ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೃಹತ್ ಸುಧಾರಣೆ: ಮೂರು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿದ ಸರ್ಕಾರ!

Date:

ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಆಧುನಿಕಗೊಳಿಸಲು, ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳನ್ನು ಇನ್ನಷ್ಟು ಸಶಕ್ತಗೊಳಿಸಲು ಹಾಗೂ ಇಲಾಖೆಯಲ್ಲಿ ಭವಿಷ್ಯಮುಖಿ ಬದಲಾವಣೆಗಳನ್ನು ತರಲು ಕರ್ನಾಟಕ ಸರ್ಕಾರ ಗಮನಾರ್ಹ ಹೆಜ್ಜೆ ಇಟ್ಟಿದೆ. ನಾಗರಿಕ ಸೇವೆಗಳು, ಮೂಲಸೌಕರ್ಯ, ಸೈಬರ್ ಭದ್ರತೆ ಹಾಗೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರುವ ಉದ್ದೇಶದಿಂದ ಮೂರು ಪ್ರತ್ಯೇಕ ತಜ್ಞರ ಸಮಿತಿಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಖರ್ಗೆ, “ವಿವಿಧ ಹಂತದ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಂವಾದ ನಡೆಸಲಾಗಿದೆ. ಗೃಹ ಇಲಾಖೆಯ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಾಮರ್ಶೆ ಮಾಡಲಾಗಿದೆ. ಇದೀಗ, ಇಲಾಖೆಗೆ ಅತ್ಯಂತ ಸ್ಪಷ್ಟ ಮತ್ತು ಕ್ರಿಯಾತ್ಮಕ ಮಾರ್ಗಸೂಚಿಯನ್ನು ರೂಪಿಸಲು ಈ ಮೂರು ತಜ್ಞರ ಸಮಿತಿಗಳನ್ನು ಏಕಕಾಲದಲ್ಲಿ ಕಾರ್ಯನಿರ್ವಹಿಸುವಂತೆ ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ನಿವೃತ್ತ ಡಿಜಿ-ಐಜಿಪಿ ಕೆ.ಆರ್. ದತ್ತಾ ಅವರ ನೇತೃತ್ವದಲ್ಲಿ ‘ಪೊಲೀಸ್ ಸೇವಾ ಸುಧಾರಣಾ ಸಮಿತಿ’ಯನ್ನು ರಚಿಸಲಾಗಿದೆ. ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವಿನ ಸಂವಹನ ಮತ್ತು ಅನುಭವಗಳನ್ನು ಉತ್ತಮಪಡಿಸುವುದು ಈ ಸಮಿತಿಯ ಪ್ರಮುಖ ಕಾರ್ಯವಾಗಿದೆ. ಠಾಣೆಗಳಲ್ಲಿ ಎಫ್‌ಐಆರ್ ನೋಂದಣಿ ಪ್ರಕ್ರಿಯೆ, ಸಂಚಾರ ನಿಯಂತ್ರಣ, ಸೈಬರ್ ಅಪರಾಧಗಳ ನಿರ್ವಹಣೆ ಹಾಗೂ ಆನ್‌ಲೈನ್ ನಾಗರಿಕ ಸೇವೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಈ ಸಮಿತಿ ಪರಾಮರ್ಶಿಸಲಿದೆ. ಇದರೊಂದಿಗೆ ಇಲಾಖೆಯ ಆಂತರಿಕ ಕಾರ್ಯವಿಧಾನಗಳು, ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳು, ಪೊಲೀಸ್ ಠಾಣೆಗಳ ಮೂಲಸೌಕರ್ಯ, ಅಗತ್ಯವಿರುವ ಮಾನವಸಂಪನ್ಮೂಲ, ಸಿಬ್ಬಂದಿಗೆ ತರಬೇತಿ, ಬೀಟ್ ಪೆಟ್ರೋಲಿಂಗ್ ಹಾಗೂ ಸಾರ್ವಜನಿಕರ ಸಹಭಾಗಿತ್ವವನ್ನು ಇದು ತನಿಖೆ ಮಾಡಲಿದೆ. ಅಷ್ಟೇ ಅಲ್ಲದೆ, ಪೊಲೀಸ್ ಸೇವೆಗಳಿಗೆ ಸ್ಪಷ್ಟ ಮಾನದಂಡಗಳು, ಕಾರ್ಯಕ್ಷಮತೆಯ ಸೂಚ್ಯಂಕಗಳು (KPI) ಮತ್ತು ‘ನಾಗರಿಕ ಸನ್ನದು’ (Citizen Charter) ಅನ್ನು ಸಮಿತಿ ಶಿಫಾರಸು ಮಾಡಲಿದೆ” ಎಂದು ಅವರು ತಿಳಿಸಿದ್ದಾರೆ.

