ಮಹಿಳೆಯ ಅರೆನಗ್ನ ದೇಹ ಪ್ರದರ್ಶನ ಅಶ್ಲೀಲವಲ್ಲ; ಕೇರಳ ಹೈಕೋರ್ಟ್‌

Date:

ʻಸಂಪೂರ್ಣ ನಗ್ನ ಅಥವಾ ಅರೆ ನಗ್ನತೆಯ ವಿಚಾರದಲ್ಲಿ ಪುರುಷ ಮತ್ತು ಹೆಣ್ಣಿನ ದೇಹಗಳನ್ನು ಸಮಾಜವು ನೋಡುವ ಮತ್ತು ನಡೆಸಿಕೊಳ್ಳುವ ವಿಭಿನ್ನ ದೃಷ್ಟಿಕೋನವು ಬದಲಾಗಬೇಕಿದೆʼ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಟ್ಟಿದೆ.

33 ವರ್ಷದ ಮಹಿಳೆಯೊಬ್ಬರ ಅರೆ ನಗ್ನ ದೇಹದ ಮೇಲೆ ಅವರ ಮಕ್ಕಳು ಚಿತ್ರ ಬಿಡಿಸುವ ವಿಡಿಯೋ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ..

ʻಚಿತ್ರಕಲೆ’ಗಾಗಿ ‘ಕ್ಯಾನ್ವಾಸ್’ ರೂಪದಲ್ಲಿ ಬಳಸಲು ಮಹಿಳೆಯು ತನ್ನ ದೇಹವನ್ನು ಅನುಮತಿಸಿದ್ದಲ್ಲಿ ಯಾವುದೇ ಅಶ್ಲೀಲತೆ, ಲೈಂಗಿಕತೆ ಕಾಣುತ್ತಿಲ್ಲ. ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರಿಸಿದರೆ, ಲೈಂಗಿಕ ಕ್ರಿಯೆಯ ಭಾಗ ಎಂದು ನಿರೂಪಿಸಲಾಗುವುದಿಲ್ಲ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಲಾಗುವುದಿಲ್ಲʼ ಎಂದು ಕೋರ್ಟ್ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʻಪಿತೃಪ್ರಧಾನ ಸಮಾಜದ ಕಲ್ಪನೆಗಳನ್ನು ಪ್ರಶ್ನಿಸಲು ಮತ್ತು ಸ್ತ್ರೀ ದೇಹದ ಅತಿಯಾದ ಲೈಂಗಿಕತೆಯ ವಿರುದ್ಧ ಸಂದೇಶವನ್ನು ಹರಡಲು ತಾನು ಈ ವಿಡಿಯೋ ಚಿತ್ರೀಕರಿಸಿದ್ದೇನೆʼ ಎಂದು ಕೋರ್ಟ್​ನಲ್ಲಿ ಮಹಿಳೆ ವಾದಿಸಿದ್ದರು.

ʻಮಹಿಳೆಯ ನಗ್ನ ದೇಹವನ್ನು ಲೈಂಗಿಕ ಅಥವಾ ಅಶ್ಲೀಲ ಎಂದು ಪರಿಗಣಿಸಬಾರದು. ಪುರುಷರ ದೇಹದ ಸ್ವಾತಂತ್ರ್ಯವನ್ನು ವಿರಳವಾಗಿ ಪ್ರಶ್ನಿಸಲಾಗುತ್ತದೆ. ಆದರೆ, ಮಹಿಳೆಯರು ನಗ್ನವಾಗಿ ಕಂಡಲ್ಲಿ ಪಿತೃಪ್ರಧಾನ ಸಮಾಜದ ನಿರಂತರ ಬೆದರಿಕೆಗೆ ಒಳಗಾಗುತ್ತಾರೆ. ಮಹಿಳೆಯರೂ ಕೂಡ ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಹೊಂದಿದ್ದಾರೆʼ ಎಂದು ಕೋರ್ಟ್​ ಅಭಿಪ್ರಾಯಟ್ಟಿದೆ.

ʻಈ ಪ್ರಕರಣದಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ದೃಶ್ಯಗಳಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಅರ್ಜಿದಾರರು ಮಹಿಳೆಯ ಅರೆನಗ್ನ ದೇಹವನ್ನು ರಾಜಕೀಯ ರೂಪದಲ್ಲಿ ಪ್ರಶ್ನಿಸಲಾಗಿದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಡಪ್ಪಗತ್, ಅರ್ಜಿದಾರ ಮಹಿಳೆಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.  .

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿಡಿ ನ್ಯೂಸ್ ಲೋಗೊ ಬಣ್ಣ ಕೇಸರೀಕರಣ: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ...

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...