- ವರುಣಾ ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ಸಿದ್ದರಾಮಯ್ಯ
- ಖಾಸಗಿ ಕಾರಿನಲ್ಲಿ ಪ್ರಚಾರಕ್ಕೆ ತೆರಳಿದ ವಿಪಕ್ಷ ನಾಯಕ
ಮೈಸೂರು ಪ್ರವಾಸದಲ್ಲಿರುವ ಮಾಜಿ ಮುಖ್ಯಮಂಥ್ರಿ, ವಿಪಕ್ಷ ನಾಯಕ ಸಿದ್ದರಾಯ್ಯಗೆ ಚುನಾವಣೆ ನೀರಿ ಸಂಹಿತೆಯ ಬಿಸಿ ತಟ್ಟಿದೆ.
ವರುಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿದ್ದ ಸಿದ್ದರಾಮಯ್ಯ ಚುನಾವಣಾ ನೀತಿ ಸಂಹಿತಿ ಘೋಷಣೆಯಾಗುತ್ತಿದ್ದಂತೆ, ಸರ್ಕಾರಿ ವಾಹನ ಬಿಟ್ಟು ಬೆಂಬಲಿಗರ ಖಾಸಗಿ ವಾಹನದಲ್ಲಿ ಮುಂದಿನ ಪ್ರಚಾರ ಕಾರ್ಯಕ್ಕೆ ತೆರಳಿದರು.
ಈ ವೇಳೆ ಅವರು ತಮ್ಮ ಬೆಂಗಾವಲು ವಾಹನ ಹಾಗೂ ಬೆಂಗಾವಲು ಸಿಬ್ಬಂದಿಗಳನ್ನೂ ವಾಪಾಸ್ ಕಳುಹಿಸಿಕೊಟ್ಟರು. ಜೊತೆಗೆ ಕಾರಿನಲ್ಲಿದ್ದ ತಮ್ಮ ವಸ್ತುಗಳನ್ನು ಖಾಸಗಿ ವಾಹನಕ್ಕೆ ಶಿಫ್ಟ್ ಮಾಡಿಸಿದರು.
ಈ ಸುದ್ದಿ ಓದಿದ್ದೀರಾ? : ಚುನಾವಣಾ ದಿನಾಂಕ ಪ್ರಕಟ ಹಿನ್ನೆಲೆ ಸಿಎಂ ಬೊಮ್ಮಾಯಿ ಸರ್ಕಾರಿ...
ಸಿದ್ದರಾಮಯ್ಯ ಮಾದರಿಯಲ್ಲೇ ಸರ್ಕಾರಿ ಸೌಲಭ್ಯ ಪಡೆದ ಇತರ ರಾಜಕೀಯ ಪ್ರಮುಖರೂ ತಮ್ಮ ತಮ್ಮ ವಾಹನಗಳನ್ನು ಸರ್ಕಾರದ ಸುಪರ್ದಿಗೆ ವಹಿಸಿದರು.