ಪಶ್ಚಿಮ ಬಂಗಾಳ ಚುನಾವಣೆ : ʼಪಾಕಿಸ್ತಾನ ಅದೆಷ್ಟು ಹೋಳಾಗುವುದೋʼ ಹೇಳಿಕೆ ಮತ್ತು ರಾಜಕೀಯ  

Date:

ಭಾರತದ ಆಂತರಿಕ ಭದ್ರತೆ ಮತ್ತು ಪ್ರಾದೇಶಿಕ ಅಖಂಡತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಮೇಲೆ ದಾಳಿ ನಡೆಸುವ ಕುರಿತು ಪಾಕಿಸ್ತಾನದ ಪ್ರಚೋದನಾಕಾರಿ ಹೇಳಿಕೆಗಳಿಗೆ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

​ರಾಜನಾಥ್ ಸಿಂಗ್1971ರ ಯುದ್ಧವನ್ನು ಸ್ಮರಿಸುತ್ತಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. “ಹಿಂದೆ ಭಾರತ ಪಾಕಿಸ್ತಾನವನ್ನು ಎರಡು ಹೋಳು ಮಾಡಿತ್ತು (ಬಾಂಗ್ಲಾದೇಶದ ಉದಯ). ಅಂದು ಪಾಕಿಸ್ತಾನಕ್ಕೆ ಭಾರತದ ಶಕ್ತಿ ಏನೆಂಬುದು ಮನವರಿಕೆಯಾಗಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಸಾಹಸಕ್ಕೆ ಕೈಹಾಕಿದರೆ ಪರಿಣಾಮ ಭೀಕರವಾಗಿರುತ್ತದೆ” ಎಂದು ಅವರು ಗುಡುಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

​”ಪಶ್ಚಿಮ ಬಂಗಾಳದ ಮೇಲೆ ಕಣ್ಣು ಹಾಕುವ ಧೈರ್ಯವನ್ನು ಪಾಕಿಸ್ತಾನ ಮಾಡಬಾರದು. ಭಾರತದ ಒಂದಿಂಚು ಭೂಮಿಯ ಮೇಲೆ ದಾಳಿಯಾದರೂ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಎರಡು ಹೋಳಾಗಿದ್ದ ಪಾಕಿಸ್ತಾನ, ಈ ಬಾರಿ ಪಶ್ಚಿಮ ಬಂಗಾಳದ ಮೇಲೆ ಕೆಟ್ಟ ದೃಷ್ಟಿ ಬೀರಿದರೆ ಅದೆಷ್ಟು ಹೋಳುಗಳಾಗಿ ಛಿದ್ರವಾಗುವುದೋ ಆ ಭಗವಂತನೇ ಬಲ್ಲ,” ಎನ್ನುವ ಮೂಲಕ ಪಾಕಿಸ್ತಾನದ ಅಸ್ತಿತ್ವಕ್ಕೇ ಧಕ್ಕೆ ಬರಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಅಮೆರಿಕದ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಇರಾನ್ ಸಡ್ಡು: ವಾಷಿಂಗ್ಟನ್ ಮುಂದಿಟ್ಟ 10 ಕಠಿಣ ಹಕ್ಕೊತ್ತಾಯಗಳು

​ಮಾತ್ರವಲ್ಲದೇ, ಭಾರತೀಯ ಸೇನೆಯು ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಯಾವುದೇ ರೀತಿಯ ಸವಾಲನ್ನು ಎದುರಿಸಲು ಸಜ್ಜಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂಗ್‌ ಹೇಳಿಕೆಯ ಹಿಂದೆ ರಾಜಕೀಯ?

ಪಾಕಿಸ್ಥಾನದ ಬೆದರಿಕೆಗೆ ಮೋದಿ ತುಟಿ ಬಿಚ್ಚುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದರು. ಅದಾದ ಬಳಿಕ ಈಗ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣಾ ತಂತ್ರದ ಭಾಗವೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಚುನಾವಣೆಗಳ ಸಮಯದಲ್ಲಿ ಅಥವಾ ರಾಜಕೀಯವಾಗಿ ಹಿನ್ನಡೆಯಾದಾಗ ‘ಪಾಕಿಸ್ತಾನ’ ಮತ್ತು ‘ರಾಷ್ಟ್ರೀಯ ಭದ್ರತೆ’ಯ ವಿಚಾರಗಳನ್ನು ಮುನ್ನೆಲೆಗೆ ತಂದು ಮತದಾರರ ಭಾವನೆಗಳನ್ನು ಸೆಳೆಯುವುದು ಬಿಜೆಪಿಯ ಒಂದು ತಂತ್ರ ಎಂದು ಆಗಾಗ್ಗೆ ಟೀಕೆಗಳು ಕೇಳಿ ಬರುತ್ತವೆ. ಈ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು, ಬಂಗಾಳದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ, ಅಲ್ಲಿನ ಜನರ ದೇಶಪ್ರೇಮ ಭಾವನೆಯನ್ನು ಜಾಗೃತಗೊಳಿಸುವ ಮೂಲಕ ರಾಜಕೀಯ ಲಾಭ ಪಡೆಯುವುದು ಇದರ ಹಿಂದಿನ ಉದ್ದೇಶವಿದೆ ಎಂಬ ಚರ್ಚೆಗೆ ಕಾರಣವಾಗಿದೆ.

​ಗಮನ ಬೇರೆಡೆಗೆ ಸೆಳೆಯುವ ಯತ್ನ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣಕ್ಕೆ ಎಲ್‌ಪಿಜಿ ಬಿಕ್ಕಟ್ಟು ದೇಶದೆಲ್ಲೆಡೆ ಇದೆ. ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ, ರಾಜತಾಂತ್ರಿಕ ವೈಫಲ್ಯಗಳಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಇಂತಹ ತೀಕ್ಷ್ಣ ಹೇಳಿಕೆಗಳನ್ನು ರಾಜನಾಥ್‌ ಸಿಂಗ್‌ ಕೊಟ್ಟಿದ್ದಾರೆಂದು ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಪ್ರತಿಯಾಗಿ ರಕ್ಷಣಾ ಸಚಿವರಾಗಿ ದೇಶದ ಗಡಿಗಳ ರಕ್ಷಣೆ ಮತ್ತು ಶತ್ರು ರಾಷ್ಟ್ರಗಳ ಬೆದರಿಕೆಗೆ ಪ್ರತ್ಯುತ್ತರ ನೀಡುವುದು ಅವರ ಕರ್ತವ್ಯ. ಇದನ್ನು ರಾಜಕೀಯ ಲಾಭಕ್ಕಾಗಿ ನೀಡಿದ ಹೇಳಿಕೆ ಎನ್ನುವ ಬದಲು ‘ರಾಷ್ಟ್ರೀಯ ಭದ್ರತೆಯ ನಿಲುವು’ ಎಂದು ಬಿಜೆಪಿ ಬೆಂಬಲಿಗರು ವಾದಿಸುತ್ತಾರೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಕೋರ್ಟ್‌ನ ಕ್ಷಮಿಸುವ ಗುಣದಿಂದ ದೇಶದಲ್ಲಿ ಅಪರಾಧ ಕೃತ್ಯ ಹೆಚ್ಚಳ: ಜಸ್ಟಿಸ್ ದೀಪಾಂಕರ್ ದತ್ತಾ

ಸುಪ್ರೀಂ ಕೋರ್ಟ್‌ನ ಕ್ಷಮಿಸುವ ಮತ್ತು ದಯೆ ತೋರುವ ಪ್ರವೃತ್ತಿಯಿಂದಾಗಿಯೇ ಇಂದು ದೇಶದಲ್ಲಿ...

ಅನರ್ಹತೆ ನೋಟಿಸ್: ಲೋಕಸಭಾ ಸ್ಪೀಕರ್ ಬಳಿ ಮತ್ತೆ 15 ದಿನ ಕಾಲಾವಕಾಶ ಕೋರಿದ ಟಿಎಂಸಿ ಬಂಡಾಯ ಸಂಸದರು

ಪಕ್ಷಾಂತರ ನಿರೋಧಕ ಕಾಯ್ದೆಯಡಿ ಎದುರಿಸುತ್ತಿರುವ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ...

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...