ಕೋಲಾರ – ವರುಣಾ: ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲಿರುವ ಸಿದ್ದರಾಮಯ್ಯ; ರಾಹುಲ್ ಜೊತೆ ಚರ್ಚೆಯಷ್ಟೇ ಬಾಕಿ

Date:

  • ಅಭ್ಯರ್ಥಿಗಳ ಎರಡನೇ ಅಥವಾ ಮೂರನೇ ಪಟ್ಟಿಯಲ್ಲಿ ಕೋಲಾರ ಸಹ ಇರಲಿದೆ
  • ಸಿದ್ದರಾಮಯ್ಯ ಹೆಸರು ಮೊದಲ ಪಟ್ಟಿಯಲ್ಲಿ ಇರಬೇಕೆಂಬ ಕಾರಣ ಪಟ್ಟಿ ಬಿಡುಗಡೆ ವಿಳಂಬ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ವರುಣಾ ಕ್ಷೇತ್ರದ ಜೊತೆಗಿದೆಯಾದರೂ, ಅವರು ಕೋಲಾರ ಕ್ಷೇತ್ರದಿಂದಲೂ ಸ್ಪರ್ಧಿಸುವುದು ಖಚಿತವಾಗಿದೆ. ಈದಿನ.ಕಾಮ್ ಜೊತೆಗೆ ಮಾತನಾಡಿದ ಉನ್ನತ ಮೂಲಗಳು ಇದನ್ನು ಖಚಿತಪಡಿಸಿದ್ದಾರೆ.

2018ರಲ್ಲಿ ತಮ್ಮ ಸ್ವಕ್ಷೇತ್ರ ವರುಣಾವನ್ನು ಪುತ್ರ ಯತೀಂದ್ರಗೆ ಬಿಟ್ಟುಕೊಟ್ಟು ಪಕ್ಕದ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲು ಬಯಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಲ್ಲಿ ಸೋಲು ಉಂಟಾಗುತ್ತದೆಂಬುದರ ವಾಸನೆ ಗೊತ್ತಾಗಿತ್ತು. ಹಾಗಾಗಿ ಬಾದಾಮಿಯಿಂದಲೂ ಸ್ಪರ್ಧಿಸಿ ಅಲ್ಲಿ ಗೆದ್ದಿದ್ದರು. ಎರಡೂ ಕಡೆ ಅವರನ್ನು ಸೋಲಿಸಲು ವಿರೋಧ ಪಕ್ಷಗಳು ಮತ್ತು ಸ್ವಪಕ್ಷದ ವಿರೋಧಿಗಳು ಕೈ ಜೋಡಿಸಿದ್ದರೆಂಬುದು ‘ಓಪೆನ್ ಸೀಕ್ರೆಟ್’.

ಹಾಗಾಗಿಯೇ ಈ ಸಾರಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಾಗಲೂ ಅವರ ವಿರೋಧಿಗಳೆಲ್ಲಾ ಒಟ್ಟು ಸೇರಿ ಸೋಲಿಸುವ ಸಾಧ್ಯತೆ ಇದ್ದೇ ಇದೆ ಎಂಬುದು ಅವರಿಗೂ ಗೊತ್ತಿತ್ತು. ಹಾಗಾಗಿಯೇ ಅವರ ಕೋಲಾರ ಜಿಲ್ಲೆಯ ಆಪ್ತ ಶಾಸಕರ ಒತ್ತಾಸೆಯ ಮೇರೆಗೆ ಕೋಲಾರ ವಿಧಾನಸಭಾ ಕ್ಷೇತ್ರದತ್ತ ಚಿತ್ತ ಹರಿದಿತ್ತು. ಆದರೆ, ಮೇಲಿನ ಕಾರಣದಿಂದಲೇ ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ ಎಂಬ ಸಲಹೆಯನ್ನು ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರಿಗೆ ನೀಡಿದ್ದರು.

ಆ ಸಲಹೆಯನ್ನು ಪರಿಗಣಿಸಿರುವ ಮಾಜಿ ಮುಖ್ಯಮಂತ್ರಿ ತಮ್ಮ ಸ್ವಕ್ಷೇತ್ರ ವರುಣಾದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದಾರಾದರೂ, ಅದರ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸಲೂ ನಿರ್ಧರಿಸಿದ್ದಾರೆ. ಸಿದ್ದರಾಮಯ್ಯನವರ ಹೆಸರು ಮೊದಲ ಪಟ್ಟಿಯಲ್ಲಿ ಇರಬೇಕೆಂಬ ಕಾರಣದಿಂದಲೇ ಪಟ್ಟಿ ಬಿಡುಗಡೆ ಮೂರು ದಿನಗಳ ಕಾಲ ತಡವಾಯಿತು ಎಂದು ಕಾಂಗ್ರೆಸ್ಸಿನ ಮೂಲಗಳು ಈದಿನ.ಕಾಮ್ ಗೆ ತಿಳಿಸಿದರು.

ಆದರೆ ಈ ಮಧ್ಯೆ ರಾಹುಲ್ ಗಾಂಧಿಯವರು ಸೂರತ್ ಕೋರ್ಟಿನ ತೀರ್ಪು ಹಾಗೂ ಸಂಸತ್ ಸ್ಥಾನದ ಅನರ್ಹತೆಯ ಕಾರಣದಿಂದ ಬೇರೆ ಕೆಲಸಗಳಲ್ಲಿ ವ್ಯಸ್ತರಾದ್ದರಿಂದ, ಈ ಬಗ್ಗೆ ಚರ್ಚೆ ಮಾಡಲಾಗಿಲ್ಲ. ಹಾಗಾಗಿ ಮೊದಲ ಪಟ್ಟಿಯಲ್ಲಿ ವರುಣಾ ಮಾತ್ರ ಇದ್ದು, ಎರಡನೇ ಅಥವಾ ಮೂರನೇ ಪಟ್ಟಿಯಲ್ಲಿ ಕೋಲಾರ ಸಹ ಇರಲಿದೆ ಎಂಬುದು ಖಚಿತಪಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

ಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು 28...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...

ಬೆಂಗಳೂರು | ಬಿಎಂಟಿಸಿ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಟ್ಟು ಕರಕಲು

ಯಶವಂತಪುರ-ನಾಯಂಡಹಳ್ಳಿಗೆ ತೆರಳುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗೆ ಕಾರ್‌ವೊಂದು...