ಈದಿನ ವಿಶೇಷ | ಮೈಸೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜೆಡಿಎಸ್ ರಾಜ್ಯಾಧ್ಯಕ್ಷ; ಇದೇ ಕ್ಷೇತ್ರದಿಂದ ಸಿ ಎಂ ಇಬ್ರಾಹಿಂ ಸ್ಪರ್ಧೆ

Date:

  • ಮುಸಲ್ಮಾನ ಪ್ರಾಬಲ್ಯದ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಹೊರಟ ಜೆಡಿಎಸ್ ರಾಜ್ಯಾಧ್ಯಕ್ಷ
  • ಸಿ ಎಂ ಇಬ್ರಾಹಿಂ ಕೈ ಹಿಡಿಯಲಿದೆಯೇ ಕುಟುಂಬ ರಾಜಕಾರಣಕ್ಕೆ ಒತ್ತುಕೊಟ್ಟ ಕ್ಷೇತ್ರ

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಮೈಸೂರು ಹೃದಯ ಭಾಗದಿಂದಲೇ ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ದಳಪತಿಗಳು ರೂಪಿಸಿದ್ದ ಯೋಜನೆ ಈಗ ಫಲಪ್ರದವಾಗಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಇಲ್ಲಿನ ನರಸಿಂಹರಾಜ ಕ್ಷೇತ್ರದ ಉಮೇದುವಾರರಾಗಲಿದ್ದಾರೆ. ಜೆಡಿಎಸ್‌ನ ಉನ್ನತ ಮೂಲಗಳು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಪಕ್ಷ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಪಕ್ಷದ ಮೂಲಗಳು ‘ಈದಿನ’ಕ್ಕೆ ತಿಳಿಸಿವೆ.

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ನರಸಿಂಹರಾಜ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್. ಕಳೆದ ಹನ್ನೊಂದು ಚುನಾವಣೆಗಳಲ್ಲೂ ಸೇಠ್ ಮನೆತನ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿಕೊಂಡೇ ಬಂದಿದೆ. ಹಿಂದೆ ಎನ್ಆರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ತನ್ವೀರ್ ಸೇಠ್ ತಂದೆ ಅಜೀಜ್ ಸೇಠ್ ಇಲ್ಲಿ ಪಾರಮ್ಯ ಮೆರೆದರೆ, ಅವರ ಬಳಿಕ ಮಗ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಾಕಣದಿಂದ ಹಿಂದೆ ಸರಿಯುವುದಾಗಿ ತನ್ವೀರ್ ಸೇಠ್ ಹೇಳಿದ್ದರೂ, ಪಕ್ಷ ಅವರನ್ನೇ ಇಲ್ಲಿ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಇಲ್ಲಿನ ಚುನಾವಣೆಯಲ್ಲಿ ಜೆಡಿಎಸ್ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲೇ ತನ್ನ ಹೋರಾಟ ಕೊನೆಗೊಳಿಸಿಕೊಂಡರೂ, ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ಮುಸಲ್ಮಾನ ಮತದಾರರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಉತ್ತಮ ಸಾಧನೆಯನ್ನು ಎಸ್ಡಿಪಿಐ, ಪಿಎಫ್ಐ, ಹಾಗೂ ಎಂಇಪಿ ಪಾರ್ಟಿಗಳು ಮಾಡಿವೆ. ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಸೋಲಿನೆಡೆಗೆ ಮುಖಮಾಡಿದ ಜೆಡಿಎಸ್‌ಗೆ ಈ ಬಾರಿ ಬಲ ತುಂಬಲು ಖುದ್ದು ರಾಜ್ಯಾಧ್ಯಕ್ಷರೇ ಕಣಕ್ಕಿಳಿಯಲಿದ್ದಾರೆ.

ಸಮುದಾಯದ ವೋಟಿನ ಲಾಭ ಹಾಗೂ ಇಬ್ರಾಹಿಂ ಅವರಿಗೆ ಮೈಸೂರು ಮತ್ತು ಸ್ಥಳೀಯ ರಾಜಕಾರಣದ ಮೇಲಿರುವ ಹಿಡಿತ ಅವರನ್ನು ಇಲ್ಲಿಗೆ ಬರುವಂತೆ ಮಾಡಿದೆ. ಹೀಗಾಗಿದ್ದೇ ಆದಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಭರ್ಜರಿ ಸ್ಪರ್ಧೆ ಎದುರಾಗಲಿದೆ. ಇಬ್ರಾಹಿಂ ಸ್ಪರ್ಧೆಗಾಗಿ ಈ ಹಿಂದೆ ಇಲ್ಲಿಂದ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ, ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದು,ಸ್ವಂತ ಹಿತಕ್ಕಿಂತ– ಪಕ್ಷದ ಗೆಲುವು ಮುಖ್ಯ ಎಂದು ಹೇಳಿ ರಾಜಕೀಯ ಜಿದ್ದಾಜಿದ್ದಿನ ಕಣದೊಳಗೆ ಪಕ್ಷ ನಿಷ್ಠೆ ಮೆರೆದಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಗ್ರೀನ್ ಫೀಲ್ಡ್...

ಸರ್ಕಾರದ ಉಚಿತ ಕೊಡುಗೆಗಳು ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚಿಸುತ್ತವೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಇನ್ಫೋಸಿಸ್‌ ಸ್ಥಾಪಕಾಧ್ಯಕ್ಷ ನಾರಾಯಣ ಮೂರ್ತಿ...

ಅನ್ ಬಾಕ್ಸಿಂಗ್ ಬಿಎಲ್‌ಆರ್‌ ಹಬ್ಬಕ್ಕೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್’ ವತಿಯಿಂದ ಡಿಸೆಂಬರ್‌ 1ರಿಂದ...

ಅರ್ಹ ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ: ಸಿದ್ದರಾಮಯ್ಯ ಘೋಷಣೆ

ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ: ಸಿಎಂ ಮೊದಲನೇ ಕಂತಿನಲ್ಲಿ...