ತಾಳಿ ಕಟ್ಟಿದ ಮೇಲೆ ಸಪ್ತಪದಿ ತುಳಿಯಬೇಕು, ಇಲ್ಲಾಂದ್ರೆ ವಿವಾಹ ಅನೂರ್ಜಿತ: ಅಲಹಾಬಾದ್ ಹೈಕೋರ್ಟ್ ತೀರ್ಪು

Date:

ಹಿಂದೂ ವಿವಾಹ ಕಾನೂನಿನ ಅಡಿಯಲ್ಲಿ ತಾಳಿ ಕಟ್ಟಿದ ನಂತರ ದಂಪತಿ ಸಪ್ತಪದಿ ತುಳಿಯಲೇಬೇಕು. ದಂಪತಿ ಸಪ್ತಪದಿ ತುಳಿಯದ ಹಾಗೂ ಇತರೆ ಆಚರಣೆಗಳು ನಡೆಯದ ಹಿಂದೂ ವಿವಾಹ ಸಿಂಧುವೇ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ತೀರ್ಪು ನೀಡಿದೆ.

- Advertisement -

ತನಗೆ ವಿಚ್ಛೇದನ ನೀಡದೆ ಪತ್ನಿ ಎರಡನೇ ವಿವಾಹ ಮಾಡಿಕೊಂಡಿದ್ದಾರೆ ಎಂದು ಮೊದಲನೇ ಪತಿ ಆರೋಪಿಸಿದ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸ್ಮೃತಿ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್, “ವಿವಾಹಕ್ಕೆ ಸಂಬಂಧಿಸಿದಂತೆ, ಸರಿಯಾದ ವಿಧಿವಿಧಾನಗಳೊಂದಿಗೆ ಮತ್ತು ಸರಿಯಾದ ರೂಪದಲ್ಲಿ ಆಚರಿಸುವುದು ಎಂಬ ಪದದ ಅರ್ಥವು ಶಾಸ್ತ್ರೋಕ್ತವಾಗಿ ಆಚರಿಸುವುದು ಎಂಬುದಾಗಿದೆ. ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸದಿದ್ದರೆ ಅಥವಾ ಸರಿಯಾದ ವಿಧಿವಿಧಾನಗಳು ಮತ್ತು ಸರಿಯಾದ ರೂಪದಲ್ಲಿ ನಡೆಸದಿದ್ದರೆ, ಅದನ್ನು ಶಾಸ್ತ್ರೋಕ್ತವಾಗಿ ನಡೆದಿದೆ ಎಂದು ಹೇಳಲಾಗುವುದಿಲ್ಲ’’ ಎಂದು ತೀರ್ಪು ನೀಡಿದ್ದಾರೆ.

“ಹಿಂದೂ ವಿವಾಹ ಕಾನೂನಿನ ಅಡಿಯಲ್ಲಿ ‘ಸಪ್ತಪದಿ’ ಆಚರಣೆಯು ಮಾನ್ಯವಾದ ವಿವಾಹವನ್ನು ರೂಪಿಸಲು ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಮದುವೆಯು ಮಾನ್ಯವಾದ ಮದುವೆಯಲ್ಲದಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಅದು ಮದುವೆಯಲ್ಲ. ಆದರೆ ಪ್ರಸ್ತುತ ಪ್ರಕರಣದಲ್ಲಿ ಈ ಸಾಕ್ಷ್ಯಗಳ ಕೊರತೆಯಿದೆ’’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಈ ಸುದ್ದಿ ಓದಿದ್ದೀರಾ? 14ನೇ ಏಕದಿನ ವಿಶ್ವಕಪ್‌ ಕ್ರಿಕೆಟ್ ಇಂದಿನಿಂದ ಆರಂಭ: ತಂಡಗಳು, ಪಂದ್ಯಗಳು, ಕ್ರೀಡಾಂಗಣ ಇತ್ಯಾದಿ ಫುಲ್‌ ಡೀಟೇಲ್ಸ್

ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 7ರಲ್ಲಿ ಹಿಂದೂ ಮದುವೆಯನ್ನು ಸಂಪ್ರದಾಯ ಪದ್ಧತಿ ಹಾಗೂ ಆಚರಣೆಗಳಿಗೆ ಅನುಗುಣವಾಗಿ ಒಪ್ಪಿತಗೊಳಿಸಲಾಗುತ್ತದೆ ಎಂದಿದೆ. ಎರಡನೆಯದಾಗಿ, ಏಳು ಹೆಜ್ಜೆಗಳನ್ನು ಇರಿಸಿದ ಬಳಿಕವೇ ಮದುವೆ ಸಂಪೂರ್ಣಗೊಳ್ಳುತ್ತದೆ ಎಂದು ಕೋರ್ಟ್ ಉಲ್ಲೇಖಿಸಿದೆ.

ಮಿರ್ಜಾಪುರ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದ ಪತ್ನಿ ವಿರುದ್ಧ ಪತಿ ನೀಡಿದ ದೂರಿನ ಪ್ರಕರಣದ ವಿಚಾರಣೆ ಹಾಗೂ 2022ರ ಏಪ್ರಿಲ್ 12ರಲ್ಲಿ ಸಮನ್ಸ್ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ. ಸಪ್ತಪದಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವಿಲ್ಲ. ಆದ್ದರಿಂದ, ಮಹಿಳೆಯ ಎರಡನೇ ಮದುವೆಯ ಆರೋಪವು ದೃಢೀಕರಣವಿಲ್ಲದ ಆರೋಪ ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸ್ಮೃತಿ ಸಿಂಗ್ ಮತ್ತು ಸತ್ಯಂ ಸಿಂಗ್ ಮದುವೆ 2017ರಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಆದರೆ ಅವರಿಬ್ಬರ ಸಂಬಂಧದಲ್ಲಿ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ. ಗಂಡನ ಮನೆ ತೊರೆದ ಸ್ಮೃತಿ, ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಬಳಿಕ ಪೊಲೀಸರು ಸತ್ಯಂ ಸಿಂಗ್ ಹಾಗೂ ಆತನ ಮನೆಯವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದ ಸತ್ಯಂ ಸಿಂಗ್, ಪತ್ನಿ ವಿರುದ್ಧ ದ್ವಿಪತಿತ್ವದ ಆರೋಪ ಮಾಡಿದ್ದರು. ಮಿರ್ಜಾಪುರ ಪೊಲೀಸರು ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದರು. ಸ್ಮೃತಿ ವಿರುದ್ಧದ ಆರೋಪ ಸುಳ್ಳು ಎಂದು ಕಂಡುಬಂದಿತ್ತು.

ಬಳಿಕ 2021ರ ಸೆ. 20ರಂದು ದೂರು ಸಲ್ಲಿಸಿದ್ದ ಸತ್ಯಂ, ತನಗ ವಿಚ್ಚೇದನ ನೀಡದೆ ಸ್ಮೃತಿ ಎರಡನೇ ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದರು. ಮಿರ್ಜಾಪುರ ಮ್ಯಾಜಿಸ್ಟ್ರೇಟ್ 2022ರ ಏಪ್ರಿಲ್ 21ರಂದು ಸ್ಮೃತಿಗೆ ಸಮನ್ಸ್ ಜಾರಿಗೊಳಿಸಿದ್ದರು. ಆದೇಶ ಹಾಗೂ ಇಡೀ ಪ್ರಕರಣದ ವಿಚಾರಣೆ ಪ್ರಶ್ನಿಸಿ ಸ್ಮೃತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...