ಮೇರಾ ಘರ್ ಪೂರಾ ಹಿಂದೂಸ್ತಾನ್ ಹೇ: ರಾಹುಲ್ ಗಾಂಧಿ

ರಾಹುಲ್‌ ಗಾಂಧಿ
Rahul gandhi expelled

‘ಮೇರಾ ಘರ್ ಪೂರಾ ಹಿಂದೂಸ್ತಾನ್ ಹೇ’…ಹೀಗಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದವರು ರಾಹುಲ್ ಗಾಂಧಿ.

ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗಿದ್ದ ರಾಹುಲ್‌ ಗಾಂಧಿ ಅವರು ತಮ್ಮ ಸಂಸದ ಸ್ಥಾನವನ್ನು ಮರಳಿ ಪಡೆದಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್‌ ಅನರ್ಹತೆ ಆದೇಶವನ್ನು ಹಿಂಪಡೆದುಕೊಂಡಿದ್ದರು.

ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಬೆನ್ನಲ್ಲೇ, ರಾಹುಲ್‌ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭಾ ಸ್ಪೀಕರ್ ಆದೇಶಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಂತರ ಕಳೆದ ಮಾರ್ಚ್ 24 ರಂದು ಲೋಕಸಭಾ ಸದಸ್ಯತ್ವವನ್ನು ಕಸಿದುಕೊಂಡ ಕೆಲವು ದಿನಗಳ ನಂತರ ರಾಹುಲ್ ಗಾಂಧಿ ಅವರು ಮನೆಯನ್ನು ಖಾಲಿ ಮಾಡಿದ್ದರು. ಅಂದಿನಿಂದ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ 10 ಜನಪಥ್ ರಸ್ತೆಯ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಈಗ ಮತ್ತೆ ಅವರಿಗೆ ಸರ್ಕಾರಿ ನಿವಾಸವು ದೊರಕಿದೆ.

ಹೀಗಾಗಿ ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯೊಂದನ್ನು ನಡೆಸಿದ ಬಳಿಕ ಹೊರಬರುತ್ತಿದ್ದಂತೆಯೇ ಎದುರು ಸಿಕ್ಕ ಮಾಧ್ಯಮ ಪ್ರತಿನಿಧಿಗಳು, ‘ನಿಮ್ಮ ಮನೆ ನಿಮಗೆ ಮತ್ತೆ ಸಿಕ್ಕಿದೆ. ಎಷ್ಟು ಖುಷಿಯಾಗುತ್ತಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಒಂದೇ ವಾಕ್ಯದಲ್ಲಿ ಉತ್ತರಿಸಿದ ರಾಹುಲ್ ಗಾಂಧಿ, ‘ಮೇರಾ ಘರ್ ಪೂರಾ ಹಿಂದೂಸ್ತಾನ್ ಹೇ’ (ಇಡೀ ಭಾರತವೇ ನನ್ನ ಮನೆ) ಎಂದಷ್ಟೇ ಉತ್ತರಿಸಿ ತೆರಳಿದರು.

ರಾಹುಲ್ ಗಾಂಧಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here