ನಿತೀಶ್ ಕುಮಾರ್ ಮುಂದಿನ ಪ್ರಧಾನಿ? ಬಿಹಾರ ಸಿಎಂ ಕಿಂಗ್‌ಮೇಕರ್ ಎಂದ ನೆಟ್ಟಿಗರು

Date:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ‘ಅಬ್‌ ಕಿ ಬಾರ್ 400 ಪಾರ್’ ಎಂಬ ಹೇಳಿಕೆ ಈಗಾಗಲೇ ಹುಸಿಯಾಗುವ ಎಲ್ಲ ಸಾಧ್ಯತೆಗಳಿರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಲಿದ್ದಾರಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಹಾಗೆಯೇ ನಿತೀಶ್ ಕಿಂಗ್‌ಮೇಕರ್ ಆಗಲಿದ್ದಾರೆ ಎಂದಿದ್ದಾರೆ.

- Advertisement -

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಪ್ರಮುಖ ಕ್ಷಣಗಳಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇತಿಹಾಸವನ್ನು ಹೊಂದಿರುವ ನಿತೀಶ್ ಕುಮಾರ್ ಈಗ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ. ಇಂಡಿಯಾ ಒಕ್ಕೂಟವು 230ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಮ್ಯಾಜಿಕ್ ಫಿಗರ್ 272ರಿಂದ ದೂರವಿದೆ. ಬಿಜೆಪಿಗೆ 272ಕ್ಕೂ ಅಧಿಕ ಸ್ಥಾನ ಬಂದರೂ ಕೂಡಾ ನಿತೀಶ್ ಕುಮಾರ್ ಇಂಡಿಯಾ ಕೂಟ ಸೇರಿದರೆ ಫಲಿತಾಂಶವೇ ಬದಲಾಗುವ ಸಾಧ್ಯತೆಯಿದೆ ಎನ್ನುತ್ತಾರೆ ನೆಟ್ಟಿಗರು.

ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 4,000ಕ್ಕಿಂತ ಹೆಚ್ಚು ಸ್ಥಾನ: ಟ್ರೋಲ್ ಆದ ಬಿಹಾರ ಸಿಎಂ ನಿತೀಶ್ ಕುಮಾರ್

ಸಾಮಾಜಿಕ ಮಾಧ್ಯಮದಲ್ಲಿ ನಿತೀಶ್ ಕುಮಾರ್ ಬಗ್ಗೆ ಸಾಕಷ್ಟು ಮೀಮ್ಸ್‌ಗಳು ಹರಿದಾಡುತ್ತಿದೆ. ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ಮತ್ತೆ ಪಕ್ಷ ಬದಲಾಯಿಸಬಹುದು. ರಾಹುಲ್ ಗಾಂಧಿಯ ಕಾಂಗ್ರೆಸ್‌ ಕೈ ಹಿಡಿಯಬಹುದು, ಹೀಗಾದರೆ ನಿತೀಶ್ ಕುಮಾರ್‌ಗೆ ಪ್ರಧಾನಿ ಹುದ್ದೆ ನೀಡಲಾಗುವುದು ಎಂದು ನೆಟ್ಟಿಗರು ಊಹಿಸಿದ್ದಾರೆ.

“ಬಿಜೆಪಿ ಏಕಾಂಗಿಯಾಗಿ 272 ದಾಟದಿದ್ದರೆ ಎನ್‌ಡಿಎ ಸರ್ಕಾರ ಅಸ್ಥಿರವಾಗಲಿದೆ. ನಿತೀಶ್, ನಾಯ್ಡು ಅವರಂತಹವರನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ಇಂಡಿಯಾ ಒಕ್ಕೂಟವು ‘ನಿತೀಶ್‌ ಜೀ ಬನ್ನಿ ನಿಮ್ಮನ್ನು ನಾವು ಪಿಎಂ ಮಾಡುತ್ತೇವೆ’ ಎಂದು ಹೇಳಬೇಕಾಗುತ್ತದೆ. ಆಗ ನಿತೀಶ್ ಹಿಂದಿರುಗಿ ನೋಡದೆ ಇಂಡಿಯಾ ಒಕ್ಕೂಟ ಸೇರುತ್ತಾರೆ. ಬಹುಶಃ ಈಗಾಗಲೇ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸಭೆ ಸೇರಿರಬಹುದು” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

“ಎನ್‌ಡಿಎ ಸಂಖ್ಯೆಗಳು ಅರ್ಥಹೀನವಾದುದ್ದು, ಬಿಜೆಪಿಗೆ 272 ಬರದಿದ್ದರೆ, ನಿತೀಶ್ ಕುಮಾರ್, ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಅವರಂತಹವರು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ” ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಬ್‌ಗಳಲ್ಲಿ ಮಹಿಳಾ ಸುರಕ್ಷತೆ | ಓಲಾ, ಉಬರ್, ರ‍್ಯಾಪಿಡೊಗೆ ದೆಹಲಿ ಹೈಕೋರ್ಟ್ ನೋಟಿಸ್

ಆ್ಯಪ್ ಆಧಾರಿತ ಕ್ಯಾಬ್‌ ಸೇವೆಗಳಲ್ಲಿ ಮಹಿಳೆಯರ ಸುರಕ್ಷತೆ ಖಚಿತಪಡಿಸಲು ಸಮಗ್ರ ಕ್ರಮ...

ಬಂಗಾಳವನ್ನು BJPಗೆ ಕೊಟ್ಟ ಗ್ಯಾನೇಶ್‌ ಕುಮಾರ್‌ಗೆ ‘ಭಾರತ ರತ್ನ’ ಕೊಡಿ: ಜೆಕೆ ಸಿಎಂ ಒಮರ್ ಅಬ್ದುಲ್ಲಾ

ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿರುವ ಕೇಂದ್ರ ಚುನಾವಣಾ ಆಯೋಗದ (ECI)...

ನಾವು ‘ಇಂಡಿಯಾ’ ಒಕ್ಕೂಟದ ಭಾಗವಲ್ಲ, ಸಭೆಗೆ ಹಾಜರಾಗಲ್ಲ: ಎಎಪಿ ನಾಯಕ ಸಂಜಯ್ ಸಿಂಗ್

ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಸಭೆಯಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)...

SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ...