ದಾವಣಗೆರೆಯಲ್ಲಿ ʼಸಾಹುಕಾರ್ ಕುಟುಂಬʼ ರಾಜಕಾರಣ ಮತ್ತು ಕಾಂಗ್ರೆಸ್‌ ಮುಂದಿರುವ ಸವಾಲುಗಳು

Date:

ದಾವಣಗೆರೆ ಉಪಚುನಾವಣೆ ಶಾಮನೂರು ಕುಟುಂಬದ ಪಾಲಿಗೆ ಮತ್ತೊಂದು ಶಕ್ತಿ ಪ್ರದರ್ಶನದ ವೇದಿಕೆಯಾಗಲಿದೆ. ಪಕ್ಷವನ್ನು ಜಿಲ್ಲೆಯಲ್ಲಿ ಜೀವಂತವಾಗಿಟ್ಟಿರುವ ಕ್ರೆಡಿಟ್ ಅನ್ನು ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಸಲ್ಲಿಸುತ್ತದೆ.‌ ‘ವಂಶಪಾರಂಪರ್ಯ ರಾಜಕಾರಣ’ ಮತ್ತು ‘ಸಮುದಾಯದ ಪ್ರಾತಿನಿಧ್ಯ’ದ ನಡುವಿನ ಸಮತೋಲನ ಕಾಯ್ದುಕೊಳ್ಳಬೇಕಿರುವ ಸವಾಲು ಕಾಂಗ್ರೆಸ್‌ ಮುಂದಿದೆ.


ದಾವಣಗೆರೆಯ ರಾಜಕಾರಣ ಎಂದರೆ ಅದು ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಅರ್ಥ. ದಶಕಗಳಿಂದ ಈ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ನಿಯಂತ್ರಿಸುತ್ತಾ ಬಂದಿರುವ ಈ ಕುಟುಂಬದ ಪ್ರಭಾವ, ಈ ಬಾರಿಯ ಉಪಚುನಾವಣೆಯಲ್ಲೂ ಕೆಲಸ ಮಾಡಲಿದೆ ಎನ್ನುವುದು ಕಾಂಗ್ರೆಸ್‌ನ ನಂಬಿಕೆ. ಅದರೆ, ವಾಸ್ತವದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷದ ಮೇಲೆ ಕೊಂಚ ಮುನಿಸಿಕೊಂಡಿದ್ದಾರೆ ಎನ್ನುವುದು ಸತ್ಯ. ಆದಾಗ್ಯೂ, ಅಲ್ಪಸಂಖ್ಯಾತರ ಮನವೊಲಿಸುವ ಕೆಲಸ ಮಾಡಿದ್ದೇವೆ ಎನ್ನುವುದು ಕಾಂಗ್ರೆಸ್‌ ಸಮರ್ಥನೆ. ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ವಂಚನೆ ಮಾಡಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ಅಲ್ಪಸಂಖ್ಯಾತರ ಮುಂದಿರುವ ಆಯ್ಕೆ ಕಾಂಗ್ರೆಸ್‌ ಒಂದೇ ಎನ್ನುವುದು ಕಾಂಗ್ರೆಸ್‌ ವಿಶ್ವಾಸದಲ್ಲಿರುವುದಕ್ಕೆ ಮೂಲ ಕಾರಣ.

- Advertisement -

ದಾವಣಗೆರೆಯನ್ನು ಕರ್ನಾಟಕದ ರಾಜಕೀಯ ನಕ್ಷೆಯಲ್ಲಿ ಎದ್ದು ಕಾಣುವಂತೆ ಮಾಡಿದ್ದು ಶಾಮನೂರು ಶಿವಶಂಕರಪ್ಪನವರ ಕುಟುಂಬ. ಕೇವಲ ರಾಜಕೀಯವಲ್ಲದೆ ಶೈಕ್ಷಣಿಕ (ಬಾಪೂಜಿ ಸಂಸ್ಥೆಗಳು) ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಈ ಕುಟುಂಬ ಹಿಡಿತ ಸಾಧಿಸಿದೆ. ಹಾಗಾಗಿ ಪಕ್ಷದ ಭದ್ರಕೋಟೆ ಎನ್ನುವುದಕ್ಕಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿ ಈವರೆಗೆ ಉಳಿದಿದೆ. ಶಾಮನೂರು ಕುಟುಂಬ ʼಸಾಹುಕಾರ್‌ ಕುಟುಂಬʼ ಎಂದೇ ಜನರಲ್ಲಿ ಇನ್ನೂ ಹಿಡಿತ ಇಟ್ಟುಕೊಂಡಿದೆ. ಆದರೆ, ವಿಶ್ವಾಸವನ್ನು ಮೊದಲಿನಂತೆಯೇ ಈಗಲೂ ಉಳಿಸಿಕೊಂಡಿದೆಯೇ ಕೇಳಿದರೆ, ಬಹುಶಃ ಅದಕ್ಕೆ ಸ್ಪಷ್ಟ ಉತ್ತರ ಸಿಗಲಿಕ್ಕಿಲ್ಲ.

ಶಾಮನೂರು ಕುಟುಂಬ ಮತ್ತು ಕಾಂಗ್ರೆಸ್‌ :

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು, ಶಾಮನೂರು ಎಂದರೆ ಕಾಂಗ್ರೆಸ್ ಎನ್ನುವಷ್ಟರ ಮಟ್ಟಿಗೆ ಈ ಸಂಬಂಧ ಬೆಳೆದಿದೆ. ಶಾಮನೂರು ಶಿವಶಂಕರಪ್ಪ ಅವರ ಪ್ರಭಾವ ಕೇವಲ ಜಿಲ್ಲೆಗೆ ಸೀಮಿತವಲ್ಲ, ರಾಜ್ಯದ ಲಿಂಗಾಯತ ಸಮುದಾಯದ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಿತ್ತು ಎನ್ನುವುದು ಕೂಡ ಇಲ್ಲಿ ಪ್ರಮುಖಾಂಶ. ಇನ್ನು, ತಂದೆಯ ಉತ್ತರಾಧಿಕಾರಿಯಾಗಿ, ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ್, ಜಿಲ್ಲೆಯ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ ಎನ್ನುವುದನ್ನು ರಾಜಕೀಯವಾಗಿ ತಮ್ಮ ʼಶಕ್ತಿ, ಸಾಮರ್ಥ್ಯʼ ಬಳಸಿಕೊಂಡು ಬಿಂಬಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ‌ ಮಲ್ಲಿಕಾರ್ಜುನ್‌ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ಈ ಕುಟುಂಬದ ಹಿಡಿತ ಮತ್ತಷ್ಟು ಗಟ್ಟಿಯಾಗಿದೆ. ಹಾಗಾಗಿ ಕುಟುಂಬ ಗೆದ್ದಿರುವುದಕ್ಕೆ ಕಾಂಗ್ರೆಸ್‌ ಕಾರಣ, ಕಾಂಗ್ರೆಸ್‌ ಗೆದ್ದಿರುವುದಕ್ಕೆ ಕುಟುಂಬ ಕಾರಣ ಎನ್ನುವ ವಾತಾವರಣವಿದೆ.

ಉಪ ಚುನಾವಣೆ ಅಖಾಡ :

ದಾಣಗೆರೆ ಮಟ್ಟಿಗೆ ಚುನಾವಣೆ ಎದುರಾದಾಗಲೆಲ್ಲಾ ಇಡೀ ರಾಜ್ಯದ ಕಣ್ಣು ಶಾಮನೂರು ಕುಟುಂಬದ ಮೇಲಿರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಜಿಲ್ಲೆಯ ಟಿಕೆಟ್ ಹಂಚಿಕೆಯ ಅಂತಿಮ ತೀರ್ಮಾನ ಬಹುತೇಕ ಶಾಮನೂರು ಅವರ ಇಚ್ಛೆಯಂತೆಯೇ ನಡೆಯುತ್ತಿತ್ತು. ಈಗ ಅವರ ನಿಧನದ ಬಳಿಕ ಶಾಮನೂರು ಕುಟುಂಬದ ಆಶಯದಂತೆಯೇ ನಡೆದಿದೆ.
 
ಉಪ ಚುನಾವಣೆಗಳಲ್ಲಿ ಶಾಮನೂರು ಕುಟುಂಬದ “ಬಾಪೂಜಿ ಟೀಮ್” ಮತ್ತು ಅವರ ವೈಯಕ್ತಿಕ ಅನುದಾನಗಳು, ಕಾರ್ಯಕರ್ತರ ಪಡೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ ಎನ್ನುವುದನ್ನು ಕಾಂಗ್ರೆಸ್‌ ನಂಬಿದೆ. ಉಪಚುನಾವಣೆ ಕೇವಲ ಒಂದು ಕ್ಷೇತ್ರದ ಗೆಲುವಲ್ಲ, ಬದಲಿಗೆ ಶಾಮನೂರು ಕುಟುಂಬದ ನಾಯಕತ್ವಕ್ಕೆ ಜಿಲ್ಲೆಯ ಜನರು ನೀಡುವ ಮನ್ನಣೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕುಟುಂಬದ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಅವಕಾಶ ಕೊಡುವ ಮನಸ್ಸಿಲ್ಲದಿದ್ದರೂ, ಶಾಮನೂರು ಕುಟುಂಬ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕಾರಣಕ್ಕೆ ಕಾಂಗ್ರೆಸ್‌ ಮೇಲೆ ಬಂದಿದೆ ಎಂದು ನೆಪ ಹೇಳಿ ಕುಟುಂಬವನ್ನೇ ಸದಾ ಪೊರೆಯುತ್ತಾ ಬರುವುದು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಂಪ್ರಾದಾಯವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಹೆಚ್ಚಿದೆ (ಸುಮಾರು 70,000ಕ್ಕೂ ಹೆಚ್ಚು). ಹೀಗಿದ್ದರೂ ಕಾಂಗ್ರೆಸ್ ಪ್ರತಿ ಬಾರಿಯೂ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್ ನೀಡಿತ್ತು. ಆದರೆ. ಈಗ “ನಮ್ಮ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವ ಕಾಂಗ್ರೆಸ್, ನಮ್ಮ ಸಮುದಾಯದ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ” ಎಂಬುದು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನ.

ಕಾಂಗ್ರೆಸ್‌ನ ಗೆಲುವಿನ ಮಾನದಂಡ :

“ಯಾರು ಗೆಲ್ಲುತ್ತಾರೋ ಅವರಿಗೆ ಟಿಕೆಟ್” ಎನ್ನುವುದು ಕಾಂಗ್ರೆಸ್ ವಾದ. ಶಾಮನೂರು ಶಿವಶಂಕರಪ್ಪ ಅವರ ಜನಪ್ರಿಯತೆ ಮತ್ತು ಹಣದ ಸಂಪನ್ಮೂಲಗಳ ಮುಂದೆ ಬೇರೆ ಅಭ್ಯರ್ಥಿಗಳು ಗೆಲ್ಲುವುದು ಕಷ್ಟ ಎಂಬುದು ಕಾಂಗ್ರೆಸ್ ಪಕ್ಷದ  ಲೆಕ್ಕಾಚಾರ. ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಶಾಮನೂರು ಕುಟುಂಬ ನೀಡುತ್ತಾ ಬಂದಿರುವ ಬೆಂಬಲವೂ ಅವರ ಗೆಲುವಿಗೆ ಪೂರಕವಾಗಿದೆ.ಇವೆಲ್ಲಾ ಮತ್ತೆ ಮತ್ತೆ ಚುನಾವಣಾ ಸಂದರ್ಭದಲ್ಲಿ ಮುಂದೆ ತಂದು, ರಾಜಕೀಯವಾಗಿ ತನ್ನ ಹಿಡಿತವನ್ನು ಕುಟುಂಬ ಬಿಗಿಗೊಳಿಸುತ್ತಲೇ ಬಂದಿದೆ. ಬಂಡಾಯ ಎದ್ದ ನಾಯಕರನ್ನು ಕೊನೆಯ ಹಂತದಲ್ಲಿ ತನ್ನ ಅಷ್ಟೂ ʼಸಾಮರ್ಥ್ಯʼವನ್ನು ವ್ಯಯಿಸಿ ಬಾಯಿ ಮುಚ್ಚಿಸುವ ಕೆಲಸ ಕುಟುಂಬ ಸದಾ ಮಾಡುತ್ತಲೇ ಬಂದಿದೆ. ಈ ಬಾರಿಯ ಉಪ ಚುನಾವಣೆಯಲ್ಲೂ ಆ ಪ್ರಯತ್ನವನ್ನು ಕುಟುಂಬ ಯಶಸ್ವಿಯಾಗಿ ಮಾಡಿ ಪೂರೈಸಿದೆ.

ಇದನ್ನೂ ಓದಿ : ಐಶಾರಾಮಿ ಬದುಕಿಗಾಗಿ ಸಾಲದ ಮೊರೆ; ಇಎಂಐ ಕಟ್ಟಲಾಗದೇ ಯುವಜನರ ಪರದಾಟ: ಸಮೀಕ್ಷೆ

ಈ ಉಪ ಚುನಾವಣೆಯಂತೂ ‘ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ’ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ‌ ಎಸ್‌ಡಿಪಿಐ ಅಂತಹ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಆದರೆ, ಕಾಂಗ್ರೆಸ್‌ ಪಕ್ಷವನ್ನು ಮುಸ್ಲಿಮರು ಬಿಟ್ಟುಕೊಡಲ್ಲ ಎನ್ನುವ ಭಂಡ ಧೈರ್ಯದಲ್ಲಿ ರಾಜಕೀಯ ಮಾಡುತ್ತಲೇ ಬಂದಿದೆ. ಈ ಕ್ಷೇತ್ರದಲ್ಲಿ ಮತ್ತೆ ಅದನ್ನು ಸಾಬೀತು ಮಾಡಿದೆ.

ಸವಾಲು ಮತ್ತು ರಾಜಕೀಯ ಸಮೀಕರಣ

ಕಾಂಗ್ರೆಸ್ ಪಕ್ಷದೊಳಗೆ ಇತರ ಪ್ರಭಾವಿ ನಾಯಕರು ಬೆಳೆಯಲು ಶಾಮನೂರು ಕುಟುಂಬ ಬಿಟ್ಟುಕೊಟ್ಟಿಲ್ಲ. ಕ್ಷೇತ್ರದಲ್ಲಿ ಶಾಮನೂರು ಕುಟುಂಬವೇ ʼಸುಪ್ರೀಂʼ ಎನ್ನುವ ಧೋರಣೆಯನ್ನು ತೋರಿಸುತ್ತಲೇ ಬಂದಿದೆ. ಇದು ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸುವುದಕ್ಕೆ ಅಡ್ಡಿಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನು, ದಾವಣಗೆರೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ಸದಾ ಪ್ರಯತ್ನಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ. ಈ ಅನಿವಾರ್ಯ ಸ್ಥಿತಿ ಬಂದು ತಲುಪುವುದಕ್ಕೂ ಕೂಡ ʼಕಾಂಗ್ರೆಸ್‌ನ ನೀತಿ ಮತ್ತು ಶಾಮನೂರು ಕುಟುಂಬʼವೇ ಮೂಲ ಕಾರಣ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಸ್.ಎಸ್. ಶಿವಶಂಕರಪ್ಪನವರು ಸಚಿವರಾಗದಿದ್ದರೂ, ಅವರ ಮಾತಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮಟ್ಟದಲ್ಲಿ ದೊಡ್ಡ ಪ್ರಭಾವ ಬೆಳೆಸಿಕೊಂಡಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಈ ಕುಟುಂಬದ ಬೆಂಬಲ ಅತಿ ಮುಖ್ಯ. ದಾವಣಗೆರೆ ಜಿಲ್ಲೆಯ ಯಾವುದೇ ರಾಜಕೀಯ ಬದಲಾವಣೆ ನೇರವಾಗಿ ಬೆಂಗಳೂರಿನ ಹೈಕಮಾಂಡ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಕಾಂಗ್ರೆಸ್‌ಗೆ ಕೂಡ ಕುಟುಂಬವನ್ನು ಎದುರು ಹಾಕಿಕೊಳ್ಳುವುದು ಸವಾಲಾಗಿದೆ.

ಒಟ್ಟಿನಲ್ಲಿ, ದಾವಣಗೆರೆ ಉಪಚುನಾವಣೆ ಶಾಮನೂರು ಕುಟುಂಬದ ಪಾಲಿಗೆ ಮತ್ತೊಂದು ಶಕ್ತಿ ಪ್ರದರ್ಶನದ ವೇದಿಕೆಯಾಗಲಿದೆ. ಪಕ್ಷವನ್ನು ಜಿಲ್ಲೆಯಲ್ಲಿ ಜೀವಂತವಾಗಿಟ್ಟಿರುವ ಕ್ರೆಡಿಟ್ ಅನ್ನು ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಹೊಸ ಪೀಳಿಗೆಯ ನಾಯಕತ್ವಕ್ಕೆ (ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್‌ ಶಾಮನೂರು) ಸಿದ್ಧತೆ ಮಾಡಿಕೊಳ್ಳುತ್ತಿರುವ ಶಾಮನೂರು ಕುಟುಂಬ, ತನ್ನ ಪಾರುಪತ್ಯವನ್ನು ಮುಂದುವರಿಸಲು ಸಿದ್ಧವಾಗಿದೆ. ಇದೇ ಅತಿದೊಡ್ಡ ಸವಾಲಾಗಿ ಕಾಂಗ್ರೆಸ್‌ಗೆ ಎದುರಾಗಿದೆ. ‘ವಂಶಪಾರಂಪರ್ಯ ರಾಜಕಾರಣ’ ಮತ್ತು ‘ಸಮುದಾಯದ ಪ್ರಾತಿನಿಧ್ಯ’ದ ನಡುವಿನ ಸಮತೋಲನ ಕಾಯ್ದುಕೊಳ್ಳಬೇಕಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಬೆನ್ನೆಲುಬಾಗಿದ್ದರೂ, ಅವರಿಗೆ ನಾಯಕತ್ವದ ಅವಕಾಶ ಸಿಗುತ್ತಿಲ್ಲ ಎಂಬ ಭಾವನೆ ಕ್ಷೇತ್ರದಲ್ಲಿ ದಟ್ಟವಾಗಿದೆ. ಹಾಗಾಗಿ ಇವನ್ನೆಲ್ಲಾ ಸರಿದೂಗಿಸಿಕೊಂಡು ಮುಂದೆ ಸಾಗುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೈಬೀರಿಯಾ ಗುಹೆಯಲ್ಲಿ ಹಿಮಯುಗದ ರಹಸ್ಯ ಬಯಲು: 4 ಲಕ್ಷ ವರ್ಷಗಳ ಹಿಂದಿನ ಅಜ್ಞಾತ ಜೀವಿ ಪತ್ತೆ!

ದಕ್ಷಿಣ ಸೈಬೀರಿಯಾದ ಗುಹೆಗಳಲ್ಲಿ ದೊರೆತ ಸಾಮಾನ್ಯ ಮೂಳೆಯ ತುಣುಕುಗಳು ಇದೀಗ ವಿಕಾಸನದ...

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...