ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್‌​ರನ್ನು ಒಪ್ಪಿರಲಿಲ್ಲ, ಹೋಗಿದ್ದು ಒಳ್ಳೆಯದಾಯಿತು: ಡಿಕೆ ಶಿವಕುಮಾರ್‌

Date:

ನೀತಿ, ಸಿದ್ಧಾಂತದಡಿ ರಾಜಕೀಯ ಮಾಡುವವರು ನಾವು. ಅಲ್ಪಸಂಖ್ಯಾತ ಸಮುದಾಯ ಕೂಡ ಜಗದೀಶ್ ಶೆಟ್ಟರ್‌ ಅವ​ರನ್ನು ಒಪ್ಪಿರಲಿಲ್ಲ. ಇದರಿಂದ ನಮ್ಮ ಪಕ್ಷ ಸಂಘಟನೆಗೂ ಕಷ್ಟ ಆಗುತ್ತಿತ್ತು. ಶೆಟ್ಟರ್​​​ ಹೋಗಿದ್ದೇ ಒಳ್ಳೆಯದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ವಿಚಾರ ಬಗ್ಗೆ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ನೂರಾರು ಜನ ಬರ್ತಾರೆ, ನೂರಾರು ಜನ ಹೋಗುತ್ತಾರೆ. ಜಗದೀಶ್ ಶೆಟ್ಟರ್ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಲಿ” ಎಂದರು.

“ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ನಮ್ಮ ಪಕ್ಷದ ಕಾರ್ಯಕರ್ತರ ಟಿಕೆಟ್ ಅವರಿಗಾಗಿ ನಾವು ತ್ಯಾಗ ಮಾಡಿದೆವು. ಮಾಜಿ ಸಿಎಂ ಎಂಬ ಘನತೆಗೆ ಗೌರವ ಕೊಟ್ಟು ಟಿಕೆಟ್ ನೀಡಿದೆವು. ಸೋತರೂ ಕೂಡ ಅವರನ್ನು ನಂಬಿ ನಾವು ಅವರನ್ನು ಎಂಎಲ್‌ಸಿ ಮಾಡಿದೆವು. ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಧರ್ಮದ ಆಧಾರದಲ್ಲಿ ದೇಶ ಕಟ್ಟುವುದನ್ನು ಪ್ರಜಾಪ್ರಭುತ್ವ ನಂಬಿರುವ ಯಾರೂ ಒಪ್ಪಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

“ಬಿಜೆಪಿ ವಿರುದ್ದ ಅವರು ಆರೋಪ ಮಾಡಿದ್ದಕ್ಕೆ ಅವರೇ ಉತ್ತರ ಕೊಡಬೇಕು. ಬಿಜೆಪಿ ದೂರ ಇಡಬೇಕು ಅಂತ ನಾವು ಜೆಡಿಎಸ್ ಜೊತೆಗೆ ಸರ್ಕಾರ ಮಾಡಿದ್ದೆವು. ಆಪರೇಷನ್ ಕಮಲ ಮಾಡಿ ಯಾರು ಸಮ್ಮಿಶ್ರ ಸರ್ಕಾರ ತೆಗೆದರೋ ಅವರ ಜೊತೆಗೇ ಈಗ ಜೆಡಿಎಸ್ ತಬ್ಬಿಕೊಳ್ತಿಲ್ವಾ? ಬಿಜೆಪಿಯ ವಕ್ತಾರರಾಗಿಲ್ವಾ ಹೆಚ್ ​ಡಿ ಕುಮಾರಸ್ವಾಮಿ? ಹಾಗೆ ರಾಜಕಾರಣದಲ್ಲಿ ಎಲ್ಲವೂ ಆಗುತ್ತದೆ” ಎಂದು ಡಿಕೆ ಶಿವಕುಮಾರ್ ಹೇಳಿದರು.

ಲಕ್ಷ್ಮಣ ಸವದಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, “ನಾನು ಕಾಂಗ್ರೆಸ್​​ಗೆ ವೈಯಕ್ತಿಕವಾಗಿ ಬಂದಿದ್ದೇನೆ. ಒಟ್ಟಿಗೆ ಕೆಲಸ ಮಾಡೋಣ” ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಸವದಿ ದೊಡ್ಡ ಅಂತರದಲ್ಲಿ ಚುನಾವಣೆ ಗೆದ್ದಿದ್ದಾರೆ. ಅವರು ನಮ್ಮ ನಾಯಕರಾಗಿದ್ದಾರೆ. ಬಿಜೆಪಿಯವರು ಎಲ್ಲರನ್ನೂ ಸೆಳೆಯಲು ಪ್ರಯತ್ನ ಮಾಡುತ್ತಾರೆ. ನಮಗೆ ಗೊತ್ತಿದೆ, ಆ ಬಗ್ಗೆ ನಾನು ಮಾತನಾಡಲ್ಲ. ನಾವು ಮುಂದಾದರೆ ಎಷ್ಟು ಮನೆಗಳು ಖಾಲಿಯಾಗಬಹುದು ಎಂದು ಅವರು ಯೋಚನೆ ಮಾಡಲಿ” ಎಂದು ಎಚ್ಚರಿಕೆ ನೀಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈಲಿಗೆ ಬೆಂಕಿ ಹಚ್ಚಿ ಸುಡುತ್ತೇವೆ ಎಂದವರನ್ನು ಒದ್ದು ಒಳಗೆ ಹಾಕಬೇಕು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳುತ್ತಿದ್ದ ರೈಲಿಗೆ ಹೊಸಪೇಟೆಯಲ್ಲಿ ಬೆಂಕಿ ಹಚ್ಚಿ ಸುಡುತ್ತೇವೆ...

ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್‌ರನ್ನು ಕೆಳಗಿಳಿಸಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಜರಂಗದಳ ಒತ್ತಾಯ

ಬಜೆಟ್ ಅಧಿವೇಶನದ ವೇಳೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್,...

ನಟ ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲು; ಕ್ಷಮೆ ಕೇಳಿದ ಶಫಿ

ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗಲಾಟೆ...