ಕೇರಳ | ಆರ್‌ಎಸ್‌ಎಸ್‌ ಮುಖಂಡನ ಮನೆಯಲ್ಲಿ 770 ಕೆಜಿ ಸ್ಫೋಟಕ ಪತ್ತೆ

Date:

ಪೊಲೀಸ್‌ ಕಾರ್ಯಾಚರಣೆ ವೇಳೆ ಕೇರಳದ ಆರ್‌ಎಸ್‌ಎಸ್‌ ಮುಖಂಡ ಮತ್ತು ಆತನ ಸಂಬಂಧಿಕರ ಮನೆಯಲ್ಲಿ 770 ಕೆ.ಜಿ ಸ್ಪೋಟಕ ಪತ್ತೆಯಾಗಿದೆ. ವಸತಿ ಪ್ರದೇಶದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಸ್ಪೋಟಕ ಪತ್ತೆಯಾಗಿವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಚುನಾವಣೆಯ ವಸ್ತಿಲಿನಲ್ಲಿ ಬಿಜೆಪಿಯ ನೀತಿ-ನಿರ್ಧಾರಗಳನ್ನು ನಿರ್ಣಯಿಸುವ ಆರ್‌ಎಸ್‌ಎಸ್‌ನ ಮುಖಂಡನ ಮನೆಯಲ್ಲಿಯೇ ಸ್ಪೋಟಕ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಕೇರಳದ ಕಣ್ಣೂರು ಜಿಲ್ಲೆಯ ಪೊಯಿಲೂರಿನಲ್ಲಿರುವ ಸ್ಥಳೀಯ ಅರ್‌ಎಸ್‌ಎಸ್‌ ಮುಖಂಡ ವಡಕಯಿಲ್ ಪ್ರಮೋದ್ ಮತ್ತು ಅವರ ಸಂಬಂಧಿ ವಡಕಯಿಲ್ ಶಾಂತಾ ಅವರ ಮನೆಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಪ್ರಮೋದ್‌ ತಲೆ ಮರೆಸಿಕೊಂಡಿದ್ದು,ಆತನೇ ಸ್ಪೋಟಕವನ್ನು ಸಂಗ್ರಹಿಸಿದ್ದಾನೆ, ಭಯೋತ್ಪಾದಕ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಸಂಪರ್ಕವನ್ನೂ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.

ಕೊಳವಲ್ಲೂರು ಪೊಲೀಸರಿಗೆ ಸಿಕ್ಕ ಗೌಪ್ಯ ಮಾಹಿತಿ ಮೇರೆಗೆ ಪೊಲೀಸರು ಆತನ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.  ಸ್ಫೋಟಕಗಳು ಪತ್ತೆಯಾದ ಘಟನೆ ಸಂಂಬಂಧ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಾಥಮಿಕ ತನಿಖೆಯಂತೆ ಸ್ಫೋಟಕಗಳನ್ನು ಅಕ್ರಮವಾಗಿ ವಿತರಣೆ ಮಾಡಲು ಉದ್ದೇಶಿಸಲಾಗಿತ್ತು ಎಂಬುದು ಕಂಡುಬಂದಿದೆ. ಈ ವಸ್ತುಗಳಿಂದ ಉಂಟಾಗುವ ಪರಿಣಾಮಗಳು ಗಂಭೀರವಾದುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಂತಹ ವಸ್ತುಗಳ ದುರುಪಯೋಗ ತಡೆಯಲು ಕಾನೂನು ಸಂಸ್ಥೆಗಳು ಎಚ್ಚರಿಕೆಯಿಂದಿವೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಸ್ಪೋಟಕಗಳೂ ಪತ್ತೆಯಾಗಿರುವುದು ನಿಜ. ಆಧರೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಸಿಡಿಮದ್ದುಗಳನ್ನು ಸಿಡಿಸಲು ಇವುಗಳನ್ನು ಇರಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಇದು ಭಯೋತ್ಪದಕ ಗುಂಪುಗಳು ಮತ್ತು ಅಕ್ರಮ ಚಟುವಟಿಕೆಗಳ ನಡುವಿನ ಸಂಭವನೀಯ ಸಂಪರ್ಕವನ್ನು ಸೂಚಿಸುತ್ತದೆ. ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸುವುದರ ಹಿಂದಿನ ಉದ್ದೇಶದ ಬಗ್ಗೆ ನಾನಾ ಪ್ರಶ್ನೆಗಳು ಎದುರಾಗುತ್ತವೆ. ಸತ್ಯವನ್ನು ಬಹಿರಂಗಪಡಿಸಲು ತನಿಖೆ ನಡೆಯುತ್ತಿದೆ” ಎಂದು ಕೊಳವಲ್ಲೂರು ಪೊಲೀಸ್ ಇನ್ಸ್ ಪೆಕ್ಟರ್ ಸುಮೀತ್ ಕುಮಾರ್ ಹೇಳಿರುವುದಾಗಿ ವಾರ್ತಾಭಾರತಿ ವರದಿ ಮಾಡಿದೆ.

ಪ್ರಮೋದ್ ಅವರು ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದೂ ಎನ್ಸ್‌ಪೆಕ್ಟರ್‌ ಹೇಳಿದ್ದಾರೆ.

ಕಳೆದ ವರ್ಷ, ಆರ್‌ಎಸ್‌ಎಸ್ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಬಾಂಬ್‌ ತಯಾರಿಸುವ ವೇಳೆ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು. ಸ್ಫೋಟ ಘಟನೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ವಿಷ್ಣು (20) ಎಂಬ ಯುವಕ ಗಂಭೀರ ಗಾಯಗೊಂಡಿದ್ದನು.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ನೇಹಿತೆ ಮೇಲೆ ಹಲ್ಲೆ, ಅತ್ಯಾಚಾರ; ಆರೋಪಿ ಬಂಧನ – ಮನೆಯ ಅಕ್ರಮ ಭಾಗ ನೆಲಸಮ

ತನ್ನ ಸ್ನೇಹಿತೆ ಮೇಲೆಯೇ ಹಲ್ಲೆಗೈದು ಅತ್ಯಾಚಾರ ಎದಗಿದ್ದ ಆರೋಪದ ಮೇಲೆ 20...

ಕಾಂಗ್ರೆಸ್‌ ಗ್ಯಾರಂಟಿಗಳಿಂದ ಮಹಿಳೆಯರ ಸಬಲೀಕರಣ ಆಗಲ್ಲ: ಸುಮಲತಾ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸಮರ್ಥನೀಯವಲ್ಲ. ಅವುಗಳು ಮಹಿಳೆಯರನ್ನು ಸಬಲೀಕರಣ ಮಾಡುವುದಿಲ್ಲ ಎಂದು...

ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 22...

ದೇಶದ ಇತಿಹಾಸದಲ್ಲಿ ಮೋದಿಯಷ್ಟು ತಮ್ಮ ಹುದ್ದೆಯ ಘನತೆಯನ್ನು ಯಾವ ಪ್ರಧಾನಿಯೂ ಇಳಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ

'ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ನ ಪ್ರಣಾಳಿಕೆ'...