ಜನರ ಸುರಕ್ಷತೆಗಾಗಿ ರಾಜಧಾನಿಯ 30 ಕಡೆಗಳಲ್ಲಿ ‘ಸೇಫ್ಟಿ ಐಲ್ಯಾಂಡ್’ ವ್ಯವಸ್ಥೆ ಜಾರಿ: ಸಚಿವ ಪರಮೇಶ್ವರ್​

Date:

ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗೆ ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಪರಮೇಶ್ವರ್​ ತಿಳಿಸಿದರು.

ವಿಧಾನಪರಿಷತ್​ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, “ಬೆಂಗಳೂರಿನಲ್ಲಿ 7500 ಕ್ಯಾಮೆರಾಗಳು ಇವೆ. ನಗರದ ನಿಗದಿತ ಪ್ರದೇಶದಲ್ಲಿ ಅಲರಾಂ ಇರಲಿದೆ. ಇವುಗಳ ಮೇಲೆ 24 ಗಂಟೆ ನಿಗಾ ಇರಲಿದೆ” ಎಂದರು.

“ಸೇಫ್ಟಿ ಐಲ್ಯಾಂಡ್‌ಗಳು ಟಿಲಿಪೋನ್‌ ಬೂತ್‌ ಮಾದರಿಯಲ್ಲಿವೆ. ಅಲ್ಲಿರುವ ಬಟನ್ ಒತ್ತಿದರೆ 7 ನಿಮಿಷದೊಳಗೆ ತಕ್ಷಣ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಅಪರಾಧಿಗಳನ್ನು ಹಿಡಿಯಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕೂಡ ಬಳಕೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೇಫ್ಟಿ ಐಲ್ಯಾಂಡ್‌ಗಳ ಬಳಕೆ ಹೆಚ್ಚುತ್ತಿದೆ. ಮೊನ್ನೆ ಹೊರದೇಶದ ಪ್ರಜೆಯೊಬ್ಬರು ಪರ್ಸ್‌ ಕಳೆದುಕೊಂಡು ಸೇಫ್ಟಿ ಐಲ್ಯಾಂಡ್‌ ಬಳಸಿಕೊಂಡಿದ್ದರು. ಕೂಡಲೇ ಆ ಪರ್ಸ್‌ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿಬಿದ್ದ” ಎಂದು ವಿವರಿಸಿದರು.

ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಹೇಗಿರಲಿದೆ?

ನೀಲಿ ಬಣ್ಣದಲ್ಲಿರುವ ಟೆಲಿಫೋನ್ ಬೂತ್‌ನಂತಹ ರಚನೆ ಹೊಂದಿರುವ ಸೇಫ್ಟಿ ಐಲ್ಯಾಂಡ್​​ ಯಾರಾದರೂ ಸಂಕಷ್ಟದಲ್ಲಿರುವಾಗ ಅಥವಾ ಅವರ ಮೊಬೈಲ್ ಫೋನ್‌ ಸಂಪರ್ಕ ಸಾಧ್ಯವಾಗದಿದ್ದಾಗ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಪ್ರತಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಸಿಸಿಟಿವಿ ಹೊಂದಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ. ಬಳಕೆದಾರರು ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಬಂದು ಬಟನ್ ಒತ್ತಬೇಕು. ಇದು ಸಮೀಪದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ತಿಳಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ಆಗಮಿಸುತ್ತಾರೆ.

ಬೆಂಗಳೂರಿನಲ್ಲಿ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ ನಗರ ಪೊಲೀಸರು ಈಗಾಗಲೇ ತುರ್ತು ಟೋಲ್ ಫ್ರೀ ಸಂಖ್ಯೆ 112 ಅನ್ನು ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಐಟಿ ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸಾರ್ವಜನಿಕರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಹೆಚ್ಚುವರಿ ರಸ್ತೆ ಸಾಧನಗಳಾಗಿವೆ ಎಂದು ಹೇಳಲಾಗಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶ ಉಳಿಸಲು 100 ಬಾರಿ ಜೈಲಿಗೆ ಹೋಗಲು ಸಿದ್ಧ: ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿ ಪ್ರಕರಣದಲ್ಲಿ ನೀಡಲಾದ...

ಹಾಸನ ಚಲೋ | ಪ್ರಜ್ವಲ್-ರೇವಣ್ಣಗೆ ‘ಓನ್ಲೀ ಜೈಲ್ – ನೋ ಬೇಲ್’ ಎಂದು ಸರ್ಕಾರ ಹೇಳಬೇಕು: ಸುಭಾಷಿಣಿ ಅಲಿ

ಹಾಸನದಲ್ಲಿ ನಡೆದಿರುವ ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ಸಂತ್ರಸ್ತೆಯರಿಗೆ ಧೈರ್ಯ ತುಂಬಲು ನಾವಿಲ್ಲಿದ್ದೇವೆ....

ಚಂದ್ರಶೇಖ‌ರ್ ಆತ್ಮಹತ್ಯೆ | ಕುಟುಂಬ ಸದಸ್ಯರ ಭೇಟಿಯಾದ ವಿಜಯೇಂದ್ರ; ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...

ಬಿಎಂಟಿಸಿ ಬಸ್‌ ಚಾಲಕರ ಹುದ್ದೆಗೆ ಕನ್ನಡಿಗರ ಬದಲು ಕೇರಳದವರೇ ಬೇಕಾ: ಸರ್ಕಾರಕ್ಕೆ ಆರ್‌ ಅಶೋಕ್‌ ಪ್ರಶ್ನೆ

ಸಿಎಂ ಸಿದ್ದರಾಮಯ್ಯನವರೇ, ಬಿಎಂಟಿಸಿ ಬಸ್ಸು ಚಾಲಕರ ಹುದ್ದೆಗೆ ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಲು...