ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ‘ಭಾರತ ರತ್ನ’ ಸಿಗಲಿ, ಮೋದಿ ಮನಸ್ಸು ಮಾಡಲಿ: ರಣದೀಪ್‌ ಸುರ್ಜೇವಾಲ

Date:

“ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜಕ್ಕೂ ಮರಣೋತ್ತರ ‘ಭಾರತ ರತ್ನʼ ಸಿಗಬೇಕು. ಈ ಗೌರವಕ್ಕೆ ಅವರಂತಹ ಅರ್ಹರು ಮತ್ತೊಬ್ಬರಿಲ್ಲ. ಅವರಿಗೆ ಈ ಹಿಂದೆಯೇ ಈ ಗೌರವ ಸಿಗಬೇಕಿತ್ತು” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

- Advertisement -

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ರಣದೀಪ್ ಸುರ್ಜೇವಾಲ, “ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ಮಂದಿಗೆ ಆಸರೆಯಾಗಿ ನಿಂತ ಮಹಾತ್ಮರು ಸಿದ್ಧಗಂಗಾ ಶ್ರೀಗಳು. ಇಡೀ ದೇಶಕ್ಕೇ ಮಾದರಿಯಾಗಿದ್ದವರು. ಹೀಗಾಗಿ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಶ್ರೀಗಳಿಗೆ ಭಾರತ ರತ್ನ ನೀಡಲು ಆದ್ಯತೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಈ ಶತಮಾನ ಕಂಡ ಅಪರೂಪದ ಶರಣರಾಗಿದ್ದವರು. ಶ್ರೀಗಳು ಅನ್ನ,ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದವರು. ಯಾವುದೇ ಜಾತಿ, ಧರ್ಮ ಭೇದ ಇಲ್ಲಿಲ್ಲ. ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಸಹಾಯ ಬೇಡಿ ಬಂದ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ ನೀಡಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಹಾಗೂ ಹೆಸರನ್ನು ಗಳಿಸುವಂತೆ ಮಾಡಿದವರು” ಅವರು ಬಣ್ಣಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?

ನಡೆದಾಡುವ ದೇವರಿಗೆ ಸಿಗಲಿ ಗೌರವ

“ಶತಾಯುಷಿಗಳಾಗಿರುವ ಅವರು ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದರು. ಜನರು ಶಿವಕುಮಾರ ಸ್ವಾಮೀಜಿಯಲ್ಲಿ ದೇವರನ್ನು ಕಂಡಿದ್ದಾರೆ. ದೇವರು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ಈ ನಮ್ಮ ನಡೆದಾಡುವ ದೇವರು ಎಲ್ಲವನ್ನೂ ಮಾಡಿ ತೋರಿಸಿದ್ದಾರೆ. ಆರಂಭದಲ್ಲಿ ಶ್ರೀಮಠದ ಆದಾಯ ಕಡಿಮೆ ಇದ್ದಾಗಲೂ ಕುಗ್ಗದ ಶ್ರೀಗಳು, ಭಕ್ತರ ಮನೆ ಮನೆಗೆ ತೆರಳಿ ದವಸ-ಧಾನ್ಯಗಳನ್ನು ಭಿಕ್ಷೆ ಎತ್ತಿ ಮಠವನ್ನು ನಿರ್ವಹಿಸಿದರು. ಮಠದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಇಂಥವರು ಸಿಗುವುದೇ ಅಪರೂಪ” ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಅಭಿಪ್ರಾಯಪಟ್ಟಿದ್ದಾರೆ.

ಇದು ಆರೂವರೆ ಕೋಟಿ ಕನ್ನಡಿಗರ ಭಾವನೆ

“ನಿಜವಾಗಿಯೂ ಭಾರತದ ಅಮೂಲ್ಯ ರತ್ನವಾಗಿರುವಂಥ ಕರ್ನಾಟಕದ ಈ ಮಹಾನ್‌ ಪುರುಷ, ಅವತಾರ ಪುರುಷರಾಗಿರುವ ಶಿವಕುಮಾರ್‌ ಶ್ರೀಗಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಭಾವನೆಯಾಗಿದೆ. ಇದು ಆರೂವರೆ ಕೋಟಿ ಕನ್ನಡಿಗರ ಅಭಿಮತವೂ ಆಗಿದೆ ಎಂಬುದು ನನ್ನ ಅನ್ನಿಸಿಕೆ” ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಸಿಎಂ ಡಿಕೆಶಿ ಮನವಿ

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ...