ಲೋಕಸಭೆ ಚುನಾವಣೆ | ಆದಿವಾಸಿ ಸಮಾಜಕ್ಕಾಗಿ ಕಾಂಗ್ರೆಸ್‌ನ ಆರು ಸಂಕಲ್ಪ

Date:

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಇದಗೀ, ಆದಿವಾಸಿ ಸಮುದಾಯಕ್ಕಾಗಿ ಕಾಂಗ್ರೆಸ್‌ನ ಆರು ಸಂಕಲ್ಪಗಳನ್ನು ಘೋಷಣೆ ಮಾಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ (ಎಕ್ಸ್) ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಆದಿವಾಸಿ ಸಹೋದರ ಸಹೋದರಿಯರೇ!, ಬುಡಕಟ್ಟು ಸಮಾಜದ ನೀರು, ಅರಣ್ಯ, ಭೂಮಿ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಆರು ನಿರ್ಣಯಗಳನ್ನು (ಸಂಕಲ್ಪ) ತೆಗೆದುಕೊಂಡಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...


ಆದಿವಾಸಿ ಸಮಾಜಕ್ಕೆ ಕಾಂಗ್ರೆಸ್‌ನ ಆರು ಸಂಕಲ್ಪಗಳು

1. ಉತ್ತಮ ಆಡಳಿತ: ಅರಣ್ಯ ಹಕ್ಕುಗಳ ಕಾಯ್ದೆ (ಎಫ್‌ಆರ್‌ಎ) ಅಡಿಯಲ್ಲಿ, ಎಲ್ಲಾ ಬಾಕಿ ಇರುವ ಕ್ಲೈಮ್‌ಗಳನ್ನು 1 ವರ್ಷದೊಳಗೆ ಇತ್ಯರ್ಥಗೊಳಿಸಲಾಗುವುದು. ಎಲ್ಲಾ ತಿರಸ್ಕೃತ ಕ್ಲೈಮ್‌ಗಳನ್ನು 6 ತಿಂಗಳೊಳಗೆ ಪರಿಶೀಲಿಸಲಾಗುತ್ತದೆ. ಅದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ರಾಷ್ಟ್ರೀಯ ಮಿಷನ್ ಅನ್ನು ಸ್ಥಾಪಿಸಲಾಗುತ್ತದೆ.

2. ಸುಧಾರಣೆಗಳು: ಅರಣ್ಯ ಸಂರಕ್ಷಣೆ ಮತ್ತು ಭೂಸ್ವಾಧೀನ ಕಾನೂನುಗಳಲ್ಲಿ ಮೋದಿ ಸರ್ಕಾರ ಮಾಡಿದ ಎಲ್ಲಾ ತಿದ್ದುಪಡಿಗಳನ್ನು ಕಾಂಗ್ರೆಸ್ ಹಿಂಪಡೆಯಲಿದೆ.

3. ಭದ್ರತೆ: ಆದಿವಾಸಿಗಳ ಪ್ರಾಬಲ್ಯವಿರುವ ದೇಶದ ಪ್ರತಿಯೊಂದು ಪ್ರದೇಶಕ್ಕೂ ‘ಪರಿಶಿಷ್ಟ ಪ್ರದೇಶ’ ಸ್ಥಾನಮಾನವನ್ನು ನೀಡಲಾಗುತ್ತದೆ.

4. ಸ್ವ-ಆಡಳಿತ: ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ‘ಗ್ರಾಮ ಸರ್ಕಾರ’ ಮತ್ತು ‘ಸ್ವಾಯತ್ತ ಜಿಲ್ಲಾ ಸರ್ಕಾರ’ ಸ್ಥಾಪಿಸಲು ಕಾಂಗ್ರೆಸ್ ಪ್ರತಿ ರಾಜ್ಯದಲ್ಲಿ ಪಿಇಎಸ್‌ಎ ಅಡಿಯಲ್ಲಿ ಕಾನೂನನ್ನು ಜಾರಿ ಮಾಡುತ್ತದೆ.

5. ಆತ್ಮಗೌರವ: ಎಂಎಸ್‌ಪಿಯನ್ನು ಖಾತರಿಪಡಿಸಲು ಸಣ್ಣ ಅರಣ್ಯ ಉತ್ಪನ್ನವನ್ನು (ಎಂಎಫ್‌ಪಿ) ಸಹ ಕಾನೂನಿನಲ್ಲಿ ಸೇರಿಸಲಾಗುತ್ತದೆ.

6. ಉಪ ಯೋಜನೆ: ಎಸ್‌ಸಿ-ಎಸ್‌ಟಿ ಉಪ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗುವುದು ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾಡಿದಂತೆ ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಬಜೆಟ್‌ನಲ್ಲಿ ಬಜೆಟ್‌ನಲ್ಲಿ ಪಾಲು ನೀಡಲು ಕಾನೂನು ರಕ್ಷಣೆ ನೀಡಲಾಗುತ್ತದೆ.

“ಆದಿವಾಸಿಗಳ ಪಾರಂಪರಿಕ ಹಕ್ಕುಗಳನ್ನು ಮತ್ತು ಅವರನ್ನು ರಕ್ಷಿಸದೆ ದೇಶದ ಅಭಿವೃದ್ಧಿಯನ್ನು ಕಲ್ಪಿಸಲು ಸಾಧ್ಯವಿಲ್ಲ. ಭಾರತ ಸರ್ಕಾರವು ಆದಿವಾಸಿಗಳ ಹಕ್ಕುಗಳು, ಭದ್ರತೆ ಮತ್ತು ಗೌರವದ ಭರವಸೆಯಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.

ಇನ್ನು ಉದ್ಯೋಗ ಸೃಷ್ಟಿ, ಅಪ್ರೆಂಟಿನ್‌ಶಿಪ್, ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಠಿಣ ಕ್ರಮ, ಕಾರ್ಮಿಕರಿಗೆ (ನಿರ್ದಿಷ್ಟ ಅವಧಿಗೆ ದುಡಿಯುವವರು) ಸ್ಟಾರ್ಟ್‌ಅಪ್ ಫಂಡ್‌ಗಳು ಮತ್ತು ಸಾಮಾಜಿಕ ಭದ್ರತೆ ನೀಡುವ ಐದು ಗ್ಯಾರಂಟಿಗಳನ್ನು ಈಗಾಗಲೇ ಕಾಂಗ್ರೆಸ್ ಘೋಷಿಸಿದ್ದು, ಈಗ ಬುಡಕಟ್ಟು ಸಮಾಜಕ್ಕೆ ಆರು ಸಂಕಲ್ಪಗಳನ್ನು ಘೋಷಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಉಪಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ಟಿವಿಕೆ, ಬಂಗಾಳದಲ್ಲಿ ಬಿಜೆಪಿಗೆ ಜಯ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು...

ಪ್ರತಿಭಟನೆ ಹಿನ್ನೆಲೆ ಮೆಟ್ರೋ ಬಂದ್; ‘ನೊಣ ಕೊಲ್ಲೋಕೆ ಸುತ್ತಿಗೆ ಬೇಡ’ – ಮಾರ್ಮಿಕವಾಗಿ ನುಡಿದ ಸುಪ್ರೀಂ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ತಡೆಯಲು...