ಆಧಾರ್‌ – ಪ್ಯಾನ್ ಜೋಡಣೆಗೆ ದುಬಾರಿ ಶುಲ್ಕ; ನಿರ್ಮಲಾ ಸೀತಾರಾಮನ್ ಸಮರ್ಥನೆ

Date:

  • ದಂಡ ಕಟ್ಟಿ ಆಧಾರ್ – ಪ್ಯಾನ್‌ ಜೋಡಣೆ ಮಾಡಿ
  • ಕಾಂಗ್ರೆಸ್ ಭರವಸೆಗಳ ವಿರುದ್ಧ ಸೀತಾರಾಮನ್ ಕಿಡಿ

ಆಧಾರ್‌ – ಪ್ಯಾನ್‌ ಕಾರ್ಡ್‌ ಜೋಡಣೆಗೆ ವಿಧಿಸಲಾಗಿರುವ ದುಬಾರಿ ಶುಲ್ಕವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಅವರು ‘ಆಧಾರ್ ಪ್ಯಾನ್‌ ಜೋಡಣೆಯ ಗಡುವು ಮುಗಿದಿರುವುದಕ್ಕೆ ಶುಲ್ಕ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ಆಧಾರ್‌ – ಪ್ಯಾನ್‌ ಜೋಡಣೆಗೆ ಸುಮಾರು ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಬೇಕು ಎನ್ನುವ ನಿಯಮ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ಯಾವುದೇ ಅಳುಕಿಲ್ಲದೆ ನಿರ್ಮಲಾ ಸೀತಾರಾಮನ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಪರ್ತಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಆಧಾರ್‌-ಪ್ಯಾನ್‌ ಜೋಡಣೆಗೆ ಮೊದಲೇ ಸಮಯ ಕೊಡಲಾಗಿತ್ತು. ಅವಕಾಶ ಇದ್ದಾಗ ಆಧಾರ್ – ಪ್ಯಾನ್ ಲಿಂಕ್ ಮಾಡಬೇಕಿತ್ತು. ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ” ಎಂದು ತಮ್ಮ ಹಳೆಯ ಗತ್ತಿನಲ್ಲಿಯೇ ಉತ್ತರಿಸಿದ್ದಾರೆ.

“ಸಾಮಾನ್ಯವಾಗಿ ಗಡುವು ಮುಗಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಅದರಂತೆಯೇ ಈಗ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದು ಅನಿವಾರ್ಯ ಮತ್ತು ಕಾನೂನಾತ್ಮಕವಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಜೆಪಿ ವಿರುದ್ಧ ವಿಪಕ್ಷಗಳ ಚುನಾವಣಾ ಪೂರ್ವ ಮೈತ್ರಿ ಸಾಧ್ಯವಿಲ್ಲ; ಗುಲಾಬ್‌ ನಬಿ ಆಜಾದ್

ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಕಾಂಗ್ರೆಸ್ ನೀಡಿರುವ ಉಚಿತ ಭರವಸೆಗಳ ಕುರಿತು ನಿರ್ಮಲಾ ಸೀತಾರಾಮನ್ ಹರಿಹಾಯ್ದಿದ್ದಾರೆ.

“ಕಾಂಗ್ರೆಸ್ ನಾಲ್ಕು ಉಚಿತ ಘೋಷಣೆಯನ್ನ ಮಾಡಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಘೋಷಣೆ ಮಾಡಿ ಜನತೆಗೆ ಕಾಂಗ್ರೆಸ್ ನಾಯಕರು ಮೋಸ ಮಾಡಿದ್ದಾರೆ” ಎಂದಿದ್ದಾರೆ.

“ಕರ್ನಾಟಕ ರಾಜ್ಯದ ಬಜೆಟ್ 3 ಲಕ್ಷ ಕೋಟಿ ರೂ. ಕಾಂಗ್ರೆಸ್‌ನವರು ಕೊಟ್ಟ ಭರವಸೆಗಳಿಗೆ 1 ಲಕ್ಷ ಕೊಟಿ ರೂ. ಖರ್ಚಾಗುತ್ತದೆ. ಉಳಿದ 2 ಲಕ್ಷ ಕೋಟಿ ರೂ.ನಲ್ಲಿ ಸರ್ಕಾರ ನಡೆಸಬೇಕು. ಉಳಿದ ಹಣದಲ್ಲಿ ಹೇಗೆ ಅಧಿಕಾರ ನಡೆಸುತ್ತಾರೆ” ಎಂದು ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್‌ನ ಒಟ್ಟಾರೆ ಭರವಸೆಗಳು ಜನರನ್ನ ಮೋಸ ಮಾಡುವ ತಂತ್ರ. ಆದ್ದರಿಂದ ಕರ್ನಾಟಕದ ಜನರು ಕಾಂಗ್ರೆಸ್‌ನವರ ಭರವಸೆಗಳಿಗೆ ಮರುಳಾಗಬೇಡಿ” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತರಿಂದ ಖರೀದಿಸುವ ಹಾಲಿನ ನಿಗದಿ ದರ ಕಡಿತ ಮಾಡಬೇಡಿ; ಸಿಎಂ ಸೂಚನೆ

ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆ ಸಿಎಂ ಸೂಚನೆ ಹಾಲು...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...

ಸಚಿವ ವೆಂಕಟೇಶ್ ಹೇಳಿಕೆಯಿಂದ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋಹತ್ಯೆ‌ ತಲೆ ಎತ್ತಲಿದೆ: ಮಾಜಿ ಸಿಎಂ ಬೊಮ್ಮಾಯಿ

ಗೋವುಗಳನ್ನು ಏಕೆ ಕಡಿಯಬಾರದು ಎಂಬ ಸಚಿವರ ಹೇಳಿಕೆಗೆ ಬೊಮ್ಮಾಯಿ ಆಕ್ಷೇಪ 'ತಮಗೆ ನೀಡಿರುವ...

15,000 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆ ಶೀಘ್ರ ಭರ್ತಿ; ಗೃಹ ಸಚಿವ ಪರಮೇಶ್ವರ್

ಪೊಲೀಸ್ ಇಲಾಖೆಗೆ ಬಲ ತುಂಬಲು ಮುಂದಾದ ಸರ್ಕಾರ ಹೊಸ ನೇಮಕಾತಿ ಆರಂಭಿಸಲು ಸೂಚನೆ...