- ಎರಡು ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ
- ವರುಣಾ ಕ್ಷೇತ್ರದಿಂದಲೂ ಕಣಕ್ಕಿಳಿಯಲಿರುವ ವಿಪಕ್ಷ ನಾಯಕ
ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧಾ ಕ್ಷೇತ್ರದ ಬಗ್ಗೆ ಎದ್ದಿದ್ದ ಕುತೂಹಲಗಳಿಗೆ ಇದೀಗ ತೆರೆಬಿದ್ದಿದೆ.
ಈ ಕುರಿತು ಮಾಹಿತಿ ನೀಡಿರುವ ವರುಣಾ ಕ್ಷೇತ್ರದ ಶಾಸಕ, ಸಿದ್ದರಾಮಯ್ಯ ಪುತ್ರ ಯತೀಂದ್ರ, ಅಪ್ಪ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವ ಅವರು ಸಿದ್ದರಾಮಯ್ಯ ಕೋಲಾರ ಹಾಗೂ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಕೈ ಹೈಕಮಾಂಡ್ ಕೋಲಾರಕ್ಕಿಂತ ವರುಣಾ ಕ್ಷೇತ್ರವೇ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಅಪ್ಪ ಕೋಲಾರದಲ್ಲಿ ನಿಲ್ಲುವ ನಿರ್ಧಾರ ಮಾಡಿದ್ದರು. ಈಗ ವರುಣಾಗೆ ಬಂದರೆ ಕೋಲಾರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಈ ಕಾರಣದಿಂದ ಅಲ್ಲೂ ಅವರು ಸ್ಪರ್ಧಿಸಲಿದ್ದಾರೆ ಎಂದು ಯತೀಂದ್ರ ಹೇಳಿದರು.
ನಾನು ಕೂಡ ಈ ಮೊದಲು ವರುಣಾದಲ್ಲೇ ನಿಲ್ಲಿ ಎಂದಿದ್ದೆ. ಸಿದ್ದರಾಮಯ್ಯ ಮಾಸ್ ಲೀಡರ್ ಅವರು ಎಲ್ಲೇ ನಿಂತರೂ ಗೆಲ್ಲುತ್ತಾರೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.