ ಚಿತ್ರವನ್ನು ರದ್ದು ಪಡಿಸಬಹುದಾದ ಸಾಧ್ಯತೆ ಜಾಗಗಳನ್ನು 4/1 ನೋಟಿಫಿಕೇಷನ್ ಮಾಡಲಾಗುತ್ತಿದೆ ಈ ತೀರ್ಪನಿಂದಾಗಿ ಸಾವಿರಾರು ಕುಟುಂಬಗಳ ಭವಿಷ್ಯ ಸುಪ್ರಿಂ ಕೋರ್ಟ್ ಅಂಗಳದಲ್ಲಿದೆ ( ಶಾರವತಿ ವಿದ್ಯತ್ ಯೋಜನೆಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ 303 ಕುಟುಂಬಗಳ ಹಕ್ಕು ಪತ್ರಗಳನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿದ್ದು ಇದೇ ಕಾರಣಕ್ಕೆ) ಶೃಂಗೇರಿಯ 100, ಬೆಡ್ಡಿನ ಆಸ್ಪತ್ರೆಗೆ 5 ಎಕ್ಕರೆ ಮತ್ತು ವಿದ್ಯತ್ ಶಾಖೆಗೆ 2.5 ಎಕರೆ ಜಾಗ ಮಂಜೂರು ಮಾಡಲಾಗದೆ. ಶೃಂಗೇರಿಯ ಎರಡು ಸಮಸ್ಯೆಗಳು ಸಮಸ್ಯೆಯಾಗೆ ಉಳಿದಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ಮಲೆನಾಡು ಹಾಗೂ ಕರಾವಳಿಯ,ಎಕೈಕ ರಸ್ತೆಯಾದ ಮಂಗಳೂರು ಸೂರತ್ NH 69 ರಸ್ತೆಗೆ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಹಾಕಿ ಬಿಡದೆ ಪ್ರತಿ ದಿನ ಅಪಘಾತವಾಗಿ ವರ್ಷದಲ್ಲಿ 10-20 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ರಸ್ತೆ, ಮೋರಿ, ಸೇತುವೆ, ವಿದ್ಯುತ್ ಯೋಜನೆಗಳನ್ನು ಮಾಡಲು ಬಿಡುತ್ತಿಲ್ಲ.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬಫರ್ ಎರಿಯಾದ ಅಭಿವೃದ್ಧಿಯನ್ನು ಪೂರ್ತಿಯಾಗಿ ತಡೆಹಿಡಿಯಲಾಗುತ್ತಿದೆ. ಮನೆನಾಡಿನ ಕೃಷಿ ಮತ್ತು ಅಭಿವೃದ್ಧಿ ಯೋಜನೆಗೆ ಮಾರಕವಾದ ಕಸ್ತೂರಿರಂಗನ್ ವರದಿಯನ್ನು ಕೇಂದ್ರದ ಮೋದಿ ಸರ್ಕಾರ ಜಾರಿ ಮಾಡುವ ಹೊಸ್ತಿಲಲ್ಲಿದೆ ಕೊಡಲೇ ಅದನ್ನು ತಡೆದು ಮಲೆನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು.

ರಾಷ್ಟ್ರೀಯ ಹೆದ್ದಾರಿ 69 ಕಾರ್ಕಳ ಶೃಂಗೇರಿ ನಡುವಿನ ರಸ್ತೆಯಲ್ಲಿ 1955ರ ಇಸವಿಯಲ್ಲಿ ಕಡಿದಾಳು ಮಂಜಪ್ಪನವರು ಮಾಡಿಸಿದ 2 ಸೇತುವೆಗಳು ಶಿತಿಲ ವ್ಯವಸ್ಥೆಯಲ್ಲಿದ್ದು ಸಧ್ಯದಲ್ಲೇ ಮುರಿದು ಹೋಗುತ್ತವೆ ಇದರಿಂದ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಶಾಶ್ವತವಾಗಿ ನಿಂತು ಹೋಗುತ್ತದೆ ಈ ಬಗ್ಗೆ ದೇಶದ ಅತ್ಯಂತ ಉದ್ಧದ ರಾಷ್ಟ್ರೀಯ ಹೆದ್ದಾರಿ 44 ಇದ್ದು ಮಧ್ಯಪರಿಸದ ಕಾನಾ ರಾಷ್ಟ್ರೀಯ ಉದ್ಯಾನದ ನಡುವೆ ಹಾದು ಹೋಗುತ್ತದೆ ಶ್ರೀ ರಾಷ್ಟ್ರೀಯ ಉದ್ಯಾನದ ಚಂಚು ಟೈಗರ್ ರೀಜರ್ ಆ ಕಾರಣಕ್ಕೆ ಪೆಂಚು ನದಿಯ ಸೇತುವೆಯನ್ನು ತಡೆಹಿಡಿಯಲಾಗಿತ್ತು ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಾಣಿಗಳು ಎಷ್ಟು ಮುಖ್ಯವೂ ಮನಷ್ಯರ ಬದುಕು ಅಷ್ಟೇ ಮುಖ್ಯ ಎಂದು ಹೇಳಿ ವಿಷೇಶ ತಂತ್ರಜ್ಞಾನದಲ್ಲಿ ರಸ್ತೆ ಆಳವಡಿಸಲು ಅನುಮತಿ ನೀಡಿದೆ ಈ ಎಲ್ಲಾ ಮಾಹಿತಿಯನ್ನ ಹಿಂದಿನ ಬಿಜೆಪಿ ಪಕ್ಷದಿಂದ ಆಯ್ಕೆ ಆಗಿ 10 ವರ್ಷ ಆಡಳಿತ ಮಾಡಿರುವ ಶೋಭಾ ಕರಂದ್ಲಾಜೆ ಅವರು ಸರ್ಕಾರಕ್ಕೆ ಇಲ್ಲಿಯವರೆಗೂ ಗಮನಕ್ಕೆ ತಂದಿಲ್ಲ ಮಳೆನಾಡಿನ ಸಮಸ್ಯೆಗಳನ್ನು ನಿರ್ಲಕ್ಷ ವಹಿಸಿದ್ದಾರೆ.

ಈ ಕಾರಣದಿಂದ ಲೋಕಸಭಾ ಕ್ಷೇತ್ರದ 2024ರ ಚುಣಾವಣೆ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹೆಗ್ಡೆ ಅವರು ಮಲೆನಾಡಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆಂದು ನಮ್ಮ ಬೆಂಬಲ ನೀಡುತ್ತಿದ್ದೇವೆ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭ: ಸಚಿವ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು...

ಮರೆಯಬಾರದ ಚೇತನ | ನಂಬಿದ ಆದರ್ಶದಂತೆ ಬದುಕಿದ ಚಂದ್ರಶೇಖರ ಹೊಸಮನಿ

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ವಿಮೋಚನಾ ಚಳವಳಿಯಿಂದ ಪ್ರಭಾವಿತರಾದ ಮುಂಬೈ...

ಯತೀಂದ್ರ ಅವರನ್ನು ಎಂಎಲ್​ಸಿ ಮಾಡುವುದಾಗಿ ಹೈಕಮಾಂಡ್​ ಹೇಳಿದೆ: ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್​​ನವರು ಎಂಎಲ್​ಸಿ ಮಾಡುವುದಾಗಿ ಹೇಳಿದ್ದರು. ಕಾದು ನೋಡಬೇಕು....