ಮಂಡ್ಯ | ಪ್ರಮುಖರ ಸಭೆ ಕರೆದು ಬೆಂಬಲ ಕೋರಿದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಮಧುಚಂದನ್

Date:

  • ಒಂದು ಸಲ ಅವಕಾಶ ನೀಡುವಂತೆ ಬೆಂಬಲ ಕೋರಿದ ಅಭ್ಯರ್ಥಿ
  • ಸಭೆಯಲ್ಲಿ ಭಾಗಿಯಾದ ಸರ್ವೋದಯ ಕರ್ನಾಟಕ ಪಕ್ಷದ ಪ್ರಮುಖರು

ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ತಾತ ಒಳ್ಳೆಯವನೆಂದು ಮೊಮ್ಮಕ್ಕಳಿಗೆ ವೋಟ್ ಹಾಕುವುದು, ಗಂಡ ಒಳ್ಳೆಯವನೆಂದು ಹೆಂಡತಿಗೆ ವೋಟ್ ಹಾಕುವುದು, ನನ್ನ ಜಾತಿಯವನೆಂದು ಮತ ಹಾಕುವುದು ಮೊದಲು ಬದಲಾಗಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷ ಅಭ್ಯರ್ಥಿ ಮಧುಚಂದನ್ ಪ್ರತಿಪಾದಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್ ಸಿ ಮಧುಚಂದನ್ ಹುಲಿವಾನದ ಆರ್ಗ್ಯಾನಿಕ್ ಫಾರ್ಮ್ ನಲ್ಲಿ ಮಂಡ್ಯ ಜಿಲ್ಲೆ ಕೆರಗೋಡು ಹೋಬಳಿ ವ್ಯಾಪ್ತಿಯ ಬೂತ್ ಕಮಿಟಿ ಪ್ರಮುಖರ ಸಭೆ ನಡೆಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

“ಯಾವ ವ್ಯಕ್ತಿಗೆ ರೈತರ, ಕೂಲಿ ಕಾರ್ಮಿಕರ, ವಿದ್ಯಾವಂತ ಪದವೀಧರರ, ಹಾಲು ಉತ್ಪಾದಕರ ಸಮಸ್ಯೆಗಳು ತಳಮಟ್ಟದಿಂದ ಅರಿವಿರುತ್ತದೆಯೋ ಅಂಥವರನ್ನು ಗುರುತಿಸಿ ಮತ ಹಾಕಬೇಕು. ನಾನು ಮಧ್ಯಮ ವರ್ಗದ ಜನರ ಬವಣೆಗಳನ್ನು ಅರಿತಿದ್ದೇನೆ. ಹಾಗಾಗಿ ಈ ಬಾರಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ನನಗೆ ನೀವೆಲ್ಲರೂ ಬೆಂಬಲ ಅತ್ಯಗತ್ಯೆ” ಎಂದು ಮನವಿ ಮಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರೈತಮುಖಂಡರಾದ ಉಪ್ಪರಕನಹಳ್ಳಿ ಕೆಂಪಮ್ಮ ಮಾತನಾಡಿ, “ರೈತ ತನ್ನ ಹೊಲಗದ್ದೆಗಳಿಗೆ ನೀರು ಹಾಯಿಸಲು ಸರಿಯಾದ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ವಿದ್ಯಾವಂತರಿಗೆ ಕೆಲಸ ಸಿಗುತ್ತಿಲ್ಲ, ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಕೃಷಿ ಪರಿಕರಗಳ ಬೆಲೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಆದರೆ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮಾತ್ರ ಸಿಗುತ್ತಿಲ್ಲ. ಇನ್ನಾದರೂ ಹಣ ಹೆಂಡಕ್ಕೆ ತಮ್ಮ ಮತ ಮಾರಿಕೊಳ್ಳದೆ ಉತ್ತಮ ವ್ಯಕ್ತಿಯನ್ನು ಗೆಲ್ಲಿಸಲು ಕೆಲಸ ಮಾಡೋಣ” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? : ತಲಕಾಡಿನಲ್ಲಿ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ; ಇಲ್ಲದ ಮೂಲ ಸೌಕರ್ಯಗಳು

ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕೆರೆ ಪ್ರಸನ್ನ ಗೌಡ ಮಾತನಾಡಿ, “ಚುನಾವಣೆಗಳು ಬಂತೆಂದರೆ ಕುರುಡು ಕಾಂಚಾಣ ತನ್ನ ರುದ್ರ ನರ್ತನವನ್ನು ಮಾಡುತ್ತದೆ. ಕೆಟ್ಟ ಕಾಂಚಣಾದಾಸಗೆ ಬಲಿಯಾಗಿ ನಮ್ಮ ಭವಿಷ್ಯ ಯುವ ಪೀಳಿಗೆಯನ್ನು ಅಂಧಕಾರಕ್ಕೆ ತಳ್ಳುವ ಕೆಲಸ ಮಾಡದಿರೋಣ. ಉತ್ತಮರನ್ನು ಸಮಾಜದ ಸಮಸ್ಯೆಗಳ ಬಗ್ಗೆ ಅರಿವಿರುವ ಹೋರಾಟದ ಹಿನ್ನೆಲೆ ಹೊಂದಿರುವ ಮಧುಚಂದ್ರನ್ ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಜನತೆ ಈ ಬಾರಿ ವಿಧಾನಸಭೆಗೆ ಕಳಿಸಿ ಕೊಡಬೇಕು” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಮುಖಂಡರಾದ ಹುಲಿವಾನ ಜಗದೀಶ್, ರವಿ, ಕೆ ಗೌಡಗೆರೆ ಗ್ರಾಮದ ರಂಗ ಶೆಟ್ರು, ಮಂಜುನಾಥ್, ಮಾರಗೌಡನಹಳ್ಳಿ ನಿಂಗೇಗೌಡ್ರು, ಕಾಂತರಾಜು ಮರ್ಲಿಂಗದೊಡ್ಡಿ ಲಕ್ಷ್ಮಿ ನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಅಖಾಡದಲ್ಲಿ ಒಂದಿಷ್ಟು ಮಾತು – ದೇವನೂರ ಮಹಾದೇವ

ನಾನೀಗ ಹಿಂದಿನದು ಮಾತಾಡಲೋ ಅಥವಾ ಈಗಲದು ಮಾತಾಡಲೋ ಗೊಂದಲದಲ್ಲಿದ್ದೇನೆ. ಹಿಂದಿನದನ್ನು ಹೇಳದಿದ್ದರೆ...

ವಿಜಯಪುರ | ಲೋಕಸಭಾ ಚುನಾವಣೆ; ಅಂತಿಮ ಕಣದಲ್ಲಿ ಎಂಟು ಮಂದಿ ಅಭ್ಯರ್ಥಿಗಳು

ಲೋಕಸಭಾ ಚುನಾವಣೆಗೆ ವಿಜಯಪುರ ಕ್ಷೇತ್ರದಿಂದ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ...

’70 ಕೋಟಿ ಭಾರತೀಯರಿಗಿಂತ ಅಧಿಕ ಸಂಪತ್ತು 21 ಬಿಲಿಯನೇರ್‌ಗಳಲ್ಲಿದೆ ಅನ್ನೋದನ್ನ ಮೋದಿ ಹೇಳಲ್ಲ’

ದ್ವೇ‍ಷ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ...

ದಾವಣಗೆರೆ | ಸ್ಲಂ ಜನರ ಮತ ಜಾಗೃತಿ ಸಮಾವೇಶ; ಸ್ಲಂ ಜನರ ಪ್ರಣಾಳಿಕೆ-2024 ಬಿಡುಗಡೆ

ದೇಶದ ರಕ್ಷಣೆ, ಸಾರ್ವಭೌಮತ್ವದ ಸಂವಿಧಾನದ ರಕ್ಷಣೆ ಮಾಡುವ ಅಭ್ಯರ್ಥಿಗೆ ನಾವು ಮತ...