“ನಿವೃತ್ತ ಡಿಜಿಪಿ ಎಂ.ಎನ್. ರೆಡ್ಡಿ ನೇತೃತ್ವದಲ್ಲಿ ‘ಪೊಲೀಸ್ ಆಧುನಿಕೀಕರಣ ಸಮಿತಿ’ ರಚಿಸಲಾಗಿದ್ದು, ಇದು ಇಲಾಖೆಯನ್ನು ತಾಂತ್ರಿಕವಾಗಿ ಮತ್ತು ಮೂಲಸೌಕರ್ಯದ ರೀತಿಯಲ್ಲಿ ಸಜ್ಜುಗೊಳಿಸುವತ್ತ ಗಮನಹರಿಸಲಿದೆ. ತುರ್ತು ಸ್ಪಂದನಾ ಸಹಾಯವಾಣಿ ‘112’ ಸೇವೆಗಳು, ಪೊಲೀಸ್ ಕಂಟ್ರೋಲ್ ರೂಮ್‌ಗಳು, ವಿಧಿವಿಜ್ಞಾನ ವಿಭಾಗದ ಸಾಮರ್ಥ್ಯ, ಸೈಬರ್ ದೂರುಗಳ ನಿರ್ವಹಣಾ ಸಾಮರ್ಥ್ಯ, ಕೃತಕ ಬುದ್ಧಿಮತ್ತೆ (AI) ಬಳಕೆ, ಇಲಾಖೆಯ ಗಣಕೀಕರಣ, ಸಂವಹನ ವ್ಯವಸ್ಥೆಗಳು, ವಾಹನಗಳ ಸೌಕರ್ಯ, ತರಬೇತಿ ಕೇಂದ್ರಗಳ ಮೂಲಸೌಕರ್ಯ ಹಾಗೂ ಪೊಲೀಸ್ ಸಿಬ್ಬಂದಿಯ ವಸತಿ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳ ಬಗ್ಗೆ ಈ ಸಮಿತಿ ಕೆಲಸ ಮಾಡಲಿದೆ. ಇಡೀ ಇಲಾಖೆಯನ್ನು ಹಂತ ಹಂತವಾಗಿ ಆಧುನಿಕಗೊಳಿಸಲು ಬೇಕಾದ ಸಮಗ್ರ ಯೋಜನೆಯನ್ನು ಇದು ಸಿದ್ಧಪಡಿಸಲಿದೆ” ಎಂದು ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

“ನಿವೃತ್ತ ಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ‘ವೃಂದ ಮತ್ತು ನೇಮಕಾತಿ ಸಮಿತಿ’ ರಚನೆಯಾಗಿದೆ. ಈ ಸಮಿತಿಯು ಇಲಾಖೆಯ ಆಡಳಿತಾತ್ಮಕ ಮತ್ತು ನೇಮಕಾತಿ ಚೌಕಟ್ಟನ್ನು ಮರುಪರಿಶೀಲಿಸಲಿದೆ. ಪೊಲೀಸ್ ಇಲಾಖೆಯ ವೃಂದ ರಚನೆ, ಮಂಜೂರಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವರ್ಗೀಕರಣ, ನೇಮಕಾತಿ ನಿಯಮಾವಳಿಗಳು, ಸಿಬ್ಬಂದಿಯ ಬಡ್ತಿ ವ್ಯವಸ್ಥೆ, ವೃತ್ತಿಜೀವನ ಪ್ರಗತಿ, ಮೀಸಲಾತಿ ನಿಯಮಗಳ ಅನುಷ್ಠಾನ, ತರಬೇತಿ ವಿಧಾನಗಳು ಮತ್ತು ಭವಿಷ್ಯದಲ್ಲಿ ಇಲಾಖೆಗೆ ಅಗತ್ಯವಿರುವ ಮಾನವಸಂಪನ್ಮೂಲದ ಅವಶ್ಯಕತೆಗಳನ್ನು ಈ ಸಮಿತಿ ಪರಾಮರ್ಶಿಸಲಿದೆ” ಎಂದು ಖರ್ಗೆ ತಿಳಿಸಿದ್ದಾರೆ.

“ಈ ಮೂರೂ ಸಮಿತಿಗಳು ಮುಂಬರುವ ಎರಡು ತಿಂಗಳ ಒಳಗಾಗಿ ತಮ್ಮ ಸುದೀರ್ಘ ಅಧ್ಯಯನದ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಿವೆ. ಈ ಮೂಲಕ ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ, ಪಾರದರ್ಶಕವಾದ ಹಾಗೂ ಭವಿಷ್ಯದ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಜ್ಜಾದ ಬಲವಾದ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸಲು ಸಮಗ್ರ ನೀಲನಕ್ಷೆ ಸಿಗಲಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ʼಈದಿನʼ ವರದಿ ಫಲಶೃತಿ : ದುರಸ್ತಿಯಾದ ಶುದ್ಧ ಕುಡಿಯುವ ನೀರಿನ ಘಟಕ

ಔರಾದ್‌ ತಾಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯತ್‌ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...

ಪ್ರಚೋದನಕಾರಿ ಭಾಷಣದಿಂದ ಹಲ್ಲೆಯವರೆಗೆ: ಪರ್ವೇಶ್ ವರ್ಮಾ ಎಂಬ ಪರಮ ದುರಹಂಕಾರಿಯ ಕತೆ

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಆದರೆ, ದೆಹಲಿಯ ಲೋಕೋಪಯೋಗಿ ಸಚಿವ ಪರ್ವೇಶ್...

ಬಾಗಲಕೋಟೆ | ಸರ್ಕಾರಿ ನೌಕರರ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನ

ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಗಮನಾರ್ಹ ಸೇವೆ...