ಜ್ಞಾನವಾಪಿ ಮಸೀದಿ ಪ್ರಕರಣ : ಏಪ್ರಿಲ್‌ 21ಕ್ಕೆ ಕ್ರೋಡೀಕರಿಸಿದ ಮೊಕದ್ದಮೆಗಳ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ

Date:

ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿ ವಾರಾಣಾಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎಲ್ಲಾ ಮೊಕದ್ದಮೆಗಳ ಕ್ರೋಡೀಕರಿಸಿದ ಮನವಿಯನ್ನು ಏಪ್ರಿಲ್‌ 21ರಂದು ವಿಚಾರಣೆ ಪಟ್ಟಿ ನಡೆಸುವುದಾಗಿ ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ವಕೀಲ ವಿಷ್ಣು ಶಂಕರ್ ಜೈನ್ ಅವರು ಸಲ್ಲಿಸಿದ ಅರ್ಜಿಗಳನ್ನು ಆಲಿಸಲು ಒಪ್ಪಿಗೆ ಸೂಚಿಸಿದೆ.

“ವಾರಣಾಸಿಯ ಜಿಲ್ಲಾ ನ್ಯಾಯಾಧೀಶರು ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಸಿವಿಲ್ ಮೊಕದ್ದಮೆಗಳನ್ನು ಒಟ್ಟುಗೂಡಿಸಲು ಕೋರಿದ ಮನವಿಯ ನಿರ್ಧಾರವನ್ನು ಐದು ಬಾರಿ ಮುಂದೂಡಿದ್ದಾರೆ. ನಾವು ಈ ಮೊಕದ್ದಮೆಗಳನ್ನು ಏಪ್ರಿಲ್ 21ರಂದು ವಿಚಾರಣೆಗೆ ಪಟ್ಟಿ ಮಾಡುತ್ತೇವೆ” ಎಂದು ಪೀಠ ಹೇಳಿದೆ.

2022, ಮೇ 17ರಂದು ವಾರಣಾಸಿಯ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗವು ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ‘ಶಿವಲಿಂಗ’ ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ರಕ್ಷಿಸಲು ನೀಡಿದ ಆದೇಶವು ಹಕ್ಕನ್ನು ನಿರ್ಬಂಧಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ನವೆಂಬರ್ 11ರಂದು ಸ್ಪಷ್ಟಪಡಿಸಿತು. ಮುಸ್ಲಿಮರು ನಮಾಜ್ ಮಾಡಲು ಮತ್ತು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಮಸೀದಿಯನ್ನು ಪ್ರವೇಶಿಸಲು ನೀಡಿದ ಮಧ್ಯಂತರ ಆದೇಶವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ವಿಪಕ್ಷಗಳ ಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ವಿತ್ತೀಯ ಮಸೂದೆ ಅಂಗೀಕಾರ

ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಎಲ್ಲಾ ಮೊಕದ್ದಮೆಗಳ ಕ್ರೋಡೀಕರಣಕ್ಕಾಗಿ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಮುಂದೆ ಅರ್ಜಿಯನ್ನು ಸಲ್ಲಿಸಲು ಹಿಂದೂ ಅರ್ಜಿದಾರರಿಗೆ ಅವಕಾಶ ನೀಡಿತು.

ಸಮೀಕ್ಷೆ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ಮೇಲೆ ಮೂರು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಹಿಂದೂ ಅರ್ಜಿದಾರರಿಗೆ ಸೂಚಿಸಿದೆ.

ಅಖಿಲೇಶ್, ಓವೈಸಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿಕೆ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಕುರಿತಾದ ಘಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ವಾರಾಣಸಿ ನ್ಯಾಯಾಲಯ ಇತ್ತೀಚೆಗೆ ಈ ಇಬ್ಬರು ನಾಯಕರಿಗೆ ನೋಟಿಸ್‌ ನೀಡಿದೆ.

ಇಬ್ಬರೂ ನಾಯಕರು ಯಾವುದೇ ಆಕ್ಷೇಪಾರ್ಹ ಅಪರಾಧ ಎಸಗಿಲ್ಲ ಎಂದು ತಿಳಿಸಿ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ವಕೀಲ ಹರಿಶಂಕರ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಆದೇಶ ಪ್ರಶ್ನಿಸಿ ಪಾಂಡೆ ಬಳಿಕ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಓವೈಸಿ ಮತ್ತು ಯಾದವ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲು ಕೋರಿ ಸಲ್ಲಿಸಲಾದ ಆರಂಭಿಕ ಮನವಿಯ ವಿಚಾರಣೆಗೆ ಕಳೆದ ವರ್ಷ ನವೆಂಬರ್ 15ರಂದು ಸಮ್ಮತಿ ಸೂಚಿಸಲಾಗಿತ್ತು. ಜನವರಿ 31ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಕಳೆದ ತಿಂಗಳು ಪಾಂಡೆ ಅವರ ಮನವಿಯನ್ನು ವಜಾಗೊಳಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತ್ಯೇಕ ಬಜೆಟ್‌ ಮಂಡನೆ ಪದ್ಧತಿ ಸ್ಥಗಿತಗೊಳಿಸಿ ಬಿಜೆಪಿ ರೈಲ್ವೆ ವ್ಯವಸ್ಥೆ ನಾಶಗೊಳಿಸಿದೆ: ಮಮತಾ ಬ್ಯಾನರ್ಜಿ ಟೀಕೆ

ಕೋಲ್ಕತ್ತದಲ್ಲಿ ಸುದ್ದಿಗಾರರ ಜೊತೆ ಮಮತಾ ಬ್ಯಾನರ್ಜಿ ಮಾತು 2017ರಲ್ಲಿ ಕೇಂದ್ರ ಬಜೆಟ್‌ ಜೊತೆ...

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ಕೇಳಿದ್ದಕ್ಕೆ ಗುಜರಾತ್‌ ಹೈ ನ್ಯಾಯಾಧೀಶರು `ಮನುಸ್ಮೃತಿ ಓದಿ’ ಎಂದರು!

ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ 7 ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಬಹುದೇ...

ಒಡಿಶಾ | ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ; ತಪ್ಪಿದ ಪ್ರಾಣಹಾನಿ

ಒಡಿಶಾ ರಾಜ್ಯದ ನುವಾಪಾದ ಜಿಲ್ಲೆಯಲ್ಲಿ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಬಾಲಾಸೋರ್‌ನಲ್ಲಿ ತ್ರಿವಳಿ...

ಕೇರಳ | ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ತಂದೆ

ಆರು ವರ್ಷದ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ...