ಗುಜರಾತ್‌ | 10ನೇ ತರಗತಿ ಫಲಿತಾಂಶ; 157 ಶಾಲೆಗಳಲ್ಲಿ ಶೂನ್ಯ ಫಲಿತಾಂಶ; ಟ್ವಿಟರ್‌ನಲ್ಲಿ ಟ್ರೆಂಡಿಂಗ್

Date:

ಇತ್ತೀಚಿಗಷ್ಟೆ 2023ನೇ ಸಾಲಿನ ಗುಜರಾತ್‌ನ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಫಲಿತಾಂಶ ಶೇ. 64.62 ರಷ್ಟಿದೆ. ಕುತೂಹಲದ ವಿಷಯವೆಂದರೆ, 272 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದರೆ, 157 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ.

157 ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಉತ್ತೀರ್ಣರಾಗಿಲ್ಲ. 1084 ಶಾಲೆಗಳು ಶೇಕಡಾ 30 ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿವೆ.

ಮರು ಪರೀಕ್ಷೆಗೆ ಹಾಜರಾದ 165690 ವಿದ್ಯಾರ್ಥಿಗಳ ಪೈಕಿ 27446 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಶೇ. 76 ರೊಂದಿಗೆ ಸೂರತ್ ಜಿಲ್ಲೆ ಶೇಕಡಾವಾರು ಉತ್ತೀರ್ಣತೆಯಲ್ಲಿ ಅಗ್ರಸ್ಥಾನದಲ್ಲಿದೆ. ದಾಹೋದ್ ಕೇವಲ ಶೇ. 40.75 ಉತ್ತೀರ್ಣತೆ ದಾಖಲಿಸುವುದರೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ನೀವು ದಲಿತರನ್ನು ಅಪ್ಪಿಕೊಳ್ಳುತ್ತೀರಾ?: ಆರ್‌ಎಸ್‌ಎಸ್‌-ಬಿಜೆಪಿ ಪ್ರಶ್ನಿಸಿದ ರಾಜಸ್ಥಾನ ಸಿಎಂ

6111 ವಿದ್ಯಾರ್ಥಿಗಳು ಎ1 ಶ್ರೇಣಿ, 44480 ವಿದ್ಯಾರ್ಥಿಗಳು ಎ2 ಶ್ರೇಣಿ, 127652 ವಿದ್ಯಾರ್ಥಿಗಳು ಬಿ2 ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 96000 ವಿದ್ಯಾರ್ಥಿಗಳು ಗುಜರಾತಿ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದರೆ, 1.96 ಲಕ್ಷ ವಿದ್ಯಾರ್ಥಿಗಳು ಮೂಲ ಗಣಿತದಲ್ಲಿ ಅನುತ್ತೀರ್ಣರಾಗಿದ್ದಾರೆ.

ಗುಜರಾತ್ ಫಲಿತಾಂಶದ ಬಗ್ಗೆ ಟ್ವಿಟರ್‌ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಮೋದಿಯವರ ಒಂದೇ ಗುರಿ ಎಂದರೆ, ಭಾರತದ ಯುವಕರನ್ನು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡಿಸುವುದು.. ಅದೂ ಎಂಟೈರ್ ಪೊಲಿಟಿಕಲ್ ಸೈನ್ಸ್‌ನಲ್ಲಿ.. ಎಂದು ಹಲವರು ಟ್ವೀಟ್‌ ಮಾಡಿದ್ದಾರೆ. ಸದ್ಯ ಗುಜರಾತ್ ಬೋರ್ಡ್ ಫಲಿತಾಂಶವು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ‘400 ಪಾರ್’ ಸಿನಿಮಾ ಮತದಾನದ ಮೊದಲ ದಿನವೇ ಫ್ಲಾಪ್: ತೇಜಸ್ವಿ ಯಾದವ್ ವ್ಯಂಗ್ಯ

"ಲೋಕಸಭೆ ಚುನಾವಣೆಯ ಮೊದಲ ಹಂತದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ...

ಲೋಕಸಭೆ ಚುನಾವಣೆ| ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್‌ ಪುನರುಜ್ಜೀವನ; ನಿರ್ಮಲಾ ಸೀತಾರಾಮನ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಧ್ಯಸ್ಥಗಾರರೊಂದಿಗೆ ಸರಿಯಾದ ಸಮಾಲೋಚನೆಯ ನಂತರ...

ಛತ್ತೀಸ್‌ಗಢ| ಬಸ್ತಾರ್‌ ಮತಗಟ್ಟೆ ಬಳಿ ಸ್ಫೋಟ: ಸಿಆರ್‌ಪಿಎಫ್ ಯೋಧ ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಮತಗಟ್ಟೆಯೊಂದರ ಬಳಿ ಶುಕ್ರವಾರ ನಡೆದ ಐಇಡಿ ಸ್ಫೋಟದಲ್ಲಿ